ನವದೆಹಲಿ:ಪಿಎಂ ಕೇಎರ್ಸ್ ನಿಧಿಯಲ್ಲಿ ಸಂಗ್ರಹವಾಗಿರುವ ಹಣದಲ್ಲಿ 3,100 ಕೋಟಿ ರೂಪಾಯಿಯನ್ನು ವೆಂಟಿಲೇಟರ್ ಖರೀದಿ ಹಾಗೂ ವಲಸೆ ಕಾರ್ವಿುಕರ ಕಲ್ಯಾಣಕ್ಕೆ ಬಿಡುಗಡೆ ಮಾಡಲಾಗಿದೆ. ವೆಂಟಿಲೇಟರ್ ಖರೀದಿಗೆ 2,000 ಕೋಟಿ ರೂ., ವಲಸೆ ಕಾರ್ವಿುಕರ ಕಲ್ಯಾಣಕ್ಕೆ 1,000 ಕೋಟಿ ರೂ. ನೀಡಲಾಗುವುದು.
ಇದನ್ನೂ ಓದಿ:ಇಂದಿನ ಘೋಷಣೆ ತಾತ್ಕಾಲಿಕವಾಗಿ ಪರಿಣಾಮಕಾರಿ- ತಜ್ಞರ ಮಾತು
ಭಾರತದಲ್ಲಿ ಕೊರೊನಾ ಔಷಧ ತಯಾರಿಕೆಗೆ ಪ್ರೋತ್ಸಾಹಿಸಲು 100 ಕೋಟಿ ರೂ. ನೀಡಲಾಗುವುದು ಎಂದು ತಿಳಿಸಲಾಗಿದೆ. 50,000 ಸ್ವದೇಶಿ ವೆಂಟಿಲೇಟರ್​ಗಳನ್ನು ಖರೀದಿಸಲಾಗುವುದು. ವಲಸಿಗರಿಗೆಂದು ನೀಡಲಾಗುತ್ತಿರುವ ನಿಧಿಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ಹಂಚಲಾಗುವುದು. ರಾಜ್ಯ ಸರ್ಕಾರಗಳು ಆ ಹಣವನ್ನು ಜಿಲ್ಲಾಧಿಕಾರಿಗಳು ಮತ್ತು ಪಾಲಿಕೆ ಅಧಿಕಾರಿಗಳಿಗೆ ನೀಡಬೇಕು. ಆ ಹಣವನ್ನು ವಲಸಿಗರ ಆಹಾರ, ವಸತಿ, ವೈದ್ಯಕೀಯ ಸೇವೆ ಮತ್ತು ಸ್ಥಳಾಂತರಕ್ಕೆ ಬಳಸಿಕೊಳ್ಳಬೇಕು. ಲಸಿಕೆ ತಯಾರಿಕೆಗೆ ಮೀಸಲಿಡಲಾಗುತ್ತಿರುವ ಹಣವನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಖರ್ಚು ಮಾಡಲಾಗುವುದು ಎಂದು ಹೇಳಲಾಗಿದೆ.
ಇದನ್ನೂ ಓದಿ:ಪೇದೆ ಕಿವಿ ಕಚ್ಚಿದ ಶಿಕ್ಷಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
