ಮುಂಬೈ:ಪ್ರಾದೇಶಿಕ ಷೇರುಪೇಟೆಯ ಧನಾತ್ಮಕ ವಹಿವಾಟು ಮತ್ತು ರಿಸ್ಕ್ ಅಪೆಟೈಟ್​ನಲ್ಲಿ ಸುಧಾರಣೆ ಕಂಡಿರುವ ಭಾರತದ ರೂಪಾಯಿ ಮೌಲ್ಯ ವೃದ್ಧಿ ಯಾಗಿದೆ. ಕರೆನ್ಸಿ ಮಾರುಕಟ್ಟೆಯಲ್ಲಿ ಶುಕ್ರವಾರದ ವಹಿವಾಟಿನಲ್ಲಿ ಅಮೆರಿಕದ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯ 58 ಪೈಸೆ ಹೆಚ್ಚಳವಾಗಿ -ರೂ;74.35 ಆಗಿದೆ. ಇಂಟರ್ ಬ್ಯಾಂಕ್ ಫಾರೆಕ್ಸ್ ಮಾರುಕಟ್ಟೆಯ ವಹಿವಾಟು ಆರಂಭವಾಗುತ್ತಿದ್ದಂತೆ ಅಮೆರಿಕದ ಡಾಲರ್ ಎದುರು -ರೂ;74.76ರಲ್ಲಿ ವಹಿವಾಟು ಶುರುವಾಗಿತ್ತು. ಇಂಟ್ರಾ ಡೇ ವಹಿವಾಟಿ ನಲ್ಲಿ -ರೂ;74.28ರ ಗರಿಷ್ಠ ಮಟ್ಟಕ್ಕೆ ಏರಿದ್ದ
ರೂಪಾಯಿ ಬಳಿಕ ದಿನದ ಕನಿಷ್ಠ ಮಟ್ಟ -ರೂ;74.76ಕ್ಕೂ ಇಳಿದಿತ್ತು. ಕೊನೆಗೆ ಹಿಂದಿನ ದಿನ ಮುಕ್ತಾಯಕ್ಕಿಂತ 58 ಪೈಸೆ ಹೆಚ್ಚಳ ದಾಖಲಿಸಿ -ರೂ;74.35ರಲ್ಲಿ ದಿನದ ವಹಿವಾಟು ಮುಗಿಸಿದೆ. ಗುರುವಾರದ ವಹಿವಾಟಿನಲ್ಲಿ ಇದು -ರೂ;74,93 ಆಗಿತ್ತು.
ಷೇರುಪೇಟೆ ವಹಿವಾಟು: ಬಿಎಸ್​ಇ ಸೆನ್ಸೆಕ್ಸ್ ಶುಕ್ರವಾರ 28.35 (0.06%) ಅಂಶ ಏರಿ 48,832.03ರಲ್ಲೂ, ಎನ್​ಎಸ್​ಇ ನಿಫ್ಟಿ 36.40 (0.25%) ಅಂಶ ಏರಿ 14,617.85ರಲ್ಲೂ ದಿನದ ವಹಿವಾಟು ಮುಗಿಸಿವೆ.
ಚಿನ್ನ, ಬೆಳ್ಳಿ ದರ: ದೆಹಲಿಯಲ್ಲಿ ಚಿನ್ನದ ದರ 10 ಗ್ರಾಮಿಗೆ -ರೂ; 9 ಏರಿಕೆಯಾಗಿದ್ದು -ರೂ;46,431 ಮತ್ತು ಬೆಳ್ಳಿದರ 1 ಕಿಲೋಗೆ -ರೂ;53 ಏರಿದ್ದು -ರೂ;67,460 ಆಗಿದೆ.
‘ಈ ಮೊಲವನ್ನು ನೀವೇನಾದ್ರೂ ನೋಡಿರುವಿರಾ? ಸುಳಿವು ನೀಡಿ… ಎರಡು ಲಕ್ಷ ಬಹುಮಾನ ಒಯ್ಯಿರಿ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
