ಕುಂಬಳೆ:ಕೇರಳದ ಐದು ದೇವಸ್ವಂ ಬೋರ್ಡ್​ಗಳಲ್ಲಿ ಒಂದಾಗಿ ರುವ ತಿರುವಾಂಕೂರು ದೇವಸ್ವಂ ಬೋರ್ಡ್(ಟಿಡಿಬಿ) ತನ್ನ ಅಧೀನದ 1,240 ದೇವಸ್ಥಾನಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಚಟುವಟಿಕೆಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ದೇವಾಲಯದ ಆವರಣದಲ್ಲಿ ಆರ್​ಎಸ್​ಎಸ್ ಶಾಖೆ, ಶಾರೀರಿಕ್ ಅಥವಾ ಪಥ ಸಂಚಲನ ನಡೆಸುವಂತಿಲ್ಲ. ನಿಷೇಧ ಉಲ್ಲಂಘಿಸಿ ಯಾವುದೇ ದೇವಾಲಯದಲ್ಲಿ ಆರ್​ಎಸ್​ಎಸ್ ಚಟುವಟಿಕೆ ನಡೆಯುತ್ತಿದ್ದರೆ, ಅದನ್ನು ತಕ್ಷಣ ತಡೆಯಲು ಸಿಬ್ಬಂದಿ ಕ್ರಮ ಕೈಗೊಳ್ಳಬೇಕು. ನೌಕರರು ವಿಫಲವಾದರೆ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಟಿಡಿಬಿ ಎಚ್ಚರಿಕೆ ನೀಡಿದೆ.
ಕೇರಳದ ಹಲವು ದೇವಸ್ಥಾನಗಳ ಆವರಣದಲ್ಲಿ ಆರ್​ಎಸ್​ಎಸ್ ಶಾಖೆಗಳು, ಕಾರ್ಯಕ್ರಮಗಳು ನಡೆಯುತ್ತಿದ್ದು, ದೇವಸ್ಥಾನಗಳ ಸಿಬ್ಬಂದಿ ಇದನ್ನು ಬೆಂಬಲಿಸುತ್ತಿರುವ ಹಿನ್ನೆಲೆಯಲ್ಲಿ ಟಿಡಿಬಿ ಈ ಆದೇಶ ಹೊರಡಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಬಿಡಿ ಅಧ್ಯಕ್ಷ ಎನ್.ವಾಸು, ರಾಜಕೀಯ ಉದ್ದೇಶಗಳಿಗೆ ದೇವಸ್ಥಾನದ ಜಾಗ ಬಳಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ವರ್ಷದ ಹಿಂದೆಯೇ ಕೈಗೊಂಡಿರುವ ನಿರ್ಧಾರ ಇದಾಗಿದೆ. ಇದರಲ್ಲಿ ಹೊಸತೇನಿಲ್ಲ. ಜನವರಿಯಲ್ಲಿ ಬಂದ ದೂರೊಂದನ್ನು ಆಧರಿಸಿ ದೇವಸ್ವಂ ಆಯುಕ್ತರು ಈ ಆದೇಶ ಹೊರಡಿಸಿದ್ದಾರೆ. ಆರ್​ಎಸ್​ಎಸ್ ಮಾತ್ರವಲ್ಲ, ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಗಳಿಗೆ ದೇವಳಗಳ ಆವರಣ ಬಳಕೆಗೆ ಅವಕಾಶವಿಲ್ಲ. ನಿರ್ದಿಷ್ಟ ದೂರಿನ ಹಿನ್ನೆಲೆಯಲ್ಲಿ ಮಾತ್ರ ಆರ್​ಎಸ್​ಎಸ್ ಹೆಸರು ಉಲ್ಲೇಖಿಸಲಾಗಿದೆ ಎಂದು ತಿಳಿಸಿದ್ದಾರೆ. ಕೇರಳದ ಐದು ದೇವಸ್ವಂ ಬೋರ್ಡಗಳ ಅಡಿಯಲ್ಲಿ ಸುಮಾರು 3 ಸಾವಿರ ದೇವಸ್ಥಾನಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
