ದೆಹಲಿ:ಪ್ರಸ್ತುತ ಐಪಿಎಲ್​ ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಈ ಬಾರಿ ಕಪ್​ನ್ನು ಯಾರು ಗೆಲ್ಲುತ್ತಾರೆ ಎಂಬ ಕೌತುಕ ಹೆಚ್ಚಾಗಿದೆ. ಈ ನಡುವೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಋತುರಾಜ್​ ಗಾಯಕ್ವಾಡ್ ಐಪಿಎಲ್​ ಬಳಿಕ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಶುಭ ಸುದ್ದಿಯೊಂದು ಹೊರಬಿದ್ದಿದೆ.
ಇದನ್ನೂ ಓದಿ:ಬಾಬಾ ರಾಮ​ದೇವ್ ಮತ್ತು ನಟ ಧನುಷ್ ಫೋಟೋ ವೈರಲ್; ಬಾಬಾ ರಾಮ​ದೇವ್ ಇದು ನೀವಾ? ಎಂದ ನೆಟ್ಟಿಗರು
ಈ ಹಿನ್ನೆಲೆಯಲ್ಲಿ ಋತುರಾಜ್​ ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಂದ್ಯಗಳನ್ನು ಅಲಭ್ಯರಾಗುವ ಸಾಧ್ಯತೆ ಹೆಚ್ಚಾಗಿದೆ. ಜೂನ್​ 2 ಮತ್ತು 3ರಂದು ಮದುವೆ ಸಮಾರಂಭವಿರುವ ಕಾರಣ ಈ ಪಂದ್ಯಗಳಿಗೆ ಗೈರಾಗಲಿದ್ದು, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ಗೆ ಅಲಭ್ಯರಾಗಿದ್ದಾರೆ. ಜೂನ್​ 7ರಂದು ಇಂಗ್ಲೆಂಡ್​ನ ಲಂಡನ್​ನ ದಿ ಓವಲ್‌ ಕ್ರಿಕೆಟ್​ ಸ್ಟೇಡಿಯಂನಲ್ಲಿ ಈ ಮಹತ್ವದ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಚಾಂಪಿಯನ್​ ಪಟ್ಟಕ್ಕಾಗಿ ಭಾರತ-ಆಸ್ಟ್ರೇಲಿಯಾ ಸೆಣಸಾಟ ನಡೆಸಲಿವೆ.
ಇನ್ನು ಋತುರಾಜ್​ ಹಾಗೂ ಮಹಾರಾಷ್ಟ್ರದ ಕ್ರಿಕೆಟ್ ಆಟಗಾರ್ತಿ ಉತ್ಕರ್ಷ ಪವಾರ್ ಮದುವೆ ನಡೆಯಲಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದು, ಎರಡೂ ಕುಟುಂಬಗಳು ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ. ಕೆಲ ದಿನಗಳ ಹಿಂದೆ ಇವರಿಬ್ಬರು ಜಿಮ್‌ನಲ್ಲಿ ಒಟ್ಟಿಗೆ ತೆಗೆಸಿಕೊಂಡ ಫೋಟೋವೊಂದು ಭಾರೀ ವೈರಲ್ ಆಗಿತ್ತು.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + two =
Remember me
