ನವದೆಹಲಿ:ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಬಳಕೆ ಸಿಕ್ಕಾಪಟ್ಟೆ ಚಾಲ್ತಿಯಲ್ಲಿದ್ದು, ನೋಡುಗರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ದೇಶ-ವಿದೇಶಗಳನ್ನು ಸುತ್ತಾಡುವ ಅದೆಷ್ಟೋ ಯೂಟ್ಯೂಬರ್​ಗಳು ಪ್ರಪಂಚದ ಮೂಲೆ ಮೂಲೆಗಳನ್ನು ಅನ್ವೇಷಿಸಿ, ಅಲ್ಲಿನ ವಿಶೇಷತೆಗಳನ್ನು ತಮ್ಮ ಫಾಲೋವರ್ಸ್​ಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇದೇ ರೀತಿ ರಷ್ಯಾದಿಂದ ಭಾರತಕ್ಕೆ ಬಂದ ಚೆಲುವೆಯೊಬ್ಬರು, ದೆಹಲಿ ವಿಮಾನ ನಿಲ್ದಾಣದಲ್ಲಿ ತಮಗೆ ಎದುರಾದ ಮುಜುಗರದ ಘಟನೆಯನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಚಂಚಲ ಮನಸಿನ ಬದ್ಧತೆ ಇಲ್ಲದ ವ್ಯಕ್ತಿ
ರಷ್ಯಾ ಮೂಲದ ಕಂಟೆಂಟ್​ ಕ್ರಿಯೇಟರ್ ಆದ ಈ ಮಹಿಳೆ, ಕೆಲವು ದಿನಗಳ ಹಿಂದೆಯಷ್ಟೇ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಇಂಡಿಯಾ ಟೂರ್​ ಮುಗಿಸಿ, ತನ್ನ ದೇಶಕ್ಕೆ ಹಿಂತಿರುಗುವಾಗ ಆಕೆ ತನ್ನ ವಿಮಾನಕ್ಕಾಗಿ ದೆಹಲಿ ಏರ್​ಪೋರ್ಟ್​ನಲ್ಲಿ ಕಾಯುತ್ತಿದ್ದರು. ಆಗ ಅಲ್ಲಿನ ಪಾಸ್​​ಪೋರ್ಟ್ ಕಂಟ್ರೋಲ್​​​ ಅಧಿಕಾರಿ ತನ್ನ ಟಿಕೆಟ್​ ಮೇಲೆ ಅವರ ಮೊಬೈಲ್​ ನಂಬರ್​ ಬರೆದು, ಮುಂದಿನ ಬಾರಿ ಇಂಡಿಯಾಗೆ ಬಂದಾಗ ನನ್ನನ್ನು ಸಂಪರ್ಕಿಸಿ ಎಂದು ಹೇಳಿರುವುದಾಗಿ ಆಕೆ ವಿಡಿಯೋದಲ್ಲಿ ತಿಳಿಸಿದ್ದಾರೆ.
A post shared by Dinara ~ traveller, India lover 🇮🇳 (@dijidol)

“ನನ್ನ ಟಿಕೆಟ್ ಮೇಲೆ ಅವರು ಏಕೆ ಮೊಬೈಲ್ ನಂಬರ್​ ಬರೆದು, ನನಗೆ ಕರೆ ಮಾಡುವಂತೆ ತಿಳಿಸಿದರು ಎಂಬುದೇ ನನಗೆ ತಿಳಿಯುತ್ತಿಲ್ಲ. ಇದು ಯಾವ ರೀತಿಯ ವರ್ತನೆ? ನಾನಂತೂ ಭಾರೀ ಅಚ್ಚರಿಗೆ ಒಳಗಾಗಿದ್ದೇನೆ. ನೀವೇ ಹೇಳಿ, ನಿಮಗಿದು ಸರಿ ಅನಿಸುತ್ತದೆಯೇ?” ಎಂದು ವಿಡಿಯೋದಲ್ಲಿ ತಮ್ಮ ಅನುಯಾಯಿಗಳಿಗೆ ಪ್ರಶ್ನಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡ ದಿನಾರ ಎಂಬ ಮಹಿಳೆಗೆ ಇನ್​ಸ್ಟಾಗ್ರಾಮ್​ನಲ್ಲಿ 80,000ಕ್ಕೂ ಹೆಚ್ಚು ಫಾಲೋವರ್ಸ್​ ಇದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).
ಡೆಲ್ಲಿ ವಿರುದ್ಧದ ಸೋಲಿಗೆ ತಿಲಕ್ ವರ್ಮ ಕಾರಣ ಎಂದ ಹಾರ್ದಿಕ್ ಪಾಂಡ್ಯ! ನೀನೆಂಥ ಕ್ಯಾಪ್ಟನ್​? ಫ್ಯಾನ್ಸ್​ ಕಿಡಿ

ತಾಳಿ ಕಟ್ಟುವ ವೇಳೆ ಕಣ್ಣೀರಿಟ್ಟ ಆರತಿ ಸಿಂಗ್! ಕೃಷ್ಣ-ಕಾಶ್ಮೀರ ದಂಪತಿಗೆ ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × three =
Remember me
