ಹರಿದ್ವಾರ:ವದಂತಿಯನ್ನು ನಿಜವೆಂದು ನಂಬಿ ಪ್ರಯಾಣಿಕರು ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಲು ಸೇತುವೆಯಿಂದ ನೀರಿಗೆ ಜಿಗಿದ ವಿಚಿತ್ರ ಘಟನೆ ಉತ್ತರಖಂಡದ ಹರಿದ್ವಾರದ ಬಳಿ ನಡೆದಿದೆ.ಭಾನುವಾರದಂದು ಲಕ್ಸರ್ ಪ್ರದೇಶದ ನಿಲ್ದಾಣದ ಬಳಿ ಲಕ್ನೋ-ಚಂಡೀಗಢ ಸದ್ಭಾವನಾ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ವದಂತಿಯು ಪ್ರಯಾಣಿಕರಲ್ಲಿ ಭೀತಿಯನ್ನು ಸೃಷ್ಟಿಸಿದ್ದು, ಕೂಡಲೇ ರೈಲು ಬಂಗಂಗಾ ನದಿಯ ಮೇಲಿನ ರೈಲ್ವೆ ಸೇತುವೆಯ ಮೇಲೆ ಸ್ವಲ್ಪ ಸಮಯದ ನಂತರ ನಿಂತಿದೆ.ಇದನ್ನೂ ಓದಿ: ತನ್ನ ಅನುಪಸ್ಥಿತಿಯಲ್ಲಿ ಮಗನ ಅಂತ್ಯ ಸಂಸ್ಕಾರ: ಹೆಂಡತಿ ಸೇರಿದಂತೆ 13 ಜನರ ಪ್ರಾಣ ತೆಗೆದ ಸೈನಿಕಗಾಬರಿಗೊಂಡ ಪ್ರಯಾಣಿಕರು ನೀರಿಗೆ ಜಿಗಿದಿದ್ದು ಕೆಲವರು ಈಜಿ ದಡ ಸೇರಿದ್ದಾರೆ. ಇನ್ನು ಕೆಲವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇತುವೆ ಅಂಚಿ ಕಾಲ್ನಡಿಗೆಯಲ್ಲಿ ಸಾಗಿ ದಂಡೆಯನ್ನು ಸೇರಿದ್ದಾರೆ.ಈ ಕುರಿತು ಲಕ್ಸರ್ ಸ್ಟೇಷನ್ ಸೂಪರಿಂಟೆಂಡೆಂಟ್ ಎಸ್​​.ಕೆ. ತಿವಾರಿ ಮಾತನಾಡಿದ್ದು, ಯಾರೋ ಕಿಡಿಗೇಡಿಗಳು ರೈಲಿನಲ್ಲಿ ಸರಪಳಿಯನ್ನು ಎಳೆದಿದ್ದಾರೆ. ಅದರ ಪರಿಣಾಮವಾಗಿ ಚಕ್ರಗಳು ಜ್ಯಾಮ್​​ ಆಗಿ ಹೊಗೆಯನ್ನು ಹೊರಸೂಸಿದ್ದು, ಈ ಘಟನೆಯು ಬೆಂಕಿಯ ಬಗ್ಗೆ ವದಂತಿಗಳನ್ನು ಹರಡಿದೆ. ಸೇತುವೆಯ ಮೇಲೆ ರೈಲು ಸುಮಾರು ಅರ್ಧ ಗಂಟೆ ನಿಂತಿತ್ತು, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರೈಲಿನ ಬ್ರೇಕ್‌ಗಳನ್ನು ಸರಿಪಡಿಸಿದ ನಂತರ ರೈಲು ಚಲಿಸಲು ಅನುವು ಮಾಡಿಕೊಟ್ಟರು ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
