ನವದೆಹಲಿ: ಜಾಗತಿಕ ರಾಜಕೀಯ ವಿದ್ಯಮಾನಗಳು ಚುರುಕುಗೊಂಡಿದ್ದು, ಗಡಿಯಲ್ಲಿ ತಕರಾರು ಮಾಡುತ್ತಿರುವ ಪಾಕಿಸ್ತಾನ, ಚೀನಾ ವಿರುದ್ಧ ಭಾರತ ಬಿಗಿ ನಿಲುವು ತಾಳಿದೆ. ಅಲ್ಲದೆ, ಲಡಾಖ್ ಭಾಗದಲ್ಲಿ ಭಾರತದ ಗಡಿ ಅತಿಕ್ರಮಿಸಿರುವ ಚೀನಾಕ್ಕೆ ಪ್ರತಿರೋಧ ಒಡ್ಡುವ ಸಲುವಾಗಿ ವಾಣಿಜ್ಯ ಸಮರ ಸಾರುವ ಎಚ್ಚರಿಕೆಯನ್ನೂ ಭಾರತ ರವಾನಿಸಿದೆ. ಏತನ್ಮಧ್ಯೆ, ಅಮೆರಿಕವನ್ನೂ ಚೀನಾ ಎದುರುಹಾಕಿಕೊಂಡಿದ್ದು ಅಲ್ಲಿಂದ ಹಣಕಾಸಿನ ಸಮರದ ಭೀತಿಯನ್ನೂ ಎದುರಿಸುತ್ತಿದೆ. ಹೀಗೆ ಚೀನಾ ವಿರುದ್ಧದ ಜಾಗತಿಕ ವಿದ್ಯಮಾನಗಳು ಚುರುಕುಗೊಂಡಿದ್ದು, ಹಲವು ರಾಷ್ಟ್ರಗಳ ಮೈತ್ರಿರೂಪುಗೊಳ್ಳುವ ಸೂಚನೆಗಳು ಕಾಣಿಸಿವೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ರಷ್ಯಾ ತನ್ನ ನಿಲುವನ್ನು ಶುಕ್ರವಾರ ಸ್ಪಷ್ಟಪಡಿಸಿದ್ದು, ಚೀನಾ ನಮ್ಮ ಪಾಲುದಾರ ರಾಷ್ಟ್ರವಾಗಿದೆ. ಬೀಜಿಂಗ್ ಮತ್ತು ಕ್ರೆಮ್ಲಿನ್​ ನಡುವೆ ಅತ್ಯಂತ ಆಪ್ತ ಸಂಪರ್ಕ, ಸಂಬಂಧವಿದೆ. ಹೀಗಾಗೀ ಚೀನಾದ ವಿರುದ್ಧ ಯಾವುದೇ ಮೈತ್ರಿಯ ಜತೆಗೂ ನಾವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಮಿಟ್ರಿ ಸೆಕೋವ್​ ತಿಳಿಸಿದ್ದಾರೆ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಶಿನ್ಹುವಾ ವರದಿ ಮಾಡಿದೆ.
ಇದನ್ನೂ ಓದಿ:ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿ ದಾಳಿ ಸಾಧ್ಯತೆ; ಸನ್ನದ್ಧವಾಗಿರಲು ಸೇನಾಪಡೆಗೆ ಸೂಚನೆ
ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ ಮೈಕ್ ಪೋಂಪಿಯೋ ಅವರು ಗುರುವಾರ ಕ್ಯಾಲಿಫೋರ್ನಿಯಾದ ರಿಚರ್ಡ್​ ನಿಕ್ಸನ್​ ಪ್ರೆಸಿಡೆನ್ಶಿಯಲ್ ಲೈಬ್ರರಿಯಲ್ಲಿ ಮಾತನಾಡುತ್ತ, ಚೀನಾವನ್ನು ಎದುರಿಸುವುದಕ್ಕೆ ನಾವು ಮೈತ್ರಿಯನ್ನು ರಚಿಸಿಕೊಳ್ಳಬೇಕು. ಇಡೀ ಜಗತ್ತೇ ಚೀನಾ ವಿರುದ್ಧ ನಿಲ್ಲಬೇಕು. ಚೀನಾದ ಭೌಗೋಳಿಕ ವಿಸ್ತರಣಾ ನಿಲುವಿನಿಂದಾಗಿ ಭಾರತ, ಜಪಾನ್ ಮತ್ತು ಇತರ ಕೆಲವು ಪ್ರಮುಖ ದೇಶಗಳು ತೊಂದರೆ ಅನುಭವಿಸುತ್ತಿವೆ ಎಂದೂ ಹೇಳಿದ್ದರು.
ಇದನ್ನೂ ಓದಿ:ಅಪಾಯಕಾರಿ ಸಿಸಿಎಚ್​ಎಫ್​ ವೈರಸ್​ ಮೇಲೆ ಪಾಕ್​ನಲ್ಲಿ ಪ್ರಯೋಗ: ಚೀನಾ ಪ್ರಾಯೋಜಕತ್ವ!
ಅದೂ ಅಲ್ಲದೆ, ಚೀನಾದ ಅತಿಕ್ರಮಣ ನೀತಿ ತಡೆಯುವ ಸಲುವಾಗಿ ಭಾರತ ತೆಗೆದುಕೊಂಡ 59 ಚೀನೀ ಆ್ಯಪ್​ಗಳ ಮೇಲಿನ ನಿಷೇಧ ಕ್ರಮವನ್ನು ಪೋಂಪಿಯೋ ಸ್ವಾಗತಿಸಿದ್ದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಚೀನಾ ವಿರುದ್ಧ ಕೋವಿಡ್ 19 ವಿಚಾರದಲ್ಲಿ ಜಗತ್ತಿಗೆ ಚೀನಾ ಮಾಹಿತಿ ಕೊಟ್ಟಿಲ್ಲ ಎಂದು ಆರೋಪಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆಯನ್ನೂ ಈ ವಿಚಾರವಾಗಿ ಟೀಕಿಸಿ ಅನುದಾನ ಕಡಿತಗೊಳಿಸಿದ್ದರು. ಅಮೆರಿಕದ ಪ್ರಮುಖ ಟೆಕ್ನಾಲಜಿಯನ್ನು ಕದ್ದು ತನ್ನ ಸೇನೆಯನ್ನು ಬಲಪಡಿಸುತ್ತಿದೆ ಚೀನಾ ಎಂದೂ ಆರೋಪಿಸಿದ್ದರು.
ಈ ಎಲ್ಲ ಬೆಳವಣಿಗೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಚೀನಾ ವಿರುದ್ಧ ಒಂದಿಲ್ಲೊಂದು ಕಾರಣಕ್ಕೆ ಅನೇಕ ರಾಷ್ಟ್ರಗಳು ತೊಂದರೆಗೆ ಒಳಗಾಗಿ ಅಸಮಾಧಾನ ಹೊಂದಿವೆ. ಹೀಗಾಗಿ ಮೈತ್ರಿ ರೂಪುಗೊಳ್ಳುವ ಸಂಭವನೀಯತೆಯನ್ನು ಗಮನಿಸಿಯೇ ಮಾಸ್ಕೋ ಈ ರೀತಿ ಪ್ರತಿಕ್ರಿಯೆ ನೀಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)
ಚೀನಾ-ಪಾಕ್ ಕುತಂತ್ರ ಬಯಲು: ಜೈವಿಕ ಅಸ್ತ್ರ ಪ್ರಯೋಗಕ್ಕೆ ರಹಸ್ಯ ಒಪ್ಪಂದ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:seventeen − seven =
Remember me
