ನವದೆಹಲಿ:ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ನಂದಿನಿ ಅಗರ್​ವಾಲ್ ಹಾಗೂ ಮಂಗಳೂರಿನ ರುಥ್ ಕ್ಲೇರ್ ಡಿಸಿಲ್ವಾ ದೇಶಕ್ಕೆ ಟಾಪರ್​ಗಳಾಗಿದ್ದಾರೆ. ಹಳೆಯ ಕೋರ್ಸ್​ನಲ್ಲಿ ರುತ್ ಕ್ಲೇರ್ ಡಿಸಿಲ್ವಾ ಅಖಿಲ ಭಾರತ ಮಟ್ಟದ ಮೊದಲ ರ್ಯಾಂಕ್ ಗಳಿಸಿದರೆ, ಮಾಳವಿಕಾ ಆರ್. ಕೃಷ್ಣನ್ ಎರಡನೇ ರ್ಯಾಂಕ್ ಪಡೆದಿದ್ದಾರೆ. ಹೊಸ ಕೋರ್ಸ್​ನಲ್ಲಿ ನಂದಿನಿ ಅಗರ್​ವಾಲ್ ಮೊದಲ ರ್ಯಾಂಕ್, ಸಾಕ್ಷಿ ಐರಾನ್ ಎರಡನೇ ರ್ಯಾಂಕ್, ಬೆಂಗಳೂರಿನ ಬಗ್ರೇಚ ಸಾಕ್ಷಿ ರಾಜೇಂದ್ರ 3ನೇ ರ್ಯಾಂಕ್ ಗಳಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ರಬಕವಿಯ ಲಕ್ಷ್ಮೀ ಸೊಲ್ಲಾಪುರ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 46,139 ಮಂದಿ ಹಳೆಯ ಕೋರ್ಸ್ ಮತ್ತು 83,606 ಅಭ್ಯರ್ಥಿಗಳು ಹೊಸ ಕೋರ್ಸ್ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. 82,839 ಮಂದಿ ಫೌಂಡೇಷನ್ ಕೋರ್ಸ್ ಬರೆದಿದ್ದರು. ಅಂತಿಮ ಪರೀಕ್ಷೆಯು ಜುಲೈ 5ರಿಂದ 19ರವರೆಗೆ ನಡೆದಿತ್ತು.
ಕರಾವಳಿ ಬೆಡಗಿ ಸಾಧನೆ:ರುಥ್ ಕ್ಲೇರ್ ಕರಾವಳಿ ಭಾಗದಿಂದ ಸಿಎ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಮೊದಲ ವಿದ್ಯಾರ್ಥಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಇವರು ಮಂಗಳೂರು ಬಲ್ಮಠದ ಸಿಎ ವಿವಿಯನ್ ಪಿಂಟೋ ಆಂಡ್ ಕಂಪನಿಯಲ್ಲಿ ಆರ್ಟಿಕಲ್​ಶಿಪ್ ಪೂರ್ಣಗೊಳಿಸಿದ್ದರು. ರುಥ್ ತುಂಬಾ ಬುದ್ಧಿವಂತ ಹುಡುಗಿ. ಆಕೆ ಸಾಮರ್ಥ್ಯದ ಬಗೆಗೆ ಇರುವ ವಿಶ್ವಾಸವೇ ಆಕೆಯ ಬಲ. ಕೆಲಸದ ಮೌಲ್ಯಗಳ ಬಗ್ಗೆ ನಾವೂ ಪ್ರಭಾವಿತವಾಗಿದ್ದೇವೆ ಎಂದು ವಿವಿಯನ್ ಪ್ರತಿಕ್ರಿಯಿಸಿದ್ದಾರೆ. ರುಥ್ ಇತಿಹಾಸ ನಿರ್ವಿುಸಿದ್ದಾರೆ. ಗುರಿಯೆಡೆಗೆ ಸಾಗುವ ಬದ್ಧತೆಯಲ್ಲಿ ರಾಜಿ ಮಾಡಿಕೊಳ್ಳದಿದ್ದರೆ ಗೆಲುವು ನಿಶ್ಚಿತ ಎನ್ನುವುದಕ್ಕೆ ರುಥ್ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದು ಆಕೆಯ ಗುರು, ಸೆಂಟರ್ ಫಾರ್ ಇಂಟೆಗ್ರೇಟೆಡ್ ಲರ್ನಿಂಗ್(ಸಿಐಎಲ್) ಕನ್ವೀನರ್ ನಂದಗೋಪಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.
ಪರೀಕ್ಷೆ ಕಠಿಣವಿತ್ತು. ಆದರೆ ನಾನು ಅತ್ಯುತ್ತಮ ರೀತಿಯಲ್ಲಿ ನಿಭಾಯಿಸಲು ಪ್ರಯತ್ನಿಸಿದ್ದೇನೆ. ಪ್ರಥಮ ರ್ಯಾಂಕ್ ನಿರೀಕ್ಷೆ ಮಾಡಿರಲಿಲ್ಲ.
|ರುಥ್ ಕ್ಲೇರ್ಡಿಸಿಲ್ವಾ
ಸಿಎ ವ್ಯಾಸಂಗ ಮಾಡುವುದು ಎಂದರೆ, ಒಂದು ರೀತಿಯಲ್ಲಿ ತಪಸ್ಸು ಮಾಡಿದಂತೆ. ಸೋಷಿಯಲ್ ಮೀಡಿಯಾ ದಿಂದ ದೂರ ಉಳಿದು ಕೇವಲ ವ್ಯಾಸಂಗ ಮಾಡುತ್ತಿದ್ದೆ. ಪ್ರತಿ ನಿತ್ಯ 10 ಗಂಟೆ ವ್ಯಾಸಂಗದ ಫಲವಾಗಿ ಈ ರ್ಯಾಂಕ್ ಸಿಕ್ಕಿದೆ.
|ಸಾಕ್ಷಿ3ನೇ ರ್ಯಾಂಕ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
