ನವದೆಹಲಿ:ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಭಾರಿ ವಿರೋಧಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಮುಖಂಡರೊಬ್ಬರು ಕೇಂದ್ರ ಕೃಷಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರ್​ಎಸ್​ಎಸ್​ ಮುಖಂಡ ರಘುನಂದನ್​ ಶರ್ಮಾ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್​ ತೋಮರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಫೇಸ್​ಬುಕ್​ನಲ್ಲಿ ಈ ಕುರಿತಾಗಿ ಪೋಸ್ಟ್​ ಮಾಡಿರುವ ಅವರು, “ನರೇಂದ್ರ ಜೀ… ನೀವು ಸರ್ಕಾರದ ಒಂದು ಭಾಗ. ರಾಷ್ಟ್ರೀಯತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ನಿಮ್ಮ ಉದ್ದೇಶ ರೈತರಿಗೆ ಸಹಾಯ ಮಾಡುವಂತಿರಬೇಕು. ಆದರೆ ಆ ಸಹಾಯ ಕೆಲವು ಜನರಿಗೆ ಬೇಡವೆಂದಾದಾಗ ಅದನ್ನು ಮಾಡಿ ಏನು ಪ್ರಯೋಜನ? ಬೆತ್ತಲೆಯಾಗಲು ಬಯಸುವವರಿಗೆ ಬಟ್ಟೆ ಏಕೆ ತೊಡಿಸಬೇಕು? ನಿಮ್ಮ ಶ್ರಮದ ಫಲವನ್ನು ನೀವು ಪಡೆಯುತ್ತಿದ್ದೀರಿ ಎಂದು ಭಾವಿಸಿದ್ದರೆ ಅದು ನಿಮ್ಮ ಭ್ರಮೆಯಷ್ಟೇ..” ಎಂದು ಹೇಳಿದ್ದಾರೆ.
ನಿಮಗೆ ಅಧಿಕಾರದ ದುರಹಂಕಾರ ನೆತ್ತಿಗೆ ಏರಿದೆ. ಜನಾದೇಶವನ್ನು ಏಕಾಗಿ ಕಳೆದುಕೊಳ್ಳುತ್ತಿದ್ದೀರಿ. ನಮಗೆ ಆಸಕ್ತಿಯಿಲ್ಲದ ಕಾಂಗ್ರೆಸ್​ನ ಎಲ್ಲ ಹಾಳು ನೀತಿಯನ್ನು ನಾವು ಅನುಮೋದಿಸಿದ್ದೇವೆ. ಒಂದು ಪಾಟ್​ನಿಂದ ಒಂದೊಂದೇ ಹನಿ ನೀರು ಸೋರಿಕೆಯಾಗುತ್ತಿದೆ ಎಂದು ನಾವು ಸುಮ್ಮನಾಗಿಬಿಟ್ಟರೆ ಪೂರ್ತಿ ಪಾಟ್​ ಖಾಲಿ ಆಗಿಬಿಡುತ್ತದೆ. ಅದೇ ರೀತಿ ಜನ ಬೆಂಬಲ ಕೂಡ. ರಾಷ್ಟ್ರೀಯತೆನ್ನು ಬಲಪಡಿಸಿಕೊಳ್ಳಬೇಕು, ಇಲ್ಲವಾದರೆ ಆಮೇಲೆ ನಾವೇ ವಿಷಾದಿಸಬೇಕಾಗುತ್ತದೆ. ಸಿದ್ಧಾಂತವನ್ನು ಕಾಪಾಡಿಕೊಳ್ಳಬೇಕು. ಕೇಂದ್ರದಲ್ಲಿ ರಾಷ್ಟ್ರವಾದಿ ಸರ್ಕಾರವನ್ನು ಸ್ಥಾಪಿಸುವುದಕ್ಕಾಗಿ ನಮ್ಮ ಸಂಘಟನೆ ದಶಕಗಳ ಕಾಲ ತ್ಯಾಗ ಬಲಿದಾನ ಮಾಡಿದೆ. ಈಗಿನ ರಾಷ್ಟ್ರೀಯತಾವಾದಿ ಸರ್ಕಾರಕ್ಕಾಗಿ ಸಾವಿರಾರು ರಾಷ್ಟ್ರವಾದಿಗಳು ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್​)
ಡೆತ್‌ನೋಟ್‌ನಲ್ಲಿ ಹೀಗೇಕೆ ಬರೆದರು ಧರ್ಮೇಗೌಡ? ಪೊಲೀಸರೂ ಭೇದಿಸಲಾಗದ ರಹಸ್ಯವಿದು!

ಮನೆಯಲ್ಲಿನ ಲೈವ್​ ಸೆಕ್ಸ್​ನ್ನು ಸಿಸಿಟಿವಿಯಿಂದಲೇ ಕದ್ದು ನೋಡುತ್ತಿದ್ದ ಖತರ್ನಾಕ್​​ ಟೆಕ್ನಿಷಿಯನ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 3 =
Remember me
