ಚೆನ್ನೈ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥಸಂಚಲನಕ್ಕೆ ಹೈಕೋರ್ಟ್ ನಿರ್ಬಂಧ ಎದುರಾಗಿರುವ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿದ್ದು, ಆರ್​ಎಸ್​ಎಸ್​ನ ಮುಂದಿನ ನಡೆ ಕುತೂಹಲ ಕೆರಳಿಸಿದೆ. ತಮಿಳುನಾಡಿನಲ್ಲಿ ಆರ್​ಎಸ್​ಎಸ್​ ನಾಳೆ ನಡೆಸಲು ಉದ್ದೇಶಿಸಿದ್ದ ಪಥಸಂಚಲನವು ಮದ್ರಾಸ್ ಹೈಕೋರ್ಟ್​ ನಿರ್ಬಂಧದಿಂದಾಗಿ ರದ್ದುಗೊಂಡಿದೆ.
ತಮಿಳುನಾಡಿನ 44 ಸ್ಥಳಗಳಲ್ಲಿ ನ. 6ರ ಭಾನುವಾರ ಆರ್​ಎಸ್​ಎಸ್​ ಪಥಸಂಚಲನ ನಡೆಸಲು ಉದ್ದೇಶಿಸಿತ್ತು. ಆದರೆ ಮೈದಾನ ಅಥವಾ ಕ್ರೀಡಾಂಗಣದಂಥ ಚೌಕಟ್ಟಿನ ಒಳಗಿನ ಪ್ರದೇಶಗಳಲ್ಲಿ ಮಾತ್ರ ಈ ಪಥಸಂಚಲನ ನಡೆಸುವಂತೆ ಮದ್ರಾಸ್ ಹೈಕೋರ್ಟ್​ ನಿನ್ನೆ ನಿರ್ಬಂಧ ಹೇರಿತ್ತು. ಹೀಗಾಗಿ ಆರ್​ಎಸ್​ಎಸ್​ ನಾಳಿನ ಪಥಸಂಚಲನವನ್ನು ರದ್ದುಗೊಳಿಸಿದೆ.
ತೆರೆದ ಪ್ರದೇಶದಲ್ಲಿನ ಪಥಸಂಚಲನ ಕಾಶ್ಮೀರ, ಪಶ್ಚಿಮಬಂಗಾಳ, ಕೇರಳ ಮತ್ತಿತರೆಡೆ ನಡೆಯಲಿದೆ. ಆದರೆ ನ. 6ರಂದು ತಮಿಳುನಾಡಿನಲ್ಲಿ ಪಥಸಂಚಲನ ನಡೆಸುವುದಿಲ್ಲ ಎಂದು ಆರ್​ಎಸ್​ಎಸ್ ತಿಳಿಸಿದೆ. ಇನ್ನು ಕೋರ್ಟ್ ಸೂಚನೆ ಸ್ವೀಕಾರಾರ್ಹವಲ್ಲ ಎಂದಿರುವ ಆರ್​ಎಸ್​ಎಸ್​, ಆ ಕುರಿತು ಮೇಲ್ಮನವಿ ಸಲ್ಲಿಸಲಿರುವುದಾಗಿ ಹೇಳಿದೆ.
ಹೆಚ್ಚಾಗದ ವೇತನ, ‘108’ ಸಮಸ್ಯೆ: ಮನನೊಂದು ವಿಷ ಕುಡಿದ ಸರ್ಕಾರಿ ಆಸ್ಪತ್ರೆ ಆ್ಯಂಬುಲೆನ್ಸ್ ಚಾಲಕ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twelve − eight =
Remember me
