ನೆಲಮಂಗಲ:ಇಲ್ಲಿ ನನಗೆ ಯಾವುದೇ ತೊಂದರೆಯಾಗಿಲ್ಲ ನಾನು ಸದ್ಯಕ್ಕೆ ಸುರಕ್ಷಿತವಾಗಿದ್ದೇನೆ. ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ನಗರದ ಪರಮಣ್ಣ ಬಡಾವಣೆ ನಿವಾಸಿ ನಿವೃತ್ತ ಯೋಧ ನಂದಕುಮಾರ್ ಎಂಬುವರ ಪುತ್ರಿ ನವ್ಯಶ್ರೀ ಯೂಕ್ರೇನ್‌ನಿಂದ ಕರೆ ಮಾಡಿದ್ದಾಗಿ ನಂದಕುಮಾರ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.ಉಕ್ರೇನ್‌ನ ಕಾರ್ ಕೀವ್ ನ್ಯಾಷನಲ್ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ನವ್ಯಶ್ರೀ ಉಕ್ರೇನ್‌ನ ಕಾರ್ ಕೀವ್ ಪ್ರದೇಶದಲ್ಲಿ ವಾಸವಾಗಿದ್ದಾರೆ.
2014ರಿಂದಲೂ ಇಲ್ಲಿ ಇದೇ ಬಗೆಯ ವಾತಾವರಣವಿದೆ, ಆದ್ದರಿಂದ ಹೆಚ್ಚು ಆತಂಕಪಡುವ ಅಗತ್ಯವಿಲ್ಲ. ಎಟಿಎಂ, ತರಕಾರಿ, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಜನರು ಹೊರಬರುತ್ತಿದ್ದಾರೆ. ಒಂದು ರೀತಿ ಕಾರ್ ಕೀವ್ ಪ್ರದೇಶದಲ್ಲಿ ಲಾಕ್‌ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಬುಧವಾರದವರೆಗೆ ಎಂದಿನಂತೆ ಕಾಲೇಜಿನ ತರಗತಿ ನಡೆದಿತ್ತು. ಗುರುವಾರದಿಂದ ಬಂದ್ ಆಗಿದೆಯಷ್ಟೇ ಯಾವುದೇ ಆತಂಕಪಡಬೇಕಿಲ್ಲ ಎಂದು ನವ್ಯಶ್ರೀ ಪ್ರತಿಕ್ರಿಯಿಸಿದ್ದಾರೆ.
ಮೆಟ್ರೋ ನಿಲ್ದಾಣಗಳತ್ತ ದೌಡು:ಯೂಕ್ರೇನ್ ಸರ್ಕಾರ ಕಾರ್‌ಕೀವ್ ನಿವಾಸಿಗಳಿಗೆ ತುರ್ತು ಸೂಚನೆ ನೀಡಿದೆ. ಬಹುಮಹಡಿಕಟ್ಟಡ ನಿವಾಸಿಗಳಿಗೆ ಮೆಟ್ರೋ ನಿಲ್ದಾಣಗಳಿಗೆ ತೆರಳಲು ಸೂಚನೆ ನೀಡಿದೆ, ಸುರಕ್ಷತಾ ದೃಷ್ಟಿಯಿಂದ ಅಂಡರ್‌ಗ್ರೌಂಡ್ ಮೆಟ್ರೋ ನಿಲ್ದಾಣಗಳಿಗೆ ತೆರಳಲು ನಿರ್ದೇಶನ ನೀಡಿದೆ. ಈಗಾಗಲೇ ಸಾಕಷ್ಟು ಮಂದಿ ಬಹುಮಹಡಿಕಟ್ಟಡ ತೊರೆದು ಮೆಟ್ರೋ ನಿಲ್ದಾಣಗಳಿಗೆ ತೆರಳುತ್ತಿದ್ದಾರೆ ಎಂದು ಪುತ್ರಿ ತಿಳಿಸಿದ್ದಾಳೆ.
ಬೆಳಗ್ಗೆಯಿಂದಲೂ ಮಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಅಲ್ಲಿ ಯಾವುದೇ ಆತಂಕಪಡುವ ಸನ್ನಿವೇಶವಿಲ್ಲ ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾಳೆ. ಅಲ್ಲಿನ ಸರ್ಕಾರ ಎಲ್ಲ ವಿದ್ಯಾರ್ಥಿಗಳ ರಕ್ಷಣೆಗೆ ಎಲ್ಲ ಬಗೆಯ ಸುರಕ್ಷತಾಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾಗಿ ನಿವೃತ್ತ ಯೋಧ ನಂದಕುಮಾರ್ ತಿಳಿಸಿದ್ದಾರೆ.
ಸೈನಿಕ ರಕ್ತ ಹೆದರೊಲ್ಲ:ವಿದ್ಯಾರ್ಥಿಗಳ ಪಾಲಕರು ಧೈರ್ಯಗುಂದಬೇಕಿಲ್ಲ, ಯೂಕ್ರೇನ್ ಸರ್ಕಾರ ನಮ್ಮ ದೇಶ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುತ್ತಿದೆ. ನನ್ನ ಮಗಳ ಮೈಯಲ್ಲಿ ಹರಿಯುತ್ತಿರುವುದು ಸೈನಿಕನ ರಕ್ತ, ಆದ್ದರಿಂದ ನನ್ನ ಮಗಳು ಧೈರ್ಯವಾಗಿ ಪರಿಸ್ಥಿತಿ ಎದುರಿಸಲಿದ್ದಾಳೆ ಎಂದು ನಂದಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹರ್ಷ ಸಾವಿನ ಮುನ್ಸೂಚನೆ ತಾಯಿಗೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ?!

ರೇಪ್​ ಮಾಡಿದ್ರು ಅಂತ ಸುಳ್ಳು ಹೇಳಿದ ವಿದ್ಯಾರ್ಥಿನಿ; ಇನ್​ಸ್ಟಾಗ್ರಾಮ್​ನಲ್ಲಿ 5 ಅಕೌಂಟ್​ ಹೊಂದಿದ್ದವಳಿಂದ ಕಟ್ಟುಕತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 5 =
Remember me
