ನವದೆಹಲಿ: ಇಂಟರ್​ ಬ್ಯಾಂಕ್​ ಾರಿನ್​ ಎಕ್ಸ್​ಚೇಂಜ್​ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್​ ಎದುರು ಭಾರತದ ರೂಪಾಯಿ ದರ ಗುರುವಾರ 10 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ 77.72 ರೂಪಾಯಿಗೆ ತಲುಪಿತ್ತು. ಕಳೆದ 10 ದಿನಗಳ ಅವಧಿಯಲ್ಲಿ 5ನೇ ಬಾರಿ ಭಾರತದ ರೂಪಾಯಿ ದರ ಹೊಸ ಹೊಸ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ವಹಿವಾಟು ಆರಂಭವಾದಾಗ ರೂಪಾಯಿ ದರ 77.72ಕ್ಕೆ ಕುಸಿದಿತ್ತು. ಇಂಟ್ರಾ ಡೇ ವಹಿವಾಟಿನಲ್ಲಿ ಕನಿಷ್ಠ 77.76 ರೂಪಾಯಿ, ಗರಿಷ್ಠ 77.63 ರೂಪಾಯಿಯಲ್ಲಿ ವಹಿವಾಟು ನಡೆಸಿತ್ತು. ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್​ ಎದುರು 18 ಪೈಸೆ ಕುಸಿತ ಕಂಡು 77.62 ರೂಪಾಯಿ ಆಗಿತ್ತು.
6.71 ಲಕ್ಷ ಕೋಟಿ ರೂ. ನಷ್ಟಭಾರತದ ಷೇರುಪೇಟೆಯ ಗುರುವಾರದ ವಹಿವಾಟಿನಲ್ಲಿ ಬಿಎಸ್​ಇ ಸೆನ್ಸೆಕ್ಸ್​ 1,416.30 ಅಂಶ (2.61%) ಕುಸಿದು 52,792.23 ಅಂಶಕ್ಕೆ ಕುಸಿದಿದೆ. ದುರ್ಬಲ ಜಾಗತಿಕ ಮಾರುಕಟ್ಟೆ ಮತ್ತು ಾರಿನ್​ ಂಡ್​ ಹಿಂತೆಗೆತ ಇದಕ್ಕೆ ಕಾರಣ. ಹೂಡಿಕೆದಾರರಿಗೆ ಗುರುವಾರ ಬಿಎಸ್​ಇ ಮಾರುಕಟ್ಟೆಯಲ್ಲಿ 6,71,051.73 ಕೋಟಿ ರೂಪಾಯಿ ನಷ್ಟವಾಗಿದೆ. ಬಿಎಸ್​ಇ ಮಾರುಕಟ್ಟೆ ಮೌಲ್ಯ 2,49,06,394.08 ಕೋಟಿ ರೂಪಾಯಿ ಆಗಿದೆ. ಎನ್​ಎಸ್​ಇ ನಿಫ್ಟಿ 430.90 ಅಂಶ (2.65%) ಕುಸಿದು 15,809.40 ಅಂಶಕ್ಕೆ ತಲುಪಿದೆ.
ಷೇರು ಮಾರಾಟ ಹೆಚ್ಚಳಹಣದುಬ್ಬರ ಪ್ರಮಾಣ ಹೆಚ್ಚಾಗಿರುವ ಕಾರಣ, ಹೂಡಿಕೆದಾರರು ಅದರ ಪರಿಣಾಮ ತಮ್ಮ ಹೂಡಿಕೆಯ ಮೇಲೆ ಆಗಬಾರದು ಎಂದು ಕಡಿಮೆ ರಿಸ್ಕ್​ ಇರುವ ಹಣಕಾಸು ಆಸ್ತಿಗಳಿಗೆ ಹೂಡಿಕೆ ವರ್ಗಾವಣೆ ಮಾಡತೊಡಗಿದ್ದಾರೆ. ಇದು ಕಳೆದ ಕೆಲವು ತಿಂಗಳಿಂದ ತೀವ್ರವಾಗಿದ್ದು, ಷೇರು ಮಾರಾಟ ಪ್ರಕ್ರಿಯೆ ಹೆಚ್ಚಳವಾಗಿರುವುದನ್ನು ಷೇರುಪೇಟೆ ತಜ್ಞರು ಗುರುತಿಸಿದ್ದಾರೆ.
ಬಲಿಷ್ಠ ಡಾಲರ್​ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್​ ಬಲಿಷ್ಠಗೊಳ್ಳುತ್ತ ಸಾಗಿದೆ. ಸೆಂಟ್ರಲ್​ ಬ್ಯಾಂಕುಗಳು ಬಡ್ಡಿದರ ಏರಿಸಿದ್ದರಿಂದಾಗಿ ಅರ್ಥ ವ್ಯವಸ್ಥೆಯಲ್ಲಿ ಕೊಂಚ ತಲ್ಲಣ ಏರ್ಪಟ್ಟಿದೆ. ಅಮೆರಿಕದಲ್ಲೂ ಹಣದುಬ್ಬರ ನಿಯಂತ್ರಿಸಲು ಬಡ್ಡಿದರ ಏರಿಸಲಾಗಿದೆ. ಇದರ ಪರಿಣಾಮ ಡಾಲರ್​ ವಹಿವಾಟು ಹೆಚ್ಚಾಗಿದ್ದು, ಜಾಗತಿಕ ಕರೆನ್ಸಿ ಮಾರುಕಟ್ಟೆ ಯಲ್ಲಿ ಡಾಲರ್​ ಮೌಲ್ಯ ಬಲಿಷ್ಠವಾಗಿದೆ ಎಂದು ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ದೇಶೀಯ ಹಣದುಬ್ಬರಕಚ್ಚಾ ತೈಲ ದರ ಏರಿಕೆಯಿಂದಾಗಿ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಕೆ ಆಗಿದೆ. ಇದರ ಪರಿಣಾಮವಾಗಿ ದೇಶೀಯ ಹಣದುಬ್ಬರ ಪ್ರಮಾಣ ಗರಿಷ್ಠ ಮಟ್ಟದಲ್ಲಿದ್ದು, ಅದನ್ನು ನಿಯಂತ್ರಿಸಲು ಆರ್​ಬಿಐ ಕ್ರಮ ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ಹಣದುಬ್ಬರ ಹೆಚ್ಚಾದ ಕಾರಣ ರೂಪಾಯಿ ದುರ್ಬಲವಾಗತೊಡಗಿದೆ.
ಚಿನ್ನ ಏರಿಕೆ, ಬೆಳ್ಳಿ ಕುಸಿತರಾಷ್ಟ್ರ ರಾಜಧಾನಿ ದೆಹಲಿಯ ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಮಿಗೆ 76 ರೂಪಾಯಿ ಏರಿಕೆಯಾಗಿ 50,027 ರೂಪಾಯಿ ಆಗಿದೆ. ಬೆಳ್ಳಿಯ ದರ ಒಂದು ಕಿಲೋಗೆ 710 ರೂಪಾಯಿ ಕುಸಿದು 60,224 ರೂಪಾಯಿ ಆಗಿದೆ.
ಪರಿಣಾಮ ಏನು?– ಡಾಲರ್​ ಎದುರು ರೂಪಾಯಿ ದುರ್ಬಲಗೊಂಡರೆ ಆಮದು ದುಬಾರಿಯಾಗುತ್ತದೆ. ಇದೇ ವೇಳೆ ರ್ತು ವಹಿವಾಟಿಗೆ ಹೆಚ್ಚಿನ ಉತ್ತೇಜನ ಸಿಗುತ್ತದೆ.-ರೂಪಾಯಿ ದುರ್ಬಲವಾದಾಗ ಖರೀದಿ ದುಬಾರಿ ಆಗುತ್ತದೆ. ಹಣದುಬ್ಬರ ಪ್ರಮಾಣವೂ ಇದಕ್ಕೆ ಪೂರಕವಾಗಿರುತ್ತದೆ.-ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ರೂಪಾಯಿ ಮೌಲ್ಯ ತೀರಾ ಕುಸಿಯದಂತೆ ಮತ್ತು ಹೆಚ್ಚು ಬಲಿಷ್ಠವಾಗದಂತೆ ಸಮತೋಲನದಲ್ಲಿ ಅದನ್ನು ನಿರ್ವಹಿಸುತ್ತ ಸಾಗುವುದು ವಾಡಿಕೆ. ಈ ಸನ್ನಿವೇಶದಲ್ಲಿ ಮಾರುಕಟ್ಟೆ ಆರ್​ಬಿಐ ನಡೆ ಏನಿರಬಹುದು ಎಂಬ ಕುತೂಹಲದಿಂದ ಕಾಯುತ್ತಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + fifteen =
Remember me
