| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ನ್ಯಾಟೋ (NATO) ದಾಳಿಯನ್ನು ಎದುರಿಸಲು ಯೋಜನೆ ಮತ್ತು ಸಿದ್ಧತೆ ಮಾಡಿಕೊಳ್ಳುವ ಜತೆಗೆ, ಪಶ್ಚಿಮದ ಆರ್ಥಿಕ ನಿರ್ಬಂಧಗಳ ವಿರುದ್ಧ ರಷ್ಯಾ ಸೆಟೆದು ನಿಂತಿದೆ. ಅದಕ್ಕೆ ಈಗ ಸೆಂಟ್ರಲ್ ಬ್ಯಾಂಕ್‌ನ 630 ಬಿಲಿಯನ್ ಡಾಲರ್ ಹಣ ಸುಲಭವಾಗಿ ಲಭ್ಯವಿದೆ.
ಅನೇಕ ನಿರ್ಬಂಧಗಳನ್ನು ಹೇರಿದ್ದರೂ ರಷ್ಯಾಕ್ಕೆ ಅಂತಹ ಸಮಸ್ಯೆ ಏನೂ ಆಗಿಲ್ಲ. ಅರ್ಥಶಾಸ್ತ್ರಜ್ಞರ ಪ್ರಕಾರ, ರಷ್ಯಾದ ರಫ್ತುಗಳ ಮೇಲೆ ಶೇ. 100ರಷ್ಟು ನಿರ್ಬಂಧಗಳನ್ನು ಹೇರಿದ್ದರೂ ರಷ್ಯನ್ನರು ಬದುಕಬಲ್ಲರು. “ರಷ್ಯಾವು ಆಮದನ್ನು ಈಗಿನ ದರದಲ್ಲಿಯೇ ಮಾಡಿಕೊಳ್ಳುವುದನ್ನು ಮುಂದುವರಿಸಬಹುದು ಮತ್ತು ವಿದೇಶಿ ವಿನಿಮಯದ ಮೀಸಲು ನಿಧಿಯಲ್ಲೂ ಉಳಿತಾಯವನ್ನು ಹೊಂದಬಹುದು” ಎಂದು ತಜ್ಞರು ಹೇಳಿದ್ದಾರೆ.
ಪ್ರಮುಖ ಅಂತಾರಾಷ್ಟ್ರೀಯ ದೈನಿಕವೊಂದರಲ್ಲಿ ಪ್ರಕಟವಾದ ಒಂದು ಲೇಖನದ ಪ್ರಕಾರ, ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರು ಉಕ್ರೇನ್ ಮೇಲೆ ರಷ್ಯಾದ ಆಕ್ರಮಣಕ್ಕೆ ತ್ವರಿತ ಪ್ರತಿಕ್ರಿಯೆಯಾಗಿ, ರಷ್ಯಾದ ಬಾಂಡ್‌ಗಳನ್ನು ಖರೀದಿಸದಂತೆ ಅಮೆರಿಕದ ಹೂಡಿಕೆದಾರರನ್ನು ನಿರ್ಬಂಧಿಸಿದ್ದಾರೆ. ಆದರೆ, “ರಷ್ಯಾ ಅಮೆರಿಕನ್ನರಿಂದ ಎರವಲು ಪಡೆಯುವ ಅಗತ್ಯವಿಲ್ಲ” ಎಂದು ಲೇಖನವು ಪ್ರತಿಪಾದಿಸಿದೆ.
ರಷ್ಯಾದಿಂದ ಇಂಧನ ಪೂರೈಕೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಯುರೋಪ್‌ ಖಂಡದ ದೇಶಗಳಂತೂ ಇಂಧನಕ್ಕಾಗಿ ಬಹುತೇಕ ರಷ್ಯಾವನ್ನೇ ಅವಲಂಬಿಸಿವೆ. ಯುರೋಪಿಯನ್ ಯೂನಿಯನ್ (EU) 2019ರಲ್ಲಿ ರಷ್ಯಾದಿಂದ 135 ಶತಕೋಟಿ ಘನ ಮೀಟರ್ ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಂಡಿತು. 2021ರಲ್ಲಿ ಅದರ ಪ್ರಮಾಣ 166 ಶತಕೋಟಿ ಘನ ಮೀಟರ್‌ಗಳಿಗೆ ಹೆಚ್ಚಿದೆ. ಅಂದರೆ, ಈ ಜಿಗಿತವು ಬಹುತೇಕ ಶೇ. 25ರಷ್ಟಾಗಿದೆ. ಪವನ ವಿದ್ಯುತ್ ಮತ್ತು ಸೌರ ಶಕ್ತಿಯಂತಹ ನವೀಕರಿಸಬಹುದಾದ ಇಂಧನದಲ್ಲಿ ಹೂಡಿಕೆಗಳು ಹೆಚ್ಚುತ್ತಿರುವ ಹೊರತಾಗಿಯೂ ನೈಸರ್ಗಿಕ ಅನಿಲ ಮಾತ್ರವಲ್ಲ, ಕಲ್ಲಿದ್ದಲಿನ ರಫ್ತು ಕೂಡ ತೀವ್ರವಾಗಿ ಏರಿಕೆಯಾಗಿದೆ. 2014ರ ಬಿಕ್ಕಟ್ಟಿನ ಅನಂತರ ಯುರೋಪಿಯನ್ ಒಕ್ಕೂಟದ ಇಂಧನ ಮಾರುಕಟ್ಟೆಯಲ್ಲಿ ರಷ್ಯಾದ ಪಾಲು ಶೇಕಡಾ 16.5ರಿಂದ ಶೇ. 18.5ಕ್ಕೆ ಏರಿದೆ.
ನೈಸರ್ಗಿಕ ಅನಿಲ ಪೂರೈಕೆಯನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವ ನಾರ್ಡ್ ಸ್ಟೀಮ್ 2 ಪೈಪ್‌ಲೈನ್ ಯೋಜನೆಯ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಉಕ್ರೇನ್ ಮೇಲೆ ಯುದ್ಧ ಘೋಷಣೆಯಾದ ಬಳಿಕ ಜರ್ಮನಿಯು ನಾರ್ಡ್ ಸ್ಟೀಮ್ 2 ಪೈಪ್‌ಲೈನ್ ಯೋಜನೆಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಪುಟಿನ್ ಅವರ ಯೋಜನೆಯನ್ನು ತಲೆಕೆಳಗಾಗಿಸುವ ಮತ್ತು ರಷ್ಯಾದ ಆರ್ಥಿಕತೆಗೆ ಹೊಡೆತ ನೀಡುವ ಕ್ರಮ ಇದೆಂದು ಪ್ರಶಂಸಿಸಲಾಗಿದೆ.
ಆದರೂ, ವಾಸ್ತವದಲ್ಲಿ, ಈ ಯೋಜನೆಯ ಹಂಗಿಲ್ಲದೆ ರಷ್ಯನ್ನರು ತಮ್ಮ ರಫ್ತು ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಲ್ಲರು. ಇಂತಹ ಅಂಕುಶಗಳಿಂದ ಅವರು ಬಹುಶಃ ನುಣುಚಿಕೊಳ್ಳಬಹುದು.
ಅಮೆರಿಕ ಮತ್ತು ಅದರ ಸ್ನೇಹಿತರು ನಿರ್ಬಂಧಗಳನ್ನು ಹೇರುವ ಮೂಲಕ ಹಿಂಸಾಪೀಡನೆಯಿಂದ ಆನಂದವನ್ನು ಪಡೆಯಬಹುದು, ರಷ್ಯಾದ ಬ್ಯಾಂಕುಗಳನ್ನು ತಮ್ಮ ನಿರ್ಬಂಧಗಳ ಮೂಲಕ ಸ್ವಲ್ಪ ಮಟ್ಟಿಗೆ ಪೇಚಿಗೆ ಸಿಲುಕಿಸಬಹುದು. ಆದರೆ ಪಶ್ಚಿಮದಲ್ಲಿ ವ್ಯಾಪಾರ ಮಾಡಲು ಬಯಸುವ ರಷ್ಯಾದ ಕಂಪನಿಗಳು ಪರ್ಯಾಯ ಹಣಕಾಸು ಪಾಲುದಾರರನ್ನು ಖಂಡಿತವಾಗಿಯೂ ಕಂಡುಕೊಳ್ಳುತ್ತವೆ. ರಷ್ಯಾವನ್ನು ನಿಭಾಯಿಸುವ ಅತ್ಯುತ್ತಮ ಮಾರ್ಗವೆಂದರೆ, ಅದನ್ನು ಬ್ಯಾಂಕ್‌ಗಳು ಹಣ ಪಾವತಿಯ ಬಗ್ಗೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳುವ ಸ್ವಿಫ್ಟ್ (SWIFT) ವ್ಯವಸ್ಥೆಯಿಂದ ಅಮಾನತುಗೊಳಿಸುವುದು. ಇದು ಪಶ್ಚಿಮ ಮತ್ತು ರಷ್ಯಾ ನಡುವಿನ ವ್ಯಾಪಾರವನ್ನು ಸಂಕೀರ್ಣಗೊಳಿಸುತ್ತದೆ ಮತ್ತು ಅಧ್ಯಕ್ಷ ಪುಟಿನ್ ಅವರ ಯೋಜನೆಗಳಿಗೆ ತೀವ್ರ ಹೊಡೆತವನ್ನು ನೀಡುತ್ತದೆ.
ರಷ್ಯಾದ ಸೆಂಟ್ರಲ್ ಬ್ಯಾಂಕ್‌ನಲ್ಲಿರುವ ಹಣವನ್ನು ಆಮದು ಉದ್ದೇಶಗಳಿಗೆ, ಖರೀದಿಗಳಿಗೆ ಬಳಸಲು ಸಾಧ್ಯವಿಲ್ಲದ ಕಾರಣ ಆ ಹಣದಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ಅದು ಗೊಂದಲಕ್ಕೊಳಗಾಗುತ್ತದೆ. ಬಾಲ್ಟಿಕ್ ದೇಶದ ವಿದೇಶಾಂಗ ಸಚಿವರು ರಷ್ಯಾವನ್ನು ಸ್ವಿಫ್ಟ್ ವ್ಯವಸ್ಥೆಯಿಂದ ಹೊರದಬ್ಬುವಂತೆ ಪಶ್ಚಿಮ ದೇಶಗಳಿಗೆ ಕರೆ ನೀಡಿದ್ದಾರೆ. ಆದರೆ ಈ ಕ್ರಮವು ಯುರೋಪಿನಲ್ಲಿ ಇಂಧನದ ಬಿಕ್ಕಟ್ಟನ್ನು ಉಂಟುಮಾಡುತ್ತದೆ ಎಂಬುದನ್ನು ಯುರೋಪಿಯನ್ ಯೂನಿಯನ್ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಸದ್ಯಕ್ಕೆ, ಇಂತಹ ತ್ಯಾಗವು ಸ್ವೀಕಾರಾರ್ಹವಲ್ಲ ಎಂದು ಇಯು (EU) ಭಾವಿಸುತ್ತದೆ.
ಯುದ್ಧದಲ್ಲಿ ಸಾಯುವ ಮುನ್ನ ರಷ್ಯಾ ಯೋಧ ತನ್ನ ತಾಯಿಗೆ ಕಳುಹಿಸಿರುವ ಸಂದೇಶ ಮನಕಲಕುವಂತಿದೆ..!

ಮಾನವನ ದೇಹಗಳೇ ಆವಿಯಾಗುತ್ತಿದೆ… ಯೂಕ್ರೇನ್​ ವಿರುದ್ಧ ರಷ್ಯಾ ಇಂಥಾ ಕೀಳುಮಟ್ಟಕ್ಕೆ ಇಳಿಯಿತಾ!?

ಶಿವರಾತ್ರಿ ಹಬ್ಬದಂದೇ ಗ್ರಾಹಕರಿಗೆ LPG ದರ ಏರಿಕೆ ಬಿಸಿ: ವಾಣಿಜ್ಯ ಬಳಕೆಯ ಸಿಲಿಂಡರ್​ ಬೆಲೆಯಲ್ಲಿ ಭಾರೀ ಏರಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 − 10 =
Remember me
