ರಷ್ಯಾ ಸೇನಾಪಡೆಯ ದಾಳಿಗೆ ಯೂಕ್ರೇನ್​ನಲ್ಲಿ ಇದುವರೆಗೆ ಒಟ್ಟು ಮೂವರು ಮಕ್ಕಳು ಸೇರಿ 198 ಜನರು ಮೃತಪಟ್ಟಿದ್ದಾರೆ. 1115 ಜನ ಗಾಯಗೊಂಡಿದ್ದು, ಈ ಪೈಕಿ 33 ಮಕ್ಕಳು ಎಂದು ಯೂಕ್ರೇನ್​ ಆರೋಗ್ಯ ಸಚಿವ ವಿಕ್ಟರ್​ ಲಿಯಾಶ್ಕೊ ಶನಿವಾರ ತಿಳಿಸಿದ್ದಾರೆ.
ಯೂಕ್ರೇನ್​ ಸೇನಾಸೌಲಭ್ಯಗಳ ಮೇಲೆ ಪಣಿ ದಾಳಿ ಆರಂಭಿಸಲಾಗಿದೆ. ಗುರುವಾರದಿಂದೀಚೆಗೆ ಯೂಕ್ರೇನ್​ನ 821 ಸೇನಾಸೌಲಭ್ಯಗಳ ಮೇಲೆ ಪಣಿ ದಾಳಿ ನಡೆಸಲಾಗಿದೆ. ಇದರಲ್ಲಿ 14 ವಾಯುನೆಲೆ, 19 ಕಮಾಂಡ್​ ಸೌಲಭ್ಯ, 24 ಏರ್​ ಡಿಫೆನ್ಸ್​ ಪಣಿ ವ್ಯವಸ್ಥೆ, 48 ರಾಡಾರ್​, ಏಳು ಯುದ್ಧವಿಮಾನಗಳು, 9 ಡ್ರೋನ್​ಗಳು, 87 ಟ್ಯಾಂಕ್​ಗಳು ಮತ್ತು 8 ಸೇನಾ ನೌಕೆಗಳನ್ನು ನಾಶಪಡಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯದ ವಕ್ತಾರ ಮೇಜರ್​ ಜನರಲ್​ ಇಗೋರ್​ ಕೊನಶೆನ್​ಕೋವ್​ ಶನಿವಾರ ತಿಳಿಸಿದರು.
ಮೂರೇ ದಿನಕ್ಕೆ ರಾಜಧಾನಿ ವಶರಷ್ಯಾ ಸೇನೆಯ ವಿಶೇಷ ಕಾರ್ಯಾಚರಣೆ ಬಹಳ ಪ್ರವಾಗಿ ನಡೆದಿದ್ದು, ಕೇವಲ ಮೂರೇ ದಿನಕ್ಕೆ ಯೂಕ್ರೇನ್​ ರಾಜಧಾನಿ ಕಿಯೆವ್​ ಅದರ ವಶವಾಗಿದೆ. ಯೂಕ್ರೇನ್​ನ ಪ್ರಜಾಸತ್ತಾತ್ಮಕ ಸರ್ಕಾರದ ಪತನವಷ್ಟೇ ಇನ್ನು ಬಾಕಿ ಇದೆ.
ವಿಟೋ ಪ್ರಯೋಗಿಸಿದ ರಷ್ಯಾ – ನಾ, ಭಾರತ, ಯುಎಇ ಗೈರುಯೂಕ್ರೇನ್​ ಮೇಲೆ ದಾಳಿ ನಿಲ್ಲಿಸಬೇಕು ಮತ್ತು ಸೇನೆ ಹಿಂಪಡೆಯಬೇಕು ಎಂದು ರಷ್ಯಾ ಮೇಲೆ ಒತ್ತಡ ಹೇರುವ, ಆಗ್ರಹಿಸುವ ನಿರ್ಣಯ ಅಂಗೀಕರಿಸುವುದಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಶನಿವಾರ ಅಪರಾಹ್ನ 3 ಗಂಟೆಗೆ (ನ್ಯೂಯಾರ್ಕ್​ ಸಮಯ) ತುರ್ತು ಸಭೆ ನಡೆಸಿತು. 15 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ಸಮಿತಿಯಲ್ಲಿ ಮತದಾನ ಪ್ರಕ್ರಿಯೆಯಿಂದ ಚೀನಾ, ಭಾರತ ಮತ್ತು ಯುಎಇಗಳು ಗೈರಾಗಿದ್ದವು. ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯತ್ವ ಮತ್ತು ವಿಟೋ ಹಕ್ಕು ಹೊಂದಿರುವ ರಷ್ಯಾ, ಈ ನಿರ್ಣಯದ ವಿರುದ್ಧ ವಿಟೋ ಪ್ರಯೋಗ ಮಾಡಿದೆ. ಹೀಗಾಗಿ ನಿರ್ಣಯದ ಪರವಾಗಿ 11&1ರ ಮತದಾನವಾಗಿದೆ.
ನೆಲಬಿಟ್ಟು ಕದಲಲಾರೆ!“ಯುದ್ಧ ನಡೆಯುತ್ತಿರುವುದು ನನ್ನ ದೇಶದಲ್ಲಿ. ಈ ನೆಲವನ್ನು ಬಿಟ್ಟು ಎಲ್ಲಿಗೂ ಬರಲಾರೆ. ನಾವು ಶಸ್ತ್ರತ್ಯಾಗ ಮಾಡುವುದಿಲ್ಲ. ಇದು ನಮ್ಮ ನೆಲ ಮತ್ತು ನೆಲೆ, ನಮ್ಮ ದೇಶ, ನಮ್ಮ ಮಕ್ಕಳು, ಎಲ್ಲವನ್ನೂ ನಾವು ರಸುತ್ತೇವೆ. ಯೂಕ್ರೇನ್​ ಸೇನಾಪಡೆ ರಷ್ಯಾ ಸೇನೆಗೆ ಸೆಡ್ಡು ಹೊಡೆಯಲಿದೆ. ಪ್ರಜೆಗಳಾರೂ ಭಯಭೀತರಾಗಬೇಕಾಗಿಲ್ಲ’ ಎಂದು ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಶನಿವಾರ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ರಷ್ಯಾ ಸೇನೆ ಈಗಾಗಲೇ ರಾಜಧಾನಿ ತಲುಪಿದ್ದರಿಂದ ಅಲ್ಲಿಂದ ಸುರತವಾಗಿ ಸ್ಥಳಾಂತರವಾಗಲು ನೆರವು ನೀಡುವುದಾಗಿ ವೊಲೊಡಿಮಿರ್​ ಝೆಲೆನ್​ಸ್ಕಿಗೆ ಅಮೆರಿಕ ತಿಳಿಸಿತ್ತು. ಆದರೆ, ಈ ನೆಲಬಿಟ್ಟು ಬರುವುದಿಲ್ಲ ಎಂದು ಝೆಲೆನ್​ಸ್ಕಿ ಸ್ಪಷ್ಟವಾಗಿ ಅಮೆರಿಕಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ರಷ್ಯಾ ವಿಮಾನಗಳ ಮೇಲೆ ದಾಳಿಯೂಕ್ರೇನ್​ ಸೇನಾಪಡೆಯು ರಷ್ಯಾದ ಸಾರಿಗೆ ವಿಮಾನ “ಐಐ-76′ ಅನ್ನು ಕಿಯೆವ್​ನ ದಣಕ್ಕೆ 25 ಮೈಲಿ ದೂರದ ವಾಸಿಲ್​ಕಿವ್​ ಪಟ್ಟಣದ ಸಮೀಪ ಹೊಡೆದುರುಳಿಸಿದೆ. ಇನ್ನೊಂದು ರಷ್ಯಾ ಸೇನಾ ಸಾರಿಗೆ ವಿಮಾನವನ್ನು ಕಿಯೆವ್​ನ ದಣಕ್ಕೆ 50 ಮೈಲಿ ದೂರದ ಬಿಲಾ ತ್ಸೆರ್​ಕ್ವಾ ಪಟ್ಟಣದ ಸಮೀಪ ಹೊಡೆದುರುಳಿಸಿದೆ. ಇದನ್ನು ಅಮೆರಿಕದ ಗುಪ್ತಚರ ದಳ ಖಚಿತಪಡಿಸಿದೆ. ರಷ್ಯಾ ಸೇನೆ ಈ ಮಾಹಿತಿಯನ್ನು ದೃಢೀಕರಿಸಿಲ್ಲ.
-ನೆರವಿಗೆ ನ್ಯಾಟೋ ಪಡೆಯೂಕ್ರೇನ್​ ನೆರವಿಗೆ ನ್ಯಾಟೋ ಪಡೆ ಧಾವಿಸಲಿದೆ. ಪೌರಾತ್ಯದಲ್ಲಿರುವ ಸದಸ್ಯ ರಾಷ್ಟ್ರಗಳ ನೆರವಿಗೆ ಇದೇ ಮೊದಲ ಬಾರಿಗೆ ನ್ಯಾಟೋ ಪಡೆ ರವಾನೆ ಆಗಲಿದೆ. ಆದರೆ, ಯಾವ ಪ್ರಮಾಣದಲ್ಲಿ ಎಂಬುದನ್ನು ನ್ಯಾಟೋ ಸ್ಪಷ್ಟಪಡಿಸಿಲ್ಲ.
ಅಮೆರಿಕದಿಂದ ಸುರಾ ನೆರವುಯುದ್ಧ ಕಣದಲ್ಲಿರುವ ಯೂಕ್ರೇನ್​ಗೆ ಹಿಂದಿನ ವರ್ಷ ಅನುಮೋದಿಸಿದ್ದ 100 ಕೋಟಿ ಡಾಲರ್​ ಸುರಾ ನೆರವಿನ ಪೈಕಿ 35 ಕೋಟಿ ಡಾಲರ್​ (2,626 ಕೋಟಿ ರೂಪಾಯಿ) ನೆರವನ್ನು ಬಿಡುಗಡೆ ಮಾಡಲು ಅಮೆರಿಕ ಸರ್ಕಾರ ಶುಕ್ರವಾರ ತಡರಾತ್ರಿ ಕ್ರಮ ತೆಗೆದುಕೊಂಡಿದೆ.
ಪಶ್ಚಿಮದ ಗಡಿ ಕಡೆಗೆ ಯೂಕ್ರೇನಿಯನ್ನರುಯುದ್ಧದಿಂದ ಭಯಭೀತರಾಗಿರುವ ಯೂಕ್ರೇನಿಯನ್ನರು ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಪಶ್ಚಿಮದ ಗಡಿ ಭಾಗಕ್ಕೆ ಓಡತೊಡಗಿದ್ದಾರೆ. ಪೋಲಂಡ್​ನ ಪ್ರೆಝೆಮಿಸಿಲ್​ ಪಟ್ಟಣಕ್ಕೆ ಆಗಮಿಸಿರುವ ಯೂಕ್ರೇನ್​ ಮಹಿಳೆ ದರಿಯಾ, ಭಯಭೀತ ಜನರ ಸಂಕಷ್ಟವನ್ನು ಅನಾವರಣಗೊಳಿಸಿದ್ದಾರೆ. ದೇಶದ ಗಡಿ ದಾಟಿ ಬರುವುದು ಸುಲಭವಲ್ಲ. ಕಳೆದ 48 ಗಂಟೆಗಳ ಅವಧಿಯಲ್ಲಿ 50,000ಕ್ಕೂ ಹೆಚ್ಚು ಯೂಕ್ರೇನಿಯನ್ನರು ನಿರಾಶ್ರಿತರಾಗಿಬಿಟ್ಟಿದ್ದಾರೆ. ಬಹುತೇಕರು, ಪೋಲಂಡ್​ ಮತ್ತು ಮೋಲ್​ಡೋವಾ ತಲುಪಿದ್ದಾರೆ. ಪೋಲಂಡ್​, ಸ್ಲೊವಾಕಿಯಾ, ಹಂಗರಿ, ರೊಮಾನಿಯಾ, ಮೋಲ್​ಡೋವಾ ಪ್ರವೇಶಿಸುವುದಕ್ಕಾಗಿ ಯೂಕ್ರೇನ್​ನಿಂದ ವಾಹನಗಳು ಗಡಿಭಾಗದಲ್ಲಿ ಸಾಲುಗಟ್ಟಿ ನಿಂತಿವೆ.
ಶಸ್ತ್ರತ್ಯಾಗ ಮಾಡಲ್ಲ“ಯುದ್ಧ ನಡೆಯುತ್ತಿರುವುದು ನನ್ನ ದೇಶದಲ್ಲಿ. ಈ ನೆಲವನ್ನು ಬಿಟ್ಟು ಎಲ್ಲಿಗೂ ಬರಲಾರೆ. ನಾವು ಶಸ್ತ್ರತ್ಯಾಗ ಮಾಡುವುದಿಲ್ಲ. ಇದು ನಮ್ಮ ನೆಲ ಮತ್ತು ನೆಲೆ, ನಮ್ಮ ದೇಶ, ನಮ್ಮ ಮಕ್ಕಳು, ಎಲ್ಲವನ್ನೂ ನಾವು ರಸುತ್ತೇವೆ. ಯೂಕ್ರೇನ್​ ಸೇನಾಪಡೆ ರಷ್ಯಾ ಸೇನೆಗೆ ಸೆಡ್ಡು ಹೊಡೆಯಲಿದೆ. ಪ್ರಜೆಗಳಾರೂ ಭಯಭೀತರಾಗಬೇಕಾಗಿಲ್ಲ’ ಎಂದು ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಶನಿವಾರ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ರಷ್ಯಾ ಸೇನೆ ಈಗಾಗಲೇ ರಾಜಧಾನಿ ತಲುಪಿದ್ದರಿಂದ ಅಲ್ಲಿಂದ ಸುರತವಾಗಿ ಸ್ಥಳಾಂತರವಾಗಲು ನೆರವು ನೀಡುವುದಾಗಿ ವೊಲೊಡಿಮಿರ್​ ಝೆಲೆನ್​ಸ್ಕಿಗೆ ಅಮೆರಿಕ ತಿಳಿಸಿತ್ತು. ಆದರೆ, ಈ ನೆಲಬಿಟ್ಟು ಬರುವುದಿಲ್ಲ ಎಂದು ಝೆಲೆನ್​ಸ್ಕಿ ಸ್ಪಷ್ಟವಾಗಿ ಅಮೆರಿಕಕ್ಕೆ ತಿಳಿಸಿದ್ದಾಗಿ ವರದಿಯಾಗಿದೆ.
ಬಂದೂಕು ಹಿಡಿದ ನವಜೋಡಿ
ಕಿಯೆವ್​ನಲ್ಲಿ ಶುಕ್ರವಾರ ವಿವಾಹವಾದ ನವಜೋಡಿ ಶನಿವಾರ ನಗರ ರಕ್ಷಣೆಗಾಗಿ ಬಂದೂಕು ಹಿಡಿದು ರಷ್ಯಾ ಸೇನೆಗೆ ಪ್ರತಿರೋಧ ನೀಡಲು ಮುಂದಾಗಿರುವ ವಿಚಾರ ಜಗತ್ತಿನ ಗಮನಸೆಳೆದಿದೆ. ಕಿಯೆವ್​ನ ಸಿಟಿ ಕೌನ್ಸಿಲ್​ನ ಡೆಪ್ಯೂಟಿ 21 ವರ್ಷದ ಅರಿವಾ ಮತ್ತು ಸ್ಟಾ್​ವೇರ್​ ಇಂಜಿನಿಯರ್​ 24 ವರ್ಷದ ರ್ಸೀನ್​ ಈ ಜೋಡಿ. ಸ್ವಯಂಪ್ರೇರಿತವಾಗಿ ರಕ್ಷಣಾ ಕಾರ್ಯಕ್ಕೆ ಮುಂದಾಗಿರುವುದಾಗಿ ಕೂಡ ಹೇಳಿಕೊಂಡಿದೆ.
ಭಾರತದ ಬೆಂಬಲ ಕೋರಿದ ಯೂಕ್ರೇನ್​ಯೂಕ್ರೇನ್​ಗೆ ರಷ್ಯಾದ 1 ಲಕ್ಷಕ್ಕೂ ಹೆಚ್ಚು ಸೈನಿಕರು ಆಗಮಿಸಿದ್ದಾರೆ. ಅವರ ವಿರುದ್ಧ ಹೋರಾಟ ನಡೆಯುತ್ತಿದೆ. ಈ ಸನ್ನಿವೇಶದಲ್ಲಿ ವಿಶ್ವಸಂಸ್ಥೆಯಲ್ಲಿ ರಾಜಕೀಯ ಬೆಂಬಲ ನೀಡುವಂತೆ ಯೂಕ್ರೇನ್​ ಅಧ್ಯಕ್ಷ ವೊಲೊಡಿಮಿರ್​ ಝೆಲೆನ್​ಸ್ಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರು. ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ರಷ್ಯಾ ದಾಳಿ ವಿರೋಧಿಸಿ ಮಂಡಿಸಿದ ನಿರ್ಣಯಕ್ಕೆ ಪರವಾಗಿ ಮತಚಲಾಯಿಸಲು ಯೂಕ್ರೇನ್​ ಕೋರಿತ್ತು. ಇದನ್ನು ಅಧ್ಯಕ್ಷ ಝೆಲೆನ್​ಸ್ಕಿ ಟ್ವೀಟ್​ ಮಾಡಿ ಬಹಿರಂಗ ಪಡಿಸಿದ್ದರು.
ಯೂಕ್ರೇನ್​ ಯೋಧನ ಆತ್ಮಾಹುತಿರಷ್ಯಾ ಸೇನೆಯ ಟ್ಯಾಂಕ್​ಗಳು ದಣದ ಖೆರ್​ಸನ್​ ಪ್ರಾಂತ್ಯದ ಕಡೆಗೆ ಮುನ್ನುಗ್ಗುವುದನ್ನು ತಡೆದು ವಿಳಂಬಗೊಳಿಸಲು ಯೂಕ್ರೇನ್​ ಯೋಧನೊಬ್ಬ ಆತ್ಮಾಹುತಿ ಮಾಡಿಕೊಂಡಿದ್ದಾರೆ. ವಿಟಲಿ ಸ್ಕಕುನ್​ ವೊಲೊಡಿಮಿರೊವಿಚ್​ ಎಂಬ ಯೋಧ ಈ ರೀತಿ ಸಾಹಸ ಮಾಡಿದ್ದು. ಮರೈನ್​ ಬೆಟಾಲಿಯನ್​ನಲ್ಲಿ ಇಂಜಿನಿಯರ್​ ಆಗಿರುವ ವಿಟಲಿ ಹೆನಿಚೆಸ್ಕ್​ ಬ್ರಿಜ್​ ಸಮೀಪ ಪಹರೆಗೆ ನಿಯೋಜಿಸಲ್ಪಟ್ಟಿದ್ದ. ರಷ್ಯಾದ ಟ್ಯಾಂಕ್​ಗಳು ಈ ಪ್ರದೇಶಕ್ಕೆ ಪ್ರವೇಶಿಸುತ್ತಿದ್ದಂತೆ ಅವುಗಳನ್ನು ತಡೆಯಲು ಹರಸಾಹಸ ಪಟ್ಟಿದ್ದ. ಕೊನೆಗೆ, ಟ್ಯಾಂಕುಗಳ ಪ್ರವೇಶ ಸಾಧ್ಯವಾಗದಂತೆ ಆಯಕಟ್ಟಿನ ಜಾಗಕ್ಕೆ ಮೈನ್ಸ್​ನೊಂದಿಗೆ ಆಗಮಿಸಿ ಸ್ವತಃ ಅದರೊಂದಿಗೆ ಸ್ಫೋಟಿಸಿ ಆತ್ಮಾಹುತಿ ಮಾಡಿಕೊಂಡ.
ರಷ್ಯಾದಲ್ಲಿ ಫೇಸ್​ಬುಕ್​ಗೆ ಸೆನ್ಸಾರ್​ದಾರಿ ತಪ್ಪಿಸುವ ಮಾಹಿತಿ ಪ್ರಸಾರ ತಡೆಯುವ ಉದ್ದೇಶದೊಂದಿಗೆ ಫೇಸ್​ಬುಕ್​ ಮತ್ತು ಇತರ ಸಾಮಾಜಿಕ ಮಾಧ್ಯಮಗಳ ಮೇಲೆ ಭಾಗಶಃ ಸೆನ್ಸಾರ್​ ಹೇರಲಾಗಿದೆ. ಯೂಕ್ರೇನ್​ ಮೇಲಿನ ರಷ್ಯಾದ ವಿಶೇಷ ಸೇನಾ ಕಾರ್ಯಾಚರಣೆ ಸಂಬಂಧ ತಪ್ಪು ಮಾಹಿತಿ ಪ್ರಸಾರ ಕಂಡುಬಂದರೆ ಅಂತಹವನ್ನು ತಡೆಹಿಡಿಯಲಾಗುವುದು ಎಂದು ಮಾಸ್ಕೋ ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
