ಮುಂಬೈ:27 ವರ್ಷದ ಐಟಿ ಕಂಪನಿ ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್​ ಲಿಮಿಟೆಡ್​ (Dynacons Systems & Solutions Dynacons Systems and Solutions Ltd.) ಷೇರುಗಳ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಕೆ ಕಾಣುತ್ತಿದೆ. ಕಂಪನಿಯ ಷೇರುಗಳು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.
ಮಾರ್ಚ್ 27 ಮತ್ತು ಏಪ್ರಿಲ್ 19 ರ ನಡುವೆ ಕಂಪನಿಯ ಷೇರುಗಳ ಬೆಲೆ 782.40 ರೂ.ನಿಂದ 1435.70 ರೂಪಾಯಿಗೆ ಏರಿಕೆಯಾಯಿತು. ಅಂದರೆ, ಕೇವಲ 15 ವಹಿವಾಟು ಅವಧಿಗಳಲ್ಲಿ, ಶೇಕಡಾ 83.50 ರಷ್ಟು ಹೆಚ್ಚಳವಾಗುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಬೆಲೆ 340 ಪ್ರತಿಶತದಷ್ಟು ಹೆಚ್ಚಾಗಿದೆ.
ಆದರೆ, ಸೋಮವಾರದ ವಹಿವಾಟಿನಲ್ಲಿ ಕಂಪನಿಯ ಷೇರುಗಳ ಬೆಲೆ ಲಾಭದ ಬುಕಿಂಗ್‌ನಿಂದಾಗಿ ಕುಸಿಯಿತು. ಅಂದರೆ, ಲಾಭಕ್ಕಾಗಿ ಮಾರಾಟ ಮಾಡಿದ್ದರಿಂದ ಷೇರುಗಳ ಬೆಲೆ ಇಳಿಕೆಯಾಯಿತು. ಸೋಮವಾರ ಈ ಷೇರುಗಳ ಬೆಲೆ ಶೇ. 5.14ರಷ್ಟು ಕುಸಿದು 1366.90 ರೂಪಾಯಿ ತಲುಪಿತು. ಸೋಮವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಷೇರುಗಳ ಬೆಲೆ 1,467 ರೂ. ತಲುಪಿತ್ತು. ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಬೆಲೆ 1,468.80 ಇದೆ.
ಈ ಕಂಪನಿಯ ಷೇರುಗಳ ಬೆಲೆ ಏಪ್ರಿಲ್ 2020ರಲ್ಲಿ 17.75 ರೂ. ಇತ್ತು. ಅಲ್ಲಿಂದ ಇದುವರೆಗೆ ಈ ಕಂಪನಿಯ ಷೇರುಗಳ ಬೆಲೆ 7657 ಪ್ರತಿಶತದಷ್ಟು ಏರಿಕೆ ಕಂಡಿವೆ.
ಬ್ಯಾಂಕಿಂಗ್ ಪರಿಹಾರಗಳಿಗೆ ಸಂಬಂಧಿಸಿದ ಕೆಲಸಕ್ಕಾಗಿ ನಬಾರ್ಡ್ 233 ಕೋಟಿ ರೂಪಾಯಿಗಳ ವರ್ಕ್ ಆರ್ಡರ್ ನೀಡಿದೆ ಎಂದು ಏಪ್ರಿಲ್ 16 ರಂದು, ಡೈನಾಕಾನ್ಸ್ ಸಿಸ್ಟಮ್ಸ್ & ಸೊಲ್ಯೂಷನ್ಸ್ ಸ್ಟಾಕ್ ಮಾರುಕಟ್ಟೆಗಳಿಗೆ ತಿಳಿಸಿತ್ತು. ಇದಕ್ಕೂ ಮೊದಲು ಮಾರ್ಚ್‌ನಲ್ಲಿ ಎನ್‌ಪಿಸಿಐ 41.72 ಕೋಟಿ ರೂಪಾಯಿಗಳ ಕಾಮಗಾರಿ ಗುತ್ತಿಗೆಯನ್ನು ಈ ಕಂಪನಿಗೆ ನೀಡಿದೆ.
ಕಂಪನಿಯು ಫೆಬ್ರವರಿಯಲ್ಲಿ ಬಿಎಸ್‌ಎನ್‌ಎಲ್‌ನಿಂದ 90.02 ಕೋಟಿ ರೂಪಾಯಿ ಮೌಲ್ಯದ ವರ್ಕ್​ ಆರ್ಡರ್​ ಪಡೆದಿತ್ತು. ಇದಲ್ಲದೆ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಭಾರತ್ ಹೆವಿ ಎಲೆಕ್ಟ್ರಿಕಲ್ಸ್​ನಿಂದ ಕ್ರಮವಾಗಿ 214 ಕೋಟಿ ಹಾಗೂ 137 ಕೋಟಿ ರೂ.ಗಳ ಕಾಮಗಾರಿ ಆದೇಶ ಸ್ವೀಕರಿಸಿದೆ.

ರೂ. 404 ರಿಂದ 25ಕ್ಕೆ ಕುಸಿದ ಬ್ಯಾಂಕ್​ ಷೇರು ಬೆಲೆ: ಈಗ ಸ್ಟಾಕ್​ ದರ ಜಿಗಿತಕ್ಕಿವೆ ಈ 2 ಕಾರಣಗಳು..

ಪಾಲಕರೇ ಹುಷಾರು: ನೈಟ್ರೋಜನ್ ಹೊಗೆಯಾಡಿಸಿದ ಬಿಸ್ಕತ್ತು ಸೇವಿಸಿದ ಬಾಲಕ ಸತ್ತೆ ಹೋದ…

ರೂ. 18ರಿಂದ 5ಕ್ಕೆ ಕುಸಿದ ಪೆನ್ನಿ ಸ್ಟಾಕ್​: ಈಗ ಷೇರು ಗಗನಮುಖಿ, ವಿದೇಶಿ ಹೂಡಿಕೆದಾರರಿಂದ ಭಾರೀ ಖರೀದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
