ನವದೆಹಲಿ:ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್​ ಅವರು, ಅಖಿಲ ಭಾರತ ಇಮಾಮ್​ ಸಂಘದ ಮುಖ್ಯಸ್ಥರಾದ ಡಾ.ಉಮರ್ ಅಹ್ಮದ್ ಇಲ್ಯಾಸಿ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿಯಲ್ಲಿ ಡಾ.ಇಲ್ಯಾಸಿ ಸೇರಿದಂತೆ ಹಲವು ಮುಸ್ಲಿಂ ಮುಖಂಡರನ್ನ ಆರ್​ಎಸ್​ಎಸ್​ ಮುಖ್ಯಸ್ಥರು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಡಾ.ಇಲ್ಯಾಸಿ ಅವರು, ‘ನನ್ನ ಆಹ್ವಾನದ ಮೇರೆಗೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭೇಟಿ ಮಾಡಿದರು. ಅವರು ರಾಷ್ಟ್ರಪಿತ ಮತ್ತು ರಾಷ್ಟ್ರ ಋಷಿ ಇದ್ದಂತೆ. ಅವರ ಭೇಟಿಯಿಂದ ಉತ್ತಮ ಸಂದೇಶ ಹೊರ ಬಂದಿದೆ’ ಎಂದು ಅವರು ಹೇಳಿದರು.
ನಾವು ದೇವರನ್ನು ಆರಾಧಿಸುವ ವಿಧಾನಗಳು ವಿಭಿನ್ನವಾಗಿರಬಹುದು. ಆದರೆ ಧರ್ಮವೆಂದರೆ ಮಾನವೀಯತೆ. ಅದರ ನಂತರ ಎಲ್ಲವೂ, ಧರ್ಮಗಳು ಯಾವುದೇ ಇದ್ದರೂ ದೇಶ ಮೊದಲು ಎಂಬುದು ನಮ್ಮೆಲ್ಲರ ನಂಬಿಕೆ ಎಂದು ಉಮರ್ ಅಹ್ಮದ್ ಇಲ್ಯಾಸಿ ಅವರು ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಸರಸಂಘಚಾಲಕರಾದ ಮೋಹನ್​ ಭಾಗವತ್​ ಅವರು ಮಧ್ಯ ದೆಹಲಿಯ ಕಸ್ತೂರಿಬಾ ಗಾಂಧಿ ಮಾರ್ಗದಲ್ಲಿರುವ ಮಸೀದಿಯಲ್ಲಿ ಡಾ.ಉಮರ್ ಅಹ್ಮದ್ ಇಲ್ಯಾಸಿ ಸೇರಿದಂತೆ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದರು. ಬಳಿಕ ಉತ್ತರ ದೆಹಲಿಯ ಆಜಾದ್‌ಪುರದಲ್ಲಿರುವ ಮದರಸಾ ತಜ್ವೀದುಲ್ ಕುರಾನ್‌ಗೆ ಭೇಟಿ ನೀಡಿದರು.
ಬಿಜೆಪಿಯವರಿಗೆ ಸಂವಿಧಾನ ಮುಖ್ಯವಲ್ಲ, ನಾಗ್ಪುರದ ಆರ್‌ಎಸ್‌ಎಸ್ ಕಚೇರಿಗೆ ವಿಧೇಯರಾಗಿದ್ದಾರೆ

VIDEO: ಹಿಜಾಬ್​ ಸುಟ್ಟರು, ಕೂದಲು ಕತ್ತರಿಸಿಕೊಂಡರು… ಮಹಿಳೆಯರ ಪ್ರತಿಭಟನೆಗೆ ಮುಸ್ಲಿಂ ರಾಷ್ಟ್ರ ತತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 14 =
Remember me
