ವಿಶಾಖಪಟ್ಟಣಂ:ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಇಬ್ಬರು ಆರೋಪಿಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್​ಪೋಸ್ಟ್​ನಲ್ಲಿ ಪೊಲೀಸರು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ ಆರೋಪಿಗಳು ಅಂತಾರಾಜ್ಯ ದಂಧೆಕೋರರು ಎಂಬುದಾಗಿ ತಿಳಿದುಬಂದಿದೆ. ಅವರಿಬ್ಬರು ಛತ್ತೀಸ್​ಗಢದ ರಾಯ್ಪುರದಿಂದ ಆಂಧ್ರದ ವಿಶಾಖಪಟ್ಟಣಂ ಬರುವಾಗ ಮಾರ್ಗ ಮಧ್ಯೆಯೇ ಬಂಧಿಸಲಾಗಿದೆ.
ಖಚಿತ ಮಾಹಿತಿ ಮೇರೆಗೆ ಸುಂಕಿ ಔಟ್​ಪೋಸ್ಟ್​ನಲ್ಲಿ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ 500 ರೂ. ನೋಟಿನ ಕಂತೆಗಳ ಒಟ್ಟು 7.9 ಕೋಟಿ ರೂ. ನಕಲಿ ಹಣ ಪತ್ತೆಯಾಗಿದೆ.
ವಿಶಾಖಪಟ್ಟಣಂ: ಸುಮಾರು 7.9 ಕೋಟಿ ರೂ. ಮೌಲ್ಯದ ನಕಲಿ ಹಣ ಹೊಂದಿದ್ದ ಇಬ್ಬರು ಆರೋಪಿಗಳನ್ನು ಆಂಧ್ರ ಪ್ರದೇಶ-ಒಡಿಶಾ ಗಡಿಯ ಸುಂಕಿ ಔಟ್​ಪೋಸ್ಟ್​ನಲ್ಲಿ ಪೊಲೀಸರು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿದ್ದಾರೆ.#FakeCurrency#AndhraPradesh#Odisha#Police#AccusedArrestpic.twitter.com/ZdCeoAeLKx
— Vijayavani (@VVani4U)March 3, 2021

ಇದನ್ನೂ ಓದಿರಿ:ದೆಹಲಿಗೆ ಹೋಗ್ತೇನೆಂದು ಹೊರಟ ಸಚಿವ ರಮೇಶ್​ ಜಾರಕಿಹೊಳಿ ರಾತ್ರೋರಾತ್ರಿ ಹೋಗಿದ್ದು ಎಲ್ಲಿಗೆ..?
ಇನ್ನು ಆಂಧ್ರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಸಹ ಘೋಷಣೆಯಾಗಿದ್ದು, ಮಾರ್ಚ್​ 10ರಂದು ಮತದಾನ ನಡೆಯಲಿದೆ. ಇದರ ಬೆನ್ನಲ್ಲೇ ನಕಲಿ ಹಣ ಪತ್ತೆಯಾಗಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 489ಎ, 489ಬಿ, 489ಸಿ ಮತ್ತು 120ಬಿ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Fake Indian currency notes of Rs.500/- denomination with a total face value of ₹ 7 Crores and 90 Lakhs have been recovered from three persons, who are arrested with reference to#Pottangi_PScase no. 15 dt.02.03.2021 U/S 489A/489B/489C/120B IPC.@DGPOdisha@digswrkoraputpic.twitter.com/7EOKlkwS1j
— Koraput Police (@SPkoraput)March 2, 2021

ಆರೋಪಿಗಳು ಪೊಲೀಸ್​ ಕಸ್ಟಡಿಯಲ್ಲಿದ್ದು, ತನಿಖೆ ಆರಂಭವಾಗಿದೆ. ಇದೇ ವೇಳೆ ಆಂಧ್ರ, ಛತ್ತೀಸ್​ಗಢ ಮತ್ತು ಒಡಿಶಾ ಮೂರು ರಾಜ್ಯಗಳ ಪೊಲೀಸರು ತಂಡವೊಂದನ್ನು ರಚಿಸಿ ಗ್ಯಾಂಗ್​ನ ಉಳಿದ ಸದಸ್ಯರಿಗಾಗಿ ಬಲೆ ಬೀಸಿದೆ.(ಏಜೆನ್ಸೀಸ್​)
ತುರ್ತಪರಿಸ್ಥಿತಿ ಹೇರಿದ್ದು, ಆ ಸಂದರ್ಭದಲ್ಲಿ ನಡೆದಿದ್ದೆಲ್ಲ ತಪ್ಪೆಂದ ರಾಹುಲ್ ಗಾಂಧಿ

ಬಿಜೆಪಿ ಸಂಸದನ ಮಗನ ಮೇಲೆ ಗುಂಡಿನ ದಾಳಿ: ಪೊಲೀಸರ ಅನುಮಾನವೇ ಬೇರೆ!

ಲಿವ್​ಇನ್ ಸಂಬಂಧ ರೇಪ್ ಆದೀತೇ? ಸುಪ್ರೀಂ ಕೋರ್ಟ್ ಪ್ರಶ್ನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 2 =
Remember me
