ತಿರುವನಂತಪುರ:ಹೆಲ್ಮೆಟ್​ ಧರಿಸಿಲ್ಲ ಅಂತ ಹೇಳಿ ಆಟೋ ಡ್ರೈವರ್​ ಒಬ್ಬರಿಗೆ 500 ರೂ. ದಂಡ ವಿಧಿಸಿರುವ ವಿಚಿತ್ರ ಘಟನೆ ಕೇರಳದ ತಿರುವನಂತಪುರದ ಬಲರಾಮಪುರದಲ್ಲಿ ನಡೆದಿದೆ. ಈ ಪ್ರಕರದಿಂದ ಅಸಮಾಧಾನಗೊಂಡಿರುವ ಆಟೋ ಚಾಲಕ ಇದೀಗ ಹೆಲ್ಮೆಟ್​ ಧರಿಸಿ ಡ್ರೈವಿಂಗ್​ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.
ಆಟೋ ನಂಬರ್​ KL20R 6843 ವಿರುದ್ಧ ಪೊಲೀಸರು ಈ ವಿಚಿತ್ರ ಕ್ರಮ ತೆಗೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದ್ದಕ್ಕೆ ಸಂಚಾರಿ ಪೊಲೀಸರು ಸಫರುಲ್ಲಾಗೆ ಕಳೆದ ವರ್ಷ ಡಿಸೆಂಬರ್ 3 ರಂದು 500 ರೂಪಾಯಿ ದಂಡ ಪಾವತಿಸಲು ಚಲನ್ ನೀಡಿದ್ದರು. ಕ್ಯಾಮೆರಾ ಅಳವಡಿಸುವ ಮುನ್ನವೇ ಈ ಘಟನೆ ನಡೆದಿದ್ದು, ಪೊಲೀಸರ ಕಡೆಯಿಂದ ಸಣ್ಣ ತಪ್ಪಾಗಿರಬಹುದು ಅಂದುಕೊಂದು ಸಫರುಲ್ಲಾ ದಂಡ ಕಟ್ಟಿರಲಿಲ್ಲ.
ಇದನ್ನೂ ಓದಿ:ವ್ಯಕ್ತಿಯ ಮುಖ, ದೇಹಕ್ಕೆ ಮಲ ಸುರಿದು ವಿಕೃತಿ: ಅಮಾನವೀಯ ಕೃತ್ಯ ಎಸಗಿದ ಆರೋಪಿಯ ಬಂಧನ
ದಂಡ ಕಟ್ಟದಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸ್​ ನೋಟಿಸ್​ ಯಾವಾಗ ಬಂತೋ ಅದರಿಂದ ಆಘಾತಕ್ಕೆ ಒಳಗಾದ ಸಫರುಲ್ಲಾ, ಇದೀಗ ಹೆಲ್ಮೆಟ್​ ಧರಿಸಿ ಹೆಲ್ಮೆಟ್ ಧರಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಅಲ್ಲದೆ, ಪೊಲೀಸರು ಆಟೋ ಚಾಲಕರ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರು ನೀಡಿದ್ದಾರೆ.
ಆಟೋ ಬಲರಾಮಪುರಂ ಮೂಲದ ಶೇಮೀರ್ ಅವರದ್ದು. ಈ ನಡುವೆ ಬಲರಾಮಪುರಂ ಪೊಲೀಸರು ಚಲನ್‌ ನೀಡಿಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಟ್ರಾಫಿಕ್ ಘಟಕದಿಂದ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದು ಕ್ಲೆರಿಕಲ್ ಮಿಸ್ಟೇಕ್​ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ನಿಮ್ಮ ಕಣ್ಣಿಗೊಂದು ಸವಾಲ್​: ಎರಡರಲ್ಲಿ ಯಾವ ಕುದುರೆಗೆ ಸೇರಿದ ತಲೆ ಎಂಬುದನ್ನು ಗೆಸ್​ ಮಾಡುವಿರಾ?

ಟ್ವಿಟರ್​ ಬರ್ಡ್​ಗೆ ವಿದಾಯ: ಲೋಗೋ ಬದಲಾಯಿಸಿ ರೀಬ್ರ್ಯಾಂಡ್​ ಮಾಡಲು ಎಲನ್​ ಮಸ್ಕ್​ ಪ್ಲ್ಯಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
