ನವದೆಹಲಿ:ಕೋವಿಡ್​-19 ಪಿಡುಗಿನ ಹಿನ್ನೆಲೆಯಲ್ಲಿ ಲಸಿಕೆ ತಯಾರಿಕೆ ವಿಶ್ವಾದ್ಯಂತ ಭಾರಿ ಪೈಪೋಟೊ ಎದ್ದಿದೆ. ಭಾರತ ಸೇರಿ ವಿವಿಧ ರಾಷ್ಟ್ರಗಳಲ್ಲಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳು ಮಾನವರ ಮೇಲಿನ ಪರೀಕ್ಷೆಯ ವಿವಿಧ ಹಂತದಲ್ಲಿವೆ. ಹೀಗಿರುವಾಗ ರಷ್ಯಾ ತಾನು ಕೋವಿಡ್-19 ಲಸಿಕೆಯ ಮಾನವರ ಮೇಲಿನ ಪ್ರಯೋಗವನ್ನು ಮುಗಿಸಿದ್ದು, ಅದು ಯಶಸ್ವಿಯಾಗಿದೆ. ಸೆಪ್ಟೆಂಬರ್​ನಿಂದ ಅದರ ಉತ್ಪಾದನೆ ಆರಂಭಿಸುವುದಾಗಿ ಹೇಳಿಕೊಂಡಿದೆ.
ರಷ್ಯಾದಲ್ಲಿ ಕೂಡ ಕೋವಿಡ್​-19ರ ಎರಡು ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ವೆಕ್ಟರ್​ ಸ್ಟೇಟ್​ ರಿಸರ್ಚ್​ ಸೆಂಟರ್​ ಆಫ್​ ವೈರಾಲಜಿ ಆ್ಯಂಡ್​ ಬಯೋಟೆಕ್ನಾಲಜಿ ಒಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದರೆ, ಗ್ಯಾಮಲೇಯಾ ಸೈಂಟಿಫಿಕ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೆಕ್ರೋಬಯಾಲಜಿ ರಷ್ಯಾದ ರಕ್ಷಣಾ ಸಚಿವಾಲಯದ ನೆರವಿನೊಂದಿಗೆ ಇನ್ನೊಂದು ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.
ಟಾಸ್​ ಸಂಸ್ಥೆಯ ಆ.1ರ ವರದಿಯ ಪ್ರಕಾರ ಗ್ಯಾಮ್​-ಕೋವಿಡ್​-ವ್ಯಾಕ್​ ಲೈಯೋ ಎಂಬ ಗ್ಯಾಮಲೇಯಾ ಸೈಂಟಿಫಿಕ್​ ರಿಸರ್ಚ್​ ಇನ್​ಸ್ಟಿಟ್ಯೂಟ್​ನ ಲಸಿಕೆಯ ಮಾನವರ ಮೇಲಿನ ಪ್ರಯೋಗ ಪೂರ್ಣಗೊಂಡಿದೆ. ಆ.10 ಅಥವಾ 12ರಿಂದ ಲಸಿಕೆಯ ನೋಂದಣಿ ಪ್ರಕ್ರಿಯೆ ನಡೆಯಲಿದ್ದು, ನೋಂದಣಿ ಲಭ್ಯವಾದ ಒಂದು ವಾರದಲ್ಲಿ ಉತ್ಪಾದನೆ ಆರಂಭವಾಗಲಿದೆ ಎಂದು ಹೇಳಿದೆ. ರಷ್ಯಾದ ಆರೋಗ್ಯ ಸಚಿವ ಮಿಖೈಲ್​ ಮುರ್ಷ್​ಕೋ ಸಹ ಇದನ್ನು ಖಚಿತಪಡಿಸಿದ್ದಾರೆ.
ಪಂಜಾಬ್​ ಲಿಕ್ಕರ್​ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಸೋನು ಸೂದ್ ಅಭಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
