ನವದೆಹಲಿ:ಅಂದು ಶಾಲೆಯಲ್ಲಿ 6ನೇ ತರಗತಿ ಫೇಲ್​​ ಆಗಿ, ಅಪಮಾನಗಳನ್ನು ಅನುಭವಿಸಿ, ಮಾನಸಿಕ ಖಿನ್ನತೆಗೆ ಜಾರಿದ್ದ ಯುವತಿ ಇಂದು ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್​ ಮಾಡಿ, ಎರಡನೇ ರ್ಯಾಂಕ್ ಗಳಿಸಿ ಎಲ್ಲರ ಊಹೆಯನ್ನು ತಲೆಕೆಳೆಗೆ ಮಾಡಿದ್ದಲ್ಲದೇ, ಅದೆಷ್ಟೋ ಯುವ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿ ನಿಂತಿದ್ದಾರೆ. ಹಾಗಾದ್ರೆ, ಯಾರಿವರು? ಇವರು ಯಶಸ್ಸಿನ ಹಿಂದಿರುವ ಕಥೆಯೇನು? ಎಂಬುದರ ಮಾಹಿತಿ ಹೀಗಿದೆ ನೋಡಿ.
ಇದನ್ನೂ ಓದಿ:ಎಐ ಕಾರಣದಿಂದಾಗಿ ಉಂಟಾಗಲಿದೆ ವಿದ್ಯುತ್ ಬಿಕ್ಕಟ್ಟು, ಚಾಟ್‌ಜಿಪಿಟಿ ಪ್ರತಿ ಗಂಟೆಗೆ ಬಳಸುತ್ತಿರುವ ವಿದ್ಯುತ್ ಎಷ್ಟು?
ಐಎಎಸ್ ಅಧಿಕಾರಿ ಆದ ಯಶಸ್ಸಿನ ಕಥೆ:ಭಾರತದಲ್ಲಿ ಅತ್ಯಂತ ಕಠಿಣ ಪರೀಕ್ಷೆ ಎಂದೇ ಕರೆಯಲ್ಪಡುವ ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗುವುದು ಬಹಳ ಕಷ್ಟಕರ! ಪಾಸ್​ ಆಗಬೇಕಂದರೆ ಪಡಬೇಕಾದ ಶ್ರಮ ಅಷ್ಟಿಷ್ಟಲ್ಲ. ಕಠಿಣ ಪರಿಶ್ರಮ, ನಿರಂತರ ಶಿಸ್ತುಬದ್ಧಿನ ಓದಿನ ಕ್ರಮವೇ ಯಶಸ್ಸಿಗೆ ಪ್ರಮುಖ ಕಾರಣ. ಪ್ರತಿ ವರ್ಷ ಭಾರತದಾದ್ಯಂತ ಲಕ್ಷಾಂತರ ಯುಪಿಎಸ್ಸಿ ಆಕಾಂಕ್ಷಿಗಳು ಈ ಪರೀಕ್ಷೆಗೆ ವರ್ಷಗಳಿಂದ ತಯಾರಿ ನಡೆಸುತ್ತಿರುತ್ತಾರೆ. ಅಧಿಕಾರಿಯಾಗುವ ಕನಸ ಹೊತ್ತು ಊರಿಂದ ಊರು ಬಿಟ್ಟು ಬರುವ ವಿದ್ಯಾರ್ಥಿಗಳಿಗೆ ರುಕ್ಮಿಣಿ ರಿಯಾರ್​ ಅವರ ಯಶೋಗಾಥೆ ಖಂಡಿತ ಒಂದು ಸ್ಪೂರ್ತಿ ಎಂದೇ ಹೇಳಬಹುದು.
ತಮ್ಮ ಆರಂಭಿಕ ದಿನಗಳಲ್ಲಿ ಹೆಚ್ಚು ಅಂಕ ಗಳಿಸುತ್ತಿದ್ದ ವಿದ್ಯಾರ್ಥಿ ಗುಂಪಿಗೆ ಸೇರದ ರುಕ್ಮಿಣಿ, ಆರನೇ ತರಗತಿಯಲ್ಲಿ ಅನುತ್ತೀರ್ಣರಾದರು. ತದನಂತರ ಟೀಕೆಗೆ ಗುರಿಯಾದ ಇವರು, ಖಿನ್ನತೆಗೆ ಒಳಗಾಗಿ, ಅತೀವ ನೋವು ಅನುಭವಿಸಿದರು. ಈ ಘಟನೆಗಳಿಂದ ಹೊರಬಂದ ರಿಯಾರ್​, ಗುರುದಾಸ್‌ಪುರಮ್‌ನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿ, ಅಮೃತಸರದ ಗುರು ನಾನಕ್ ದೇವ್ ವಿಶ್ವವಿದ್ಯಾಲಯದಿಂದ ಸಮಾಜ ವಿಜ್ಞಾನದಲ್ಲಿ ಪದವಿ ಪಡೆದುಕೊಂಡರು.
ಇದನ್ನೂ ಓದಿ:ಸಿಎಎ ಜಾರಿ ಸ್ವೀಕಾರಾರ್ಹವಲ್ಲ: ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ ನಟ ವಿಜಯ್​
ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್‌ನಿಂದ ಸಮಾಜ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಟಿಐಎಸ್‌ಎಸ್‌ನಿಂದ ಕೋರ್ಸ್ ಮುಗಿಸಿಕೊಂಡರು. ಮೈಸೂರಿನ ಆಶೋದಯ ಮತ್ತು ಮುಂಬೈನ ಅನ್ನಪೂರ್ಣ ಮಹಿಳಾ ಮಂಡಲದಂತಹ ಎನ್‌ಜಿಒಗಳೊಂದಿಗೆ ಇಂಟರ್ನ್‌ಶಿಪ್ ಮಾಡಿದ ರುಕ್ಮಿಣಿ, ಎನ್​ಜಿಓದಲ್ಲಿ ಕೆಲಸ ಮಾಡುವಾಗ, ನಾಗರಿಕ ಸೇವೆ ಮಾಡುವತ್ತ ಹೆಚ್ಚು ಆಕರ್ಷಿತರಾದರು. ಪರೀಕ್ಷೆ ಬರೆದು, ಅಧಿಕಾರಿಯಾಗಬೇಕು ಎಂದು ಸಂಕಲ್ಪ ಮಾಡಿದ ಇವರು, ಯುಪಿಎಸ್ಸಿ ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದರು.
ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಎರಡನೇ ರಾಂಕ್ ಗಳಿಸುವ ಮೂಲಕ ರುಕ್ಮಿಣಿ ಯಶಸ್ವಿಯಾದರು. ಇದರ ನಂತರ 2011ರಲ್ಲಿ AIR 2 ಅನ್ನು ಪಡೆದುಕೊಂಡರು. ಅತೀ ಮುಖ್ಯವಾಗಿ ಐಎಎಸ್​ ಅಧಿಕಾರಿಯಾದ ರುಕ್ಮಣಿ ರಿಯಾರ್​ ಅವರು ಯಾವುದೇ ಕೋಚಿಂಗ್ ಕ್ಲಾಸ್​ಗೂ ಹೋಗದೆ, ತರಬೇತಿ ಪಡೆಯದೆ, ಸ್ವಯಂ ಅಧ್ಯಯನದಿಂದ ಅತ್ಯಂತ ಕಠಿಣ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ:ಪ್ರೇರಣಾ ಪರೀಕ್ಷೆ ಚೈತ್ರಯಾತ್ರೆ ಸಮಾರೋಪ ಇಂದು
ಇಂದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ರುಕ್ಮಿಣಿ ರಿಯಾರ್ ಅವರು 6ನೇ ತರಗತಿಯಿಂದ 12ನೇ ತರಗತಿವರೆಗಿನ ಎನ್‌ಸಿಇಆರ್‌ಟಿ ಪುಸ್ತಕಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದರು ಹಾಗೂ ದಿನನಿತ್ಯ ಪ್ರಕಟವಾಗುತ್ತಿದ್ದ ಸುದ್ದಿಪತ್ರಿಕೆ ಮತ್ತು ಮ್ಯಾಗ್​ಜೀನ್​ಗಳನ್ನು ಓದುತ್ತಿದ್ದರು. ಐಎಎಸ್​ ಅಧಿಕಾರಿಯಾದ ರುಕ್ಮಿಣ ಅವರ ಯಶಸ್ಸಿನ ಹಾದಿ ನಿಜಕ್ಕೂ ಅನೇಕರಿಗೆ ಸ್ಪೂರ್ತಿದಾಯಕ ಎಂದೇ ಹೇಳಬಹುದು,(ಏಜೆನ್ಸೀಸ್).
ಲೀಕ್ ಆಯ್ತು ‘ಗೂಗ್ಲಿ’ ನಟಿಯ ಮದುವೆ ಆಮಂತ್ರಣ ಪತ್ರಿಕೆ! ಸ್ಥಳ ಎಲ್ಲಿ? ಎಂದ ಫ್ಯಾನ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 6 =
Remember me
