ವಿಶೇಷತೆ
* ರಣರಂಗದ ನಿಯಂತ್ರಣ ಕೇಂದ್ರದಲ್ಲಿ ವಾಸ್ತವ ಸಮಯಾಧರಿತವಾಗಿ ಸನ್ನಿವೇಶವನ್ನು ಬಿತ್ತರಿಸುವ ಉಪಗ್ರಹ ಸಂಪರ್ಕವನ್ನು ರುಸ್ತುಂ ಹೊಂದಿದೆ.
* ಚೀನಾ ಸೇನೆ ಲಡಾಖ್ ಗಡಿಯಲ್ಲಿ ಭಾರತೀಯ ಪ್ರದೇಶ ಅತಿಕ್ರಮಿಸಲು ಯತ್ನಿಸಿದ ಬಳಿಕ ಉಂಟಾದ ಗಡಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ರುಸ್ತುಂ-2 ಯೋಜನೆಗೆ ವೇಗ ನೀಡಲಾಯಿತು.
* ಚೀನಾ ಸೇನೆ, ವಿಂಗ್ ಲೂಂಗ್ 2 ಸಶಸ್ತ್ರ ಡ್ರೋನ್​ಗಳನ್ನು ಹೊಂದಿದೆ. ಆ ಪೈಕಿ ನಾಲ್ಕನ್ನು ಪಾಕಿಸ್ತಾನಕ್ಕೆ ನೀಡಿದೆ. ಈ ಡ್ರೋನ್​ಗಳಿಗೆ ಪ್ರತಿಸ್ಪರ್ಧಿಯಾಗಿ ರುಸ್ತುಂ ಕಣಕ್ಕಿಳಿಯಲಿದೆ. ರುಸ್ತುಂ-2 ಸೇನೆಗೆ ಸೇರುವ ಮುನ್ನ ಇನ್ನಷ್ಟು ಪರೀಕ್ಷೆಗಳನ್ನು ಎದುರಿಸಬೇಕಿದೆ.
ನವದೆಹಲಿ:ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತಯಾರಿಸಿರುವ ‘ರುಸ್ತುಂ-2’ ಡ್ರೋನ್ ಪ್ರಯೋಗ ಯಶಸ್ವಿಯಾಗಿದೆ. ಕರ್ನಾಟಕದ ಚಿತ್ರದುರ್ಗದ ಡಿಆರ್​ಡಿಒ ಘಟಕದಲ್ಲಿ ಶುಕ್ರವಾರ ಈ ಪ್ರಯೋಗ ನಡೆದಿದೆ. ಮಧ್ಯಮ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯದ ಡ್ರೋನ್ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿರುವ ವೈಮಾನಿಕ ಪರೀಕ್ಷಾ ಕೇಂದ್ರದಲ್ಲಿ 16,000 ಅಡಿ ಎತ್ತರದಲ್ಲಿ ಎಂಟು ಗಂಟೆ ಹಾರಾಟ ನಡೆಸಿ ಸಾಮರ್ಥ್ಯ ಪ್ರದರ್ಶಿಸಿತು.
ಇನ್ನೂ ಒಂದು ತಾಸು ಹಾರಾಟ ನಡೆಸುವಷ್ಟು ಇಂಧನ ಅದರಲ್ಲಿ ಉಳಿದಿತ್ತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾಕ್ಕೆ ಪ್ರಬಲ ಎದಿರೇಟು ನೀಡಲು ಇದನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷಾಂತ್ಯದೊಳಗೆ, ಡ್ರೋನ್ 26,000 ಅಡಿ ಎತ್ತರದಲ್ಲಿ 18 ಗಂಟೆ ಹಾರಾಟ ಸಾಮರ್ಥ್ಯವನ್ನು ಹೊಂದುವ ನಿರೀಕ್ಷೆಯಿದೆ. ಕಾರ್ಯಾಚರಣೆಯನ್ನು ಆಧರಿಸಿ ವಿವಿಧ ಪ್ರಮಾಣದ ಭಾರದ (ಪೇಲೋಡ್) ಸಾಧನ-ಸಲಕರಣೆಗಳನ್ನು ಒಯ್ಯುವ ಶಕ್ತಿ ರುಸ್ತುಂಗಿದೆ.
ಹೆರಾನ್​ಗೆ ಸರಿಸಾಟಿಭಾರತೀಯ ವಾಯುಪಡೆ ಮತ್ತು ನೌಕಾಪಡೆ ಬಳಸುತ್ತಿರುವ ಇಸ್ರೇಲ್​ನ ಮಾನವ-ರಹಿತ ‘ಹೆರಾನ್’ ಡ್ರೋನ್​ಗೆ ರುಸ್ತುಂ ಸರಿಸಟಿಯಾಗಬಲ್ಲದು ಎಂಬುದು ಡಿಆರ್​ಡಿಒ ನಿರೀಕ್ಷೆಯಾಗಿದೆ.
ಇಸ್ರೇಲ್ ಜತೆ ಮಾತುಕತೆಈಗಾಗಲೇ ಭಾರತ ಹೊಂದಿರುವ ಹೆರಾನ್ ಡ್ರೋನ್​ಗಳ ಉನ್ನತೀಕರಣಕ್ಕೆ ಹಾಗೂ ಆಗಸದಿಂದ ಭೂಮಿಗೆ ನೆಗೆಯುವ ಕ್ಷಿಪಣಿಗಳು ಮತ್ತು ಲೇಸರ್ ನಿರ್ದೇಶಿತ ಬಾಂಬ್​ಗಳನ್ನು ಅವುಗಳಲ್ಲಿ ಸಜ್ಜುಗೊಳಿಸುವ ವಿಚಾರವಾಗಿ ರಕ್ಷಣಾ ಸಚಿವಾಲಯ, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಜೊತೆ ಮಾತುಕತೆ ನಡೆಸುತ್ತಿದೆ. ರಕ್ಷಣಾ ಸ್ವಾಧೀನ ಸಮಿತಿ (ಡಿಎಸಿ) ಹಸಿರು ನಿಶಾನೆ ತೋರಿದ ನಂತರ ಈ ಪ್ರಕ್ರಿಯೆ ಆರಂಭವಾಗಿದೆ. ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ನಂತರ ಈ ಯೋಜನೆಗೆ ಅನುಮತಿ ನೀಡಲಿದೆ.
ಒಂದೇ ದಿನ ಎರಡು ಪ್ರಯೋಗಡಿಆರ್​ಡಿಒ ತಯಾರಿಸಿರುವ ‘ರುದ್ರಂ’ ಹೆಸರಿನ ವಿಕಿರಣ ಪ್ರತಿಬಂಧಕ ಕ್ಷಿಪಣಿಯ ಪರೀಕ್ಷೆಯನ್ನೂ ಶುಕ್ರವಾರವೇ ನಡೆಸಲಾಗಿತ್ತು. ರುಸ್ತುಂ ಕೂಡ ಶುಕ್ರವಾರ ಪರೀಕ್ಷೆಗೊಳಪಟ್ಟಿದೆ. ಒಂದೇ ದಿನ ರಕ್ಷಣಾ ಮಹತ್ವದ ಎರಡು ಪರೀಕ್ಷಾರ್ಥ ಪ್ರಯೋಗ ನಡೆದಂತಾಗಿದೆ.
‘ಛೋಟಾ ತೆಲಗಿ’ ಎಂಬ ಈ ಖತರ್ನಾಕ್ ವ್ಯಕ್ತಿ ಪೊಲೀಸರ ಬಲೆಗೆ ಬಿದ್ದಿದ್ದೇ ರೋಚಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + two =
Remember me
