ಅನೇಕಚಲನಚಿತ್ರಗಳಲ್ಲಿ ಆಲದ ಮರವನ್ನು ದೆವ್ವಗಳ ವಾಸಸ್ಥಾನವೆಂದು ತೋರಿಸಲಾಗಿದೆ. ದೆವ್ವಗಳು ಮರದ ಕಾಂಡಗಳಲ್ಲಿ ವಾಸಿಸುತ್ತವೆ ಎಂದು ಕಥೆಗಳು ಹೇಳುತ್ತವೆ. ಗ್ರಾಮದ ಕೊನೆಯಲ್ಲಿರುವ ಆಲದ ಮರವನ್ನು ದಾಟಲು ಅನೇಕರು ಭಯದಿಂದ ನಡುಗುತ್ತಾರೆ. ಅಲ್ಲದೆ, ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು ಮರೆಮಾಡಲು ಆಲದ ಮರದ ಕಾಂಡವು ಉತ್ತಮ ಆಯ್ಕೆಯಾಗಿದೆ ಎಂದು ನಾವು ಕತೆಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ, ಅಂತಹ ಕಥೆ ಇದೀಗ ನಿಜವಾಗಿದೆ. ಆಲದ ಮರದ ಬುಡದಲ್ಲಿ 64 ಲಕ್ಷ ರೂಪಾಯಿ ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಆ ಹಣ ಅಲ್ಲಿಗೆ ಹೇಗೆ ಬಂತು?ಯಾರು ಹಾಕಿದರು? ಎಂದು ತಿಳಿಯಬೇಕಾದರೆ ಈ ಸುದ್ದಿ ಓದಿ.
ಅಂದಹಾಗೆ ಈ ಘಟನೆ ಗುರುವಾರ (ಏಪ್ರಿಲ್ 18) ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಓಂಗೋಲ್ ಜಿಲ್ಲೆಯಲ್ಲಿ ನಡೆದಿದೆ. ಅಷ್ಟಕ್ಕೂ ಅಷ್ಟೊಂದು ಹಣ ಅಲ್ಲಿಗೆ ಹೇಗೆ ಬಂತು? ಇದು ಮಾಯೆಯೋ ಅಥವಾ ಮಂತ್ರವೋ? ಇದ್ಯಾವುದು ಅಲ್ಲ, ವ್ಯಕ್ತಿಯೊಬ್ಬ ಇಷ್ಟು ದೊಡ್ಡ ಮೊತ್ತವನ್ನು ಕದ್ದಿದ್ದಾನೆ. ಬಳಿಕ ಪೊಲೀಸರಿಗೆ ಹೆದರಿ ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಗುರುವಾರ ಸಿಎಂಎಸ್ ಸೆಕ್ಯುರಿಟಿ ಸಂಸ್ಥೆಯ ಸಿಬ್ಬಂದಿ ವಿವಿಧ ಎಟಿಎಂ ಯಂತ್ರಗಳಲ್ಲಿ ಹಣ ತುಂಬಲು 68 ಲಕ್ಷ ರೂ.ಗಳೊಂದಿಗೆ ಓಂಗೋಲ್‌ನಿಂದ ತೆರಳಿದ್ದರು. ಚೀಮಕುರ್ತಿ, ಮರ್ರಿಚೆಟ್ಲಪಾಲೆಂ, ದೊಡ್ಡವರಂ, ಗುಂಡ್ಲಪಲ್ಲಿ ಮತ್ತು ಮಡ್ಡಿಪಾಡು ಪ್ರದೇಶಗಳಲ್ಲಿ ಇರುವ ವಿವಿಧ ಎಟಿಎಂ ಯಂತ್ರಗಳಿಗೆ ತುಂಬಲು ಈ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಒಂಗೋಲ್‌ನ ಕರ್ನೂಲು ರಸ್ತೆಯಲ್ಲಿರುವ ಇಂಡಿಯನ್ ಪೆಟ್ರೋಲ್ ಬಂಕ್‌ ಬಳಿ ವಾಹನ ನಿಲ್ಲಿಸಿ, ಊಟ ಮಾಡಲು ಸಿಬ್ಬಂದಿ ತೆರಳಿದರು. ಇದನ್ನು ಗಮನಿಸಿದ ಖದೀಮನೊಬ್ಬ ಮುಖಕ್ಕೆ ಮಾಸ್ಕ್ ಹಾಕಿಕೊಂಡು ವಾಹನದ ಬೀಗ ಒಡೆದು ಅದರಲ್ಲಿದ್ದ 64 ಲಕ್ಷ ರೂ. ಕಳ್ಳತನ ಮಾಡಿದ್ದಾನೆ.
ಊಟ ಮುಗಿಸಿದ ಸಿಬ್ಬಂದಿ ವಾಹನದ ಬಳಿ ಬಂದು ನೋಡಿದಾಗ ಅದರ ಬಾಗಿಲು ತೆರೆದಿತ್ತು. ಅನುಮಾನಗೊಂಡು ಒಳಗಡೆ ಪರಿಶೀಲಿಸಿದಾಗ ಹಣ ಕಳ್ಳತನವಾಗಿರುವುದು ಪತ್ತೆಯಾಗಿದೆ. ಪರಿಶೀಲಿಸಿದಾಗ ಅವರು ತಂದಿದ್ದ 68 ಲಕ್ಷದಲ್ಲಿ 64 ಲಕ್ಷ ರೂಪಾಯಿ ನಾಪತ್ತೆಯಾಗಿದೆ. ಕೂಡಲೇ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅಧಿಕಾರಿಗಳು ತಡಮಾಡದೆ ಸ್ಥಳಕ್ಕೆ ಧಾವಿಸಿ ಪೆಟ್ರೋಲ್ ಬಂಕ್ ಹಾಗೂ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅದರಲ್ಲಿ ಮಾಸ್ಕ್ ಹಾಕಿಕೊಂಡಿದ್ದ ವ್ಯಕ್ತಿಯೊಬ್ಬ ವಾಹನದ ಬೀಗ ಒಡೆದು ಕಳ್ಳತನ ಮಾಡಿದ್ದಾನೆ. ಬಳಿಕ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿ, ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಿದರು.
ಆರೋಪಿಯ ಮಾಹಿತಿ ತಿಳಿದ ಪೊಲೀಸರು ಒಂದು ಕ್ಷಣ ಶಾಕ್​ ಆಗಿದ್ದಾರೆ. ಆರೋಪಿ ಈ ಹಿಂದೆ ಸಿಎಂಎಸ್ ಸಂಸ್ಥೆಯಲ್ಲಿ ಕೆಲಸ ಮಾಡಿರುವ ಸಂಗತಿ ತಿಳಿದುಬಂದಿದೆ. ಆರೋಪಿಯನ್ನು ಮಹೇಶ್ ಎಂದು ಗುರುತಿಸಲಾಗಿದೆ. ಆತ ಸಿಎಂಎಸ್​ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಕೆಲವು ವರ್ಷಗಳ ನಂತರ ಕೆಲಸ ತ್ಯಜಿಸಿದರು. ನಗದನ್ನು ಕದ್ದ ಮಹೇಶ್, ಸಂತನೂತಲಪಾಡು ಮಂಡಲದ ಕಾಮೆಪಲ್ಲಿವಾರಿಪಾಲೆಂನಲ್ಲಿರುವ ತನ್ನ ಮನೆಯ ಸಮೀಪದ ದೊಡ್ಡ ಆಲದ ಮರದ ಬುಡದಲ್ಲಿ ಬಚ್ಚಿಟ್ಟಿದ್ದ. ಪೊಲೀಸರು ಮಹೇಶನ ಊರಿಗೆ ತಲುಪಿ ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದು ಮಾತ್ರವಲ್ಲದೆ ಹಣವನ್ನೂ ಪೊಲೀಸರಿಗೆ ಒಪ್ಪಿಸಿದ್ದಾನೆ.(ಏಜೆನ್ಸೀಸ್​)
ಒಂದು ಕಾಲದಲ್ಲಿ ಕನ್ನಡಿಗರ ಮನಗೆದ್ದಿದ್ದ ಸೌತ್​ ಬ್ಯೂಟಿ ರಾಶಿ ಈಗ ಹೇಗಿದ್ದಾರೆ ಗೊತ್ತಾ? ಫೋಟೋ ವೈರಲ್​

ಹರ್ಷಿಕಾ ಪೂಣಚ್ಚ ದಂಪತಿ ಮೇಲೆ ಅನ್ಯಕೋಮಿನ ಗುಂಪಿನಿಂದ ಹಲ್ಲೆ; ಸ್ಥಳದಲ್ಲಿದ್ದರು ಸಹಾಯಕ್ಕೆ ಬಾರದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + nineteen =
Remember me
