ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಂಘ ಪರಿವಾರದ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. “ಆರ್‌ಎಸ್‌ಎಸ್ ಕಾ ಚೋಟಾ ರೀಚಾರ್ಜ್” (ಆರ್​ಎಸ್​ಎಸ್​ನ ಸಣ್ಣ ರೀಚಾರ್ಜ್​)ಧಮ ಎಂದು ಕೇಜ್ರಿವಾಲ್ ಅವರನ್ನು ಲೇವಡಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅಸಾದುದ್ದೀನ್ ಓವೈಸಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ನಡುವೆ ಮಾತಿನ ಸಮರ ಪ್ರಾರಂಭವಾಗಿದೆ. ದೆಹಲಿಯಲ್ಲಿ ಸುಂದರ್‌ಕಾಂಡ್ ಪಥ ಪಠಣ ಕಾರ್ಯಕ್ರಮವನ್ನು ಆಯೋಜಿಸಲು ಎಎಪಿ ನಿರ್ಧರಿಸಿದ ನಂತರ ಓವೈಸಿ ಅವರು ಈ ರೀತಿ ವಾಗ್ದಾಳಿ ಮಾಡಿದ್ದಾರೆ.
“ಆರೆಸ್ಸೆಸ್‌ನ ಛೋಟಾ ರೀಚಾರ್ಜ್ ದೆಹಲಿಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿ ತಿಂಗಳ ಮೊದಲ ಮಂಗಳವಾರದಂದು ಸುಂದರ್‌ಕಾಂಡ ಪಥ ಆಯೋಜಿಸಲು ನಿರ್ಧರಿಸಿದೆ. ಜನವರಿ 22 ರಂದು [ರಾಮ ಮಂದಿರ] ಉದ್ಘಾಟನೆಯಿಂದಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ” ಎಂದು ಹೈದರಾಬಾದ್ ಸಂಸದರಾಗಿರುವ ಓವೈಸಿ ಟ್ವೀಟ್ ಮಾಡಿದ್ದಾರೆ.
ಬಿಲ್ಕಿಸ್ ಬಾನೋ ವಿಚಾರದಲ್ಲಿ ಮೌನ ವಹಿಸಿದ್ದ ಈ ಜನರು ಶಿಕ್ಷಣ ಮತ್ತು ಆರೋಗ್ಯದಂತಹ ವಿಷಯಗಳ ಬಗ್ಗೆ ಮಾತ್ರ ಮಾತನಾಡಲು ಬಯಸಿದ್ದರು ಎಂಬುದನ್ನು ನೆನಪಿಸುತ್ತೇನೆ ಎಂದೂ ಓವೈಸಿ ಹೇಳಿದ್ದಾರೆ.ಸಂಘದ ಅಜೆಂಡಾಕ್ಕೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ. ಬಾಬರಿ ಬಗ್ಗೆ ಮಾತನಾಡುವುದು ಬೇಕಾಗಿಲ್ಲ, ನೀವು ನ್ಯಾಯದ ಕೊಳಲನ್ನು ನುಡಿಸುತ್ತಿದ್ದೀರಿ, ಇದೇ ಸಮಯದಲ್ಲಿ ಹಿಂದುತ್ವವನ್ನು ಬಲಪಡಿಸುತ್ತಿದ್ದೀರಿ. ವಾವ್!” ಎಂದು ಓವೈಸಿ ಕಿಡಿಕಾರಿದ್ದಾರೆ.
ನಂತರ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ ಅವರು, “ಸ್ಪರ್ಧಾತ್ಮಕ ಹಿಂದುತ್ವದ ರಾಜಕೀಯವನ್ನು ಅಳವಡಿಸಿಕೊಳ್ಳಲಾಗುತ್ತಿದೆ” ಎಂದು ಹೇಳಿದ್ದು, ಆರ್‌ಎಸ್‌ಎಸ್, ಬಿಜೆಪಿ ಮತ್ತು ಎಎಪಿ ನಡುವಿನ ವ್ಯತ್ಯಾಸವೇನು ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಎಪಿ ಸಂಸದ ರಾಘವ್ ಚಡ್ಡಾ, ದೆಹಲಿ ಮುಖ್ಯಮಂತ್ರಿಗೆ ಯಾವುದೇ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದರು.
“ಯಾವುದೇ ನಾಯಕರಿಂದ ಪ್ರಮಾಣಪತ್ರದ ಅಗತ್ಯವಿಲ್ಲ. ಅರವಿಂದ್ ಕೇಜ್ರಿವಾಲ್ ಅವರು ಪ್ರಭು ಶ್ರೀರಾಮನ ಪರಮ ಭಕ್ತರಾಗಿದ್ದಾರೆ. ಅವರು ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಪ್ರಭು ರಾಮ ಮತ್ತು ಬಜರಂಗಬಲಿಯವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತಾರೆ. ಅವರು ತೀರ್ಥ ಯಾತ್ರೆ ನಡೆಸುತ್ತಿದ್ದಾರೆ” ಎಎಪಿ ನಾಯಕ ಹೇಳಿದ್ದಾರೆ.
ನಾಯಕರು ಯಾವುದಾದರೊಂದು ಧರ್ಮದಿಂದ ಬಂದಿರುತ್ತಾರೆ. ಅಲ್ಲದೆ, ಅವರು [ಕೇಜ್ರಿವಾಲ್] ತಮ್ಮ ಧರ್ಮವನ್ನು ನಂಬುತ್ತಾರೆ, ಇದರಲ್ಲಿ ಯಾವುದೇ ತೊಂದರೆ ಇಲ್ಲ. ಪ್ರತಿಯೊಬ್ಬರೂ ಇದನ್ನು ಮಾಡಬೇಕು ಎಂದು ಅವರು ಹೇಳಿದರು.
ಕೇಜ್ರಿವಾಲ್ ಮತ್ತು ಅವರ ಪತ್ನಿ ರೋಹಿಣಿ ಅವರು ಸುಂದರಕಾಂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ಹೇಳಿದರು.

5 ಮ್ಯೂಚುಯಲ್ ಫಂಡ್ ವಿಭಾಗಗಳಲ್ಲಿ ಹೂಡಿಕೆ: 2023ರಲ್ಲಿ ಲಾಭದ ಸುರಿಮಳೆ

ಸೂಪರ್​ಹಿಟ್​ ರೈಲ್ವೆ ಷೇರು: 5 ದಿನಗಳಲ್ಲಿ 42%; 6 ತಿಂಗಳಲ್ಲಿ 350%; 10 ತಿಂಗಳಲ್ಲಿ 470% ಏರಿಕೆ

ಬಿಎಸ್​ಇ ಸೂಚ್ಯಂಕ 199.17 ಅಂಕ ಕುಸಿತ: ಐಟಿ ಷೇರುಗಳು ಹಿನ್ನಡೆ ಅನುಭವಿಸಿದ್ದೇಕೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 + 17 =
Remember me
