ಮ್ಹೋವ್​ :ಮಧ್ಯಪ್ರದೇಶದ ಇಂದೋರ್​ ಜಿಲ್ಲೆಯ ಮ್ಹೋವ್ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್)ಗೆ ಸಂಬಂಧಿಸಿದ 50 ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇದುವರೆಗೆ 7 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಇಂದೋರ್​ನ ಕಲೆಕ್ಟರ್​ ಮನೀಶ್ ಸಿಂಗ್ ಶನಿವಾರ ತಿಳಿಸಿದ್ದಾರೆ.
ಈ ಹಗರಣದ ದೊಡ್ಡ ಮಟ್ಟದ್ದಾಗಿದ್ದು, 100 ಕೋಟಿ ರೂಪಾಯಿಗೂ ಅಧಿಕ ಆಗಬಹುದು ಎಂಬ ಸುಳಿವು ನೀಡಿದ ಅವರು, ತನಿಖೆ ಪ್ರಗತಿಯಲ್ಲಿದೆ. ಆಗಸ್ಟ್ 17ರಿಂದ ಈಚೆಗೆ ಐದು ಎಫ್​ಐಆರ್ ದಾಖಲಾಗಿವೆ. ಏಳು ಜನರ ಪೈಕಿ ಒಬ್ಬಾತ ಮೋಹನ್ ಅಗರವಾಲ್​, ಆತನ ಪುತ್ರರಾದ ಮೋಹಿತ್ ಮತ್ತು ತರುಣ್​ ಎಂಬುವವರಿದ್ದಾರೆ. ಇವರಲ್ಲದೆ ವ್ಯಾಪಾರಿಗಳಾದ ಆಯುಷ್ ಅಗರ್​ವಾಲ್​, ಲೋಕೇಶ್ ಅಗರವಾಲ್ ಕೂಡ ಸೇರಿದ್ದಾರೆ.
ಇದನ್ನೂ ಓದಿ:ಸಿರಗುಪ್ಪದಲ್ಲಿ ಗ್ರಾಮಸ್ಥರ ಪ್ರತಿಭಟನೆಗೆ ಮಣಿದು ಮದ್ಯದಂಗಡಿ ಮಚ್ಚಿಸಿದ ಅಬಕಾರಿ ಇಲಾಖೆ
ಅಗತ್ಯ ವಸ್ತು ಕಾಯ್ದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್​ಗಳ ಪ್ರಕಾರ ಇವರ ವಿರುದ್ಧ ಪ್ರಕರಣ ದಾಖಲಾಗಿವೆ. ಅವರು ಫಲಾನುಭವಿಗಳಿಗೆ ಕಡಿಮೆ ಪ್ರಮಾಣದ ಅಕ್ಕಿ, ಗೋಧಿ, ಸೀಮೆಎಣ್ಣೆ ಕೊಟ್ಟು, ಉಳಿದವನ್ನು ಒಂದೆಡೆ ದಾಸ್ತಾನು ಮಾಡುತ್ತಿದ್ದರು. ಬಳಿಕ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡುತ್ತಿದ್ದರು. ದಾಸ್ತಾನು ಮಾಡುವುದಕ್ಕೆ ಮೋಹನ್ ಅಗರವಾಲ್ ಅವರ ಗೋಡೌನ್​ ಬಳಕೆಯಾಗಿದೆ. ಅಲ್ಲಿಂದ 635 ಬ್ಯಾಗ್ ಪಡಿತರ ಅಕ್ಕಿ ಮತ್ತು ಇತರೆ ಪಡಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. (ಏಜೆನ್ಸೀಸ್)
ಕರಾಚಿಯಲ್ಲಿ ಜನಾಂಗೀಯ ಹಿಂಸಾಚಾರದ ಭೀತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
