ಮುಂಬೈ:ನ್ಯಾಚುರಲ್ಸ್ ಐಸ್ ಕ್ರೀಮ್ ಸಂಸ್ಥಾಪಕ ರಘುನಂದನ್ ಕಾಮತ್ (70) ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವು ಮಾರಾಟಗಾರನ ಮಗನಾಗಿ ಜನಿಸಿದ ಕಾಮತ್ ಅವರು ನ್ಯಾಚುರಲ್ಸ್ ಎಂಬ ಐಸ್ ಕ್ರೀಮ್ ಪಾರ್ಲರ್ ಸ್ಥಾಪಿಸಿದರು. ಈಗ ಅದು 400 ಕೋಟಿ ರೂಪಾಯಿಯ ಕಂಪನಿಯಾಗಿ ರೂಪುಗೊಂಡಿದೆ. ಪ್ರೀತಿಯಿಂದ ಅವರನ್ನು ‘ಭಾರತದ ಐಸ್ ಕ್ರೀಮ್ ಮ್ಯಾನ್’ ಎಂದು ಸ್ಮರಿಸಲಾಗುತ್ತದೆ.
ನಮ್ಮ ಪೋಷಕ ಮತ್ತು ನ್ಯಾಚುರಲ್ಸ್ ಐಸ್ ಕ್ರೀಮ್ ಸಂಸ್ಥಾಪಕ ರಘುನಂದನ್ ಕಾಮತ್ ಅವರ ನಿಧನ ನಿಜಕ್ಕೂ ನಮಗೆ ತುಂಬಾ ದುಃಖಕರ ಸಂಗತಿ ಎಂದು ಕಂಪನಿಯು ಎಕ್ಸ್​ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ವ್ಯಕ್ತಪಡಿಸಿದೆ. ಕಾಮತ್ ಅವರು ಪತ್ನಿ ಹಾಗೂ ನ್ಯಾಚುರಲ್ಸ್ ನಿರ್ದೇಶಕ ಸಿದ್ದಾಂತ್ ಸೇರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಕಾಮತ್ ಅವರು ಕರ್ನಾಟಕದ ಮಂಗಳೂರಿನ ಹಳ್ಳಿಯೊಂದರಲ್ಲಿ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವಲ್ಲಿ ತಮ್ಮ ತಂದೆಗೆ ಸಹಾಯ ಮಾಡುತ್ತಾ ಬೆಳೆದರು. 14ನೇ ವಯಸ್ಸಿನಲ್ಲಿ ಅಧ್ಯಯನ ತೊರೆದ ನಂತರ ಮಂಗಳೂರಿನಿಂದ ರೈಲು ಹತ್ತಿ ಮುಂಬೈಗೆ ಬಂದರು. ತಮ್ಮ ಸಹೋದರನ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡಿದರು. ನಂತರ ಅವರಿಗೊಂದು ಆಲೋಚನೆ ಹೊಳೆಯಿತು. ಐಸ್‌ಕ್ರೀಮ್‌ಗಳು ಹಣ್ಣಿನ ರುಚಿ ಹೊಂದಿರುತ್ತವೆ. ಇದರ ಬದಲಾಗಿ, ಐಸ್​ಕ್ರೀಮ್​ಗಳಲ್ಲಿ ನಿಜವಾದ ಹಣ್ಣು ಇದ್ದರೆ ಹೇಗೆ ಎಂಬ ಆಲೋಚನೆ ಬಂದಿತು. ಆದರೆ, ನೈಜ ಹಣ್ಣಿನ ಐಸ್​ಕ್ರೀಮ್​ ಅನ್ನು ಗ್ರಾಹಕರು ಸೇವಿಸುತ್ತಾರೋ ಇಲ್ಲವೋ ಎಂಬ ಆತಂಕ ಅವರಲ್ಲಿ ಮೂಡಿತು. ಹೀಗಾಗಿ ಅವರು ಪಾವ್-ಭಾಜಿಯನ್ನು ಮುಖ್ಯ ಭಕ್ಷ್ಯವಾಗಿ ಮತ್ತು ಹಣ್ಣಿನ ಐಸ್ ಕ್ರೀಮ್ ಅನ್ನು ಅದರೊಂದಿಗೆ ಬಡಿಸುವ ಮೂಲಕ ತಮ್ಮ ವ್ಯವಹಾರ ಪ್ರಾರಂಭಿಸಿದರು.
ಕಾಮತ್ ಅವರು ಮೊದಲ ಐಸ್ ಕ್ರೀಮ್ ಪಾರ್ಲರ್ ಅನ್ನು 1984ರಲ್ಲಿ ಮುಂಬೈನ ಜುಹುದಲ್ಲಿ ಪ್ರಾರಂಭಿಸಿದರು, ಆರಂಭಿಕ ಮೆನು 12 ಫ್ಲೇವರ್​ಗಳನ್ನು ಹೊಂದಿತ್ತು. ನ್ಯಾಚುರಲ್ಸ್ ಐಸ್-ಕ್ರೀಮ್ 2020 ರ ವೇಳೆಗೆ ರಾಷ್ಟ್ರವ್ಯಾಪಿಯಾಗಿ 135 ಸ್ಥಳಗಳಿಗೆ ವಿಸ್ತರಿಸಿತ್ತು. ಕೃತಕ ಸುವಾಸನೆ ಇಲ್ಲದೆ ನೈಸರ್ಗಿಕ ಪದಾರ್ಥಗಳಿಂದ ಐಸ್​ ಕ್ರೀಂ ತಯಾರಿಸುವುದು ಈ ಕಂಪನಿಯ ಹೆಗ್ಗಳಿಕೆಯಾಗಿದೆ.

ಅಪ್ಪರ್​ ಸರ್ಕ್ಯೂಟ್​ ಹಿಟ್​ ಆದ ಷೇರುಗಳು: ಮಂಗಳವಾರವೂ ಈ ಸ್ಟಾಕ್​ಗಳಿಗೆ ಬೇಡಿಕೆ, ದರ ಏರಿಕೆ

ಸೈಲಂಟ್​ ಕಿಲ್ಲರ್​ ಕ್ಯಾಲ್ಸಿಯಂ ಕಾರ್ಬೈಡ್: ಹಣ್ಣು ಮಾಗಿಸಲು ಬಳಸುವ ಈ ಪದಾರ್ಥ ಕುರಿತು ಎಫ್‌ಎಸ್‌ಎಸ್‌ಎಐ ನೀಡಿದ ಎಚ್ಚರಿಕೆಯೇನು?

ಸಣ್ಣ ಷೇರು ದೊಡ್ಡ ಲಾಭ: ಸ್ಟಾಕ್​ ಬೆಲೆ ರೂ 1.58 ಮಾತ್ರ; ನೀಡಿದ ಲಾಭ ಭರ್ಜರಿ 3400%

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + one =
Remember me
