ಮುಂಬೈ:ಕರೊನಾ ನಿಗ್ರಹಕ್ಕಾಗಿ ಲಸಿಕೆಯನ್ನು ಸಂಶೋಧಿಸುವ ಮೂಲಕ ಇಡೀ ಜಗತ್ತಿಗೆ ರಷ್ಯಾ ಸ್ವಾವಲಂಬನೆಯ (ಆತ್ಮನಿರ್ಭರ್​) ಪಾಠ ಕಲಿಸಿದೆ. ಆದರೆ, ಭಾರತದಲ್ಲಿ ಸ್ವಾವಲಂಬನೆ ಕೇವಲ ಮಾತಿನಲ್ಲಾಗುತ್ತಿದೆ ಎಂದು ಶಿವಸೇನೆ ನಾಯಕ, ಸಂಸದ ಸಂಜಯ್​ ರಾವತ್​ ಟೀಕಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಸರ್ಕಾರವೇ ಸ್ವಂತ ಬಲದಲ್ಲಿ ಕರೊನಾ ಲಸಿಕೆ ಸಿದ್ಧಪಡಿಸಿದ್ದನ್ನು ಘೋಷಿಸಿದ್ದಾರೆ. ಅದರ ತನ್ನ ದೇಶದಲ್ಲಿಯೇ ನೋಂದಣಿ ಮಾಡಿದ್ದಾಗಿ ಹೇಳಿದ್ದಾರೆ. ಜತೆಗೆ, ಅವರ ಮಗಳು ಕೂಡ ದೇಶಿಯವಾಗಿ ಸಿದ್ಧಪಡಿಸಿದ ಲಸಿಕೆ ಪಡೆದಿದ್ದಾರೆ.
ಇದನ್ನೂ ಓದಿ;ಸೌದಿ ಅರೇಬಿಯಾದಲ್ಲಿ ಉತ್ಪಾದನೆಯಾಗಲಿದೆ ರಷ್ಯನ್​ ಕರೊನಾ ಲಸಿಕೆ; ಫಿಲಿಫೈನ್ಸ್​, ಬ್ರೆಜಿಲ್​ನಲ್ಲೂ ಕ್ಲಿನಿಕಲ್​ ಟ್ರಯಲ್​
ರಷ್ಯನ್​ ಲಸಿಕೆ ನಿಯಮಬಾಹಿರ, ಪರಿಣಾಮಕಾರಿಯಲ್ಲ ಎಂದೆಲ್ಲ ಸಾಧಿಸಲು ಜಾಗತಿಕವಾಗಿ ಸಂಚು ನಡೆದಾಗ, ಪುಟಿನ್​ ಆ ಲಸಿಕೆಯನ್ನು ಮಗಳ ಮೇಲೆಯೇ ಪ್ರಯೋಗಿಸಲು ಅವಕಾಶ ನೀಡಿದರು. ಜತೆಗೆ ಇಡೀ ದೇಶದಲ್ಲಿ ಭರವಸೆಯ ಅಲೆಯನ್ನು ಮೂಡಿಸಿದರು ಎಂದು ಸಂಜಯ್​ ರಾವತ್​ ಹೇಳಿದ್ದಾರೆ.
ಆತ್ಮನಿರ್ಭರವೆಂದರೆ ಹೇಗಿರಬೇಕು ಎಂಬ ಬಗ್ಗೆ ರಷ್ಯಾ ಇಡೀ ಜಗತ್ತಿಗೆ ಮೊದಲ ಪಾಠ ಕಲಿಸಿದೆ. ಆದರೆ, ನಾವು ಬರೀ ಬಾಯಿ ಮಾತಿನಲ್ಲೇ ಹೇಳಿಕೊಳ್ಳುತ್ತಿದ್ದೇವೆ ಅಷ್ಟೇ ಎಂದು ಪರೋಕ್ಷವಾಗಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ಇದನ್ನೂ ಓದಿ;ಕರೊನಾ ನಿಯಂತ್ರಿಸುವಲ್ಲಿ ಮತ್ತೊಂದು ದಾಖಲೆ ಬರೆದ ದೆಹಲಿ; ದೇಶದಲ್ಲಿಯೇ ನಂಬರ್​ ಒನ್​…!
ರಾಮ ಮಂದಿರ ಭೂಮಿ ಪೂಜೆಯಲ್ಲಿ ಭಾಗಿಯಾಗಿದ್ದ ಮಹಾಂತ ನೃತ್ಯ ಗೋಪಾಲ ದಾಸರು ಕೋವಿಡ್​ಗೆ ಒಳಗಾಗಿದ್ದರೂ ಪ್ರಧಾನಿ ಏಕೆ ಕ್ವಾರಂಟೈನ್​ ಪಾಲಿಸುತ್ತಿಲ್ಲ ಎಂದು ರಾವತ್ ಪ್ರಶ್ನಿಸಿದ್ದಾರೆ.
ಈ ನಡುವೆ, ಕರೊನಾ ನಿವಾರಿಸುವ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ 9 ಔಷಧಗಳಲ್ಲಿ ರಷ್ಯಾ ಕಂಡುಹಿಡಿದಿದ್ದನ್ನು ಪರಿಗಣಿಸದೇ ಇರಲು ವಿಶ್ವ ಸಂಸ್ಥೆ ನಿರ್ಧರಿಸಿದೆ. ಆದರೆ, ಸೌದಿ, ಫಿಲಿಫೈನ್ಸ್​ ಹಾಗೂ ಬ್ರೆಜಿಲ್​ ದೇಶಗಳು ರಷ್ಯನ್​ ಲಸಿಕೆಯ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ನೀಡಿವೆ.
ಕರೊನಾ ಸಂಕಷ್ಟ ಮುಗಿಯುವವರೆಗೆ ಶಾಲೆ ತೆರೆಯಲ್ಲ; ಪಾಲಕರಿಗೆ ಭರವಸೆ ನೀಡಿದ್ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + sixteen =
Remember me
