ಮುಂಬೈ:ರೂಪಾಯಿ ಮೌಲ್ಯದ ಕುಸಿತ ಶುಕ್ರವಾರ ಇನ್ನಷ್ಟು ಹಿಗ್ಗಿದೆ. ಡಾಲರ್ ಎದುರು 30 ಪೈಸೆ ಮೌಲ್ಯ ಕಳೆದುಕೊಂಡಿದ್ದು, ವಿದೇಶಿ ವಿನಿಮಯ ದರ 81.08 ರೂಪಾಯಿ ಮುಟ್ಟಿದೆ. ಮಧ್ಯಂತರ ವಹಿವಾಟಿನಲ್ಲಿ 81.23 ರೂಪಾಯಿವರೆಗೂ ಪತನಗೊಂಡಿತ್ತು. ಏಳು ತಿಂಗಳ ಹಿಂದೆ 80.79 ರೂ.ಗೆ ಮುಟ್ಟಿತ್ತು. ಯೂಕ್ರೇನ್ ಸಂಘರ್ಷ ಹಾಗೂ ಹಣದುಬ್ಬರವನ್ನು ಇಳಿಸಲು ಅಮೆರಿಕ ಮತ್ತು ಇಂಗ್ಲೆಂಡ್​ನ ಕೇಂದ್ರೀಯ ಬ್ಯಾಂಕ್​ಗಳು ಬಡ್ಡಿ ದರ ಹೆಚ್ಚಳ ಮಾಡಿರುವ ಕಾರಣ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಬಲಿಷ್ಠವಾಗಿದ್ದು, ರೂಪಾಯಿ ಮೌಲ್ಯ ಇತ್ತೀಚಿನ ದಿನಗಳಲ್ಲಿ 124 ಪೈಸೆ ಅಧಃಪತನವನ್ನು ಕಂಡಿದೆ.
ರೆಪೊ ದರ ಏರಿಕೆ ಸಾಧ್ಯತೆ:ಹಣದುಬ್ಬರ ಏರಿಕೆ, ಡಾಲರ್ ಎದುರು ರೂ. ದುರ್ಬಲ ವಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಆರ್​ಬಿಐ ರೆಪೊ ದರವನ್ನು 35 ಮೂಲಾಂಶದ ವರೆಗೂ ಹೆಚ್ಚಿಸುವ ಸಾಧ್ಯತೆ ಇದೆ. ಆರ್​ಬಿಐನ ಎಂಪಿಸಿ ಸಭೆ ಸೆ. 30ರಿಂದ ನಡೆಯಲಿದ್ದು, ಅಲ್ಲಿ ಈ ನಿರ್ಧಾರ ಕೈಗೊಳ್ಳುವ ಸಂಭವ ಇದೆ. ಕಳೆದ ಮೇ ತಿಂಗಳಿಂದೀಚೆಗೆ 140 ಮೂಲಾಂಶ ರೆಪೊ ದರ ಏರಿಕೆಯಾಗಿದ್ದು, ಶೇ. 5.40ರ ಕರೊನಾ ಪೂರ್ವಸ್ಥಿತಿಗೆ ಬಂದಿದೆ.
ರೂಪಾಯಿ ಮೌಲ್ಯ ಕುಸಿತ, ಅಮೆರಿಕ ಮತ್ತು ಇಂಗ್ಲೆಂಡ್ ಕೇಂದ್ರೀಯ ಬ್ಯಾಂಕ್​ಗಳ ಬಡ್ಡಿ ದರ ಹೆಚ್ಚಳದ ಪರಿಣಾಮ ಭಾರತೀಯ ಷೇರುಪೇಟೆಯಲ್ಲಿ ಶುಕ್ರವಾರ ಸಾವಿರಕ್ಕೂ ಹೆಚ್ಚು ಪಾಯಿಂಟ್ ಪತನಗೊಂಡಿದೆ. ಇದರಿಂದ ಹೂಡಿಕೆದಾರರ 4.90 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ. ಸೆನ್ಸೆಕ್ಸ್ ಸಂವೇದಿಯಲ್ಲಿ 1,020.80 ಅಂಶ (ಶೇ. 1.73) ಕುಸಿತವಾಗಿದ್ದು, 58,098.92ರಲ್ಲಿ ವಹಿವಾಟು ಮುಗಿಸಿದೆ. ಮಧ್ಯಂತರ ವಹಿವಾಟಿನಲ್ಲಿ 1,137 ಪಾಯಿಂಟ್ ವರೆಗೂ ಇಳಿಕೆ ಆಗಿತ್ತು. ಕಳೆದ ಮೂರು ವಹಿವಾಟಿನಲ್ಲಿ 1,620 ಅಂಶ (ಶೇ. 2.71) ಪತನವನ್ನು ಸೆನ್ಸೆಕ್ಸ್ ಕಂಡಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿ 302.45 (ಶೇ. 1.72) ಪಾಯಿಂಟ್ ತಗ್ಗಿದ್ದು, 17,327.35ರಲ್ಲಿ ವಹಿವಾಟು ಕೊನೆಗೊಂಡಿದೆ. ಪವರ್ ಗ್ರಿಡ್, ಎಂ ಆಂಡ್ ಎಂ, ಎಸ್​ಬಿಐ, ಬಜಾಜ್ ಫಿನ್​ಸರ್ವ್, ಬಜಾಜ್ ಫೈನಾನ್ಸ್, ಎನ್​ಟಿಪಿಸಿ, ಎಚ್​ಡಿಎಫ್​ಸಿ, ಇಂಡಸ್​ಇಂಡ್ ಬ್ಯಾಂಕ್​ಗಳು ಷೇರು ಮೌಲ್ಯ ಇಳಿಕೆ ಆಗಿದೆ. ಸನ್ ಫಾರ್ವ, ಟಾಟಾ ಸ್ಟೀಲ್, ಐಟಿಸಿಗಳು ಲಾಭದಾಯಕ ವಹಿವಾಟು ನಡೆಸಿವೆ.
ಚಿನ್ನ-ಬೆಳ್ಳಿ ಬೆಲೆ ಇಳಿಕೆ:ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ದರ 139 ರೂ. ಇಳಿಕೆ ಆಗಿದ್ದು, 10 ಗ್ರಾಂ ಚಿನ್ನದ ಧಾರಣೆ 50,326 ರೂ.ಗೆ ತಗ್ಗಿದೆ. ಬೆಳ್ಳಿ ಬೆಲೆ 363 ರೂ.ಕಡಿಮೆ ಆಗಿದ್ದು, ಕೆ.ಜಿ. ದರ 58,366 ರೂ.ಗೆ ಇಳಿಕೆ ಕಂಡಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + twelve =
Remember me
