ಮುಂಬೈ:ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆಯುವಲ್ಲಿ ವಿಫಲವಾದ ಬಿಜೆಪಿ ಎನ್​ಡಿಎ ನೇತೃತ್ವದಲ್ಲಿ ಮಿತ್ರಪಕ್ಷಗಳೊಂದಿಗೆ ಸೇರಿ ಸರ್ಕಾರ ರಚಿಸಿದೆ. ಚುನಾವಣೆ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿರುವ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​​ ರಾಜಕೀಯ ಪಕ್ಷಗಳು ಸೌಜನ್ಯವನ್ನು ಕಾಪಾಡಿಕೊಂಡಿಲ್ಲ ಎಂದು ಹೇಳಿದ್ದಾರೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರ ವಹಿಸಿಕೊಂಡ ಬಳಿಕ ಭಾಗವತ್​ ಅವರಿಂದ ಈ ಹೇಳಿಕೆ ಬಂದಿದೆ.
ಇದನ್ನು ಓದಿ:ದೆಹಲಿಯಲ್ಲಿ ಮತ್ತೆ ತಾಪಮಾನ ಏರಿಕೆ: ಮುಂದಿನ 6 ದಿನ ಎಚ್ಚರ ವಹಿಸುವಂತೆ ಐಎಂಡಿ ಸೂಚನೆ
ನಿಜವಾದ ಸೇವಕ (ಜನರ ಸೇವೆ ಮಾಡುವವನು) ಎಂದಿಗೂ ಅಹಂಕಾರವನ್ನು ತೋರಿಸುವುದಿಲ್ಲ ಮತ್ತು ಸಾರ್ವಜನಿಕ ಜೀವನದಲ್ಲಿ ಯಾವಾಗಲೂ ಸೌಜನ್ಯವನ್ನು ಕಾಪಾಡಿಕೊಳ್ಳುತ್ತಾನೆ. ನಿಜವಾದ ಸೇವಕನು ಕೆಲಸ ಮಾಡುವಾಗ ಸಜ್ಜನಿಕೆಯನ್ನು ಕಾಯ್ದುಕೊಳ್ಳುತ್ತಾನೆ. ಸಜ್ಜನಿಕೆಯನ್ನು ನಿರ್ವಹಿಸುವವನು ತನ್ನ ಕೆಲಸವನ್ನು ಮಾಡುತ್ತಾನೆ, ನಾನು ಇದನ್ನು ಮಾಡಿದ್ದೇನೆ ಎಂಬ ಅಹಂಕಾರ ಇರುವುದಿಲ್ಲ. ಅಂತಹ ವ್ಯಕ್ತಿಗೆ ಮಾತ್ರ ಸೇವಕ ಎಂದು ಕರೆಯುವ ಹಕ್ಕಿದೆ ಎಂದು ಹೇಳಿದ್ದಾರೆ.
ಇನ್ನು ಮಣಿಪುರದಲ್ಲಿ ನಡೆದ ಘಟನೆ ಬಗ್ಗೆ ಮಾತನಾಡಿದ ಅವರು, ಎಲ್ಲೆಡೆ ಸಾಮಾಜಿಕ ಅಸಂಗತತೆ ಇದೆ. ಇದು ಒಳ್ಳೆಯದಲ್ಲ. ಕಳೆದ ಒಂದು ವರ್ಷದಿಂದ ಮಣಿಪುರ ಶಾಂತಿಗಾಗಿ ಕಾಯುತ್ತಿದೆ. ಕಳೆದ ಒಂದು ದಶಕದಿಂದ ಶಾಂತಿಯುತವಾಗಿತ್ತು. ಹಳೇ ಬಂದೂಕು ಸಂಸ್ಕೃತಿ ಇಲ್ಲವೇನೋ ಎನಿಸಿತು. ಆದರೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಅಥವಾ ಸೃಷ್ಟಿಯಾದ ಬಂದೂಕು ಸಂಸ್ಕೃತಿಯಿಂದಾಗಿ ಮಣಿಪುರ ಇಂದಿಗೂ ಹೊತ್ತಿ ಉರಿಯುತ್ತಿದೆ. ಇದರತ್ತ ಗಮನ ಹರಿಸುವವರು ಯಾರು? ಅದನ್ನು ಆದ್ಯತೆ ಮೇರೆಗೆ ವಿಲೇವಾರಿ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ. (ಏಜೆನ್ಸೀಸ್​)
NEET-UG 2024 ಪರೀಕ್ಷೆ; ಪ್ರೆಶ್ನೆ ಪತ್ರಿಕೆ ಸೋರಿಕೆ ಆರೋಪಕ್ಕೆ ಉತ್ತರಿಸುವಂತೆ ಎನ್​​ಟಿಎಗೆ ಸುಪ್ರೀಂಕೋರ್ಟ್​​ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 5 =
Remember me
