ನವದೆಹಲಿ:ರಾಜ್ಯಸಭೆಯಲ್ಲಿ ಕೃಷಿ ಮಸೂದೆ ಅಂಗೀಕಾರದ ಸಂದರ್ಭದ ಘಟನಾವಳಿಗಳು ಮತ್ತೊಂದು ಹಂತ ತಲುಪಿದೆ. ಅಮಾನತು ಹಿಂಪಡೆಯಬೇಕು ಎಂದು ವಿಪಕ್ಷ ಸದಸ್ಯರು ಆಗ್ರಹಿಸುತ್ತಿದ್ದು, ಕಲಾಪ ಬಹಿಷ್ಕರಿಸುವ ಬೆದರಿಕೆ ಒಡ್ಡಿದ್ದಾರೆ. ಇದರ ಬೆನ್ನಿಗೇ, ಸದಸ್ಯರ ದುರ್ವರ್ತನೆ ಖಂಡಿಸಿ ರಾಜ್ಯಸಭೆಯ ಡೆಪ್ಯುಟಿ ಚೇರ್​ಮನ್ ಹರಿವಂಶ ನಾರಾಯಣ್ ಸಿಂಗ್ ಒಂದು ದಿನದ ನಿರಶನ ಪ್ರತಿಭಟನೆ ಘೋಷಿಸಿದ್ದಾರೆ.
ಬೆಳಗ್ಗೆ ಚಹಾ ಮತ್ತು ಲಘು ಉಪಾಹಾರದೊಂದಿಗೆ ಅಮಾನತುಗೊಂಡು ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರ ಬಳಿಗೆ ಹೋಗಿ ಉತ್ತಮ ನಡವಳಿಕೆ ತೋರಿದ್ದ ಉಪಾಧ್ಯಕ್ಷ ಹರಿವಂಶ ನಾರಾಯಣ್ ಸಿಂಗ್, ಇದೀಗ ಕಠಿಣ ನಿಲುವು ತಾಳಿದ್ದಾರೆ. ಸದಸ್ಯರ ದುರ್ವರ್ತನೆ ವಿಚಾರವಾಗಿ ರಾಜ್ಯಸಭೆ ಚೇರ್​ಮನ್​ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರವನ್ನೂ ಹರಿವಂಶ ನಾರಾಯಣ ಸಿಂಗ್ ಅವರು ಬರೆದಿದ್ದಾರೆ.
ಇದನ್ನೂ ಓದಿ:ನಿಮ್ಮ ವಸ್ತುಗಳು ಕಳೆದುಹೋಗಿವ್ಯಾ? ಇನ್ಮುಂದೆ ಮನೆಯಲ್ಲೇ ಕೂತು ಕಂಪ್ಲೇಟ್​ ಕೊಡ್ಬೋದು!
ಇದರಲ್ಲಿ ಅವರು, ಸೆಪ್ಟೆಂಬರ್ 20ರಂದು ರಾಜ್ಯಸಭಾಧ್ಯಕ್ಷರ ಪೀಠದಲ್ಲಿದ್ದಾಗ ಸದಸ್ಯರು ತೋರಿದ ದುರ್ವರ್ತನೆಯಿಂದಾಗಿ ಸದನ ಮತ್ತು ಪೀಠದ ಘನತೆಗೆ ಊಹಿಸಲಾಗದ ಧಕ್ಕೆಯಾಗಿದೆ. ಅದು ನನ್ನ ಎದುರು ನಡೆದಿರುವಂಥದ್ದು. ನನಗೆ ಅವಮಾನವಾಗುವಂತೆ ನಡೆದುಕೊಂಡ ಸದಸ್ಯರ ವರ್ತನೆಯನ್ನು ಸರಿಯಾದುದಲ್ಲ. ಸ್ವಶುದ್ಧೀಕರಣಕ್ಕಾಗಿ ತಾನು ನಾಳೆಯವರೆಗೆ ನಿರಶನ ಕೈಗೊಳ್ಳುತ್ತೇನೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್)
Deputy Chairman of#RajyaSabhaHarivansh Narayan Singh has announced that he will observe one day fast in protest of the unruly behaviour exhibited by the members on Sunday.
The development comes after the Deputy Chairman served tea to the agitating MPs, who have been suspended.pic.twitter.com/2nJYaPrbxs
— IANS (@ians_india)September 22, 2020

ದೆಹಲಿ ಹಿಂಸಾಚಾರ ಅನುಷ್ಠಾನಕ್ಕಾಗಿ 1.61 ಕೋಟಿ ರೂಪಾಯಿ ಐವರ ಖಾತೆಗೆ ಜಮೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 5 =
Remember me
