ವಿಶಾಖಪಟ್ಟಣಂ:ಕಳೆದ ವಾರ ನಡೆದ ಹಾಗೂ ಇಡೀ ವಿಶಾಖಪಟ್ಟಣವನ್ನು ಬೆಚ್ಚಿಬೀಳಿಸಿದ ಎನ್​ಆರ್​ಐ ಸತೀಶ್​ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ. ಸತೀಶ್​ ಪತ್ನಿ ರಮ್ಯಾ ತನ್ನ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.
ರಮ್ಯಾ ಶಾಲಾ ದಿನಗಳಲ್ಲೇ ಭಾಷಾ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗಷ್ಟೇ ಅವರಿಬ್ಬರು ವಾಟ್ಸ್​ಆ್ಯಪ್​ ಗ್ರೂಪ್​ ಮೂಲಕ ಮತ್ತೆ ಒಂದಾಗಿದ್ದರು. ಪರಸ್ಪರ ನಂಬರ್​ ವಿನಿಮಯ ಮಾಡಿಕೊಂಡು ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದರು. ಇಬ್ಬರು ಸರಸ ಸಲ್ಲಾಪಕ್ಕೆ ಸತೀಶ್​ ಅಡ್ಡಲಾಗಿದ್ದ. ಹೀಗಾಗಿ ಇಬ್ಬರು ಸೇರಿ ಸತೀಶ್​ ಕೊಲೆಗೆ ಸಂಚು ರೂಪಿಸಿ, ಕಳೆದ ವಾರ ಕಬ್ಬಿಣದ ಸಲಾಕೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ.
ಸದ್ಯ ಸತೀಶ್​ ಪತ್ನಿ ರಮ್ಯಾ ಮತ್ತು ಭಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಸತೀಶ್​, ವಿಶಾಖಪಟ್ಟಣದ ಪಾಲಮ್​ ನಿವಾಸಿ. ಕಳೆದ ವಾರ ಪತ್ನಿ ಮತ್ತು ಮಕ್ಕಳೊಂದಿಗೆ ನಡೆದು ಹೋಗುವಾಗ ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ಸಲಾಕೆಯಿಂದ ದಾಳಿ ಮಾಡಿ ಸತೀಶ್​ನನ್ನು ಕೊಲೆ ಮಾಡಿದ್ದ. ಇದಾದ ಬಳಿಕ ರಮ್ಯಾ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದಳು.
ಸತೀಶ್​ ದುಬೈನಲ್ಲಿ ತನ್ನ ಸ್ನೇಹಿತ ಸುಧಾಕರ್​ ರೆಡ್ಡಿಯೊಂದಿಗೆ ಸಣ್ಣ ಉದ್ಯಮವೊಂದನ್ನು ನಡೆಸುತ್ತಿದ್ದ. ವ್ಯವಹಾರದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸತೀಶ್​ ಭಾರತದಲ್ಲೇ ನೆಲೆಸಿದ್ದ. ಇಬ್ಬರ ನಡುವೆ ಅನೇಕ ಬಾರಿ ಫೋನ್​ ಕರೆಗಳು ವಿನಿಮಯ ಆಗಿತ್ತು. ಇದಕ್ಕೆಲ್ಲಾ ಕಾರಣ ಸುಧಾಕರ್​ ರೆಡ್ಡಿ ಎಂದು ರಮ್ಯಾ ದೂರು ನೀಡಿದ್ದಳು. ಆದರೂ ಪೊಲೀಸ್​ ತನಿಖೆಯಲ್ಲಿ ಇದರಲ್ಲಿ ಸುಧಾಕರ್​ ರೆಡ್ಡಿ ಕೈವಾಡ ಇಲ್ಲ ಎಂದು ಬಯಲಾಗಿತ್ತು.
ಇದರ ನಡುವೆ ಸತೀಶ್​ ಪತ್ನಿ ರಮ್ಯಾ ನಡೆ ಅನುಮಾನ ಮೂಡುವಂತಿತ್ತು. ಆಳವಾಗಿ ತನಿಖೆಗೆ ಇಳಿದ ಪೊಲೀಸರಿಗೆ ರಮ್ಯಾ ಹೈಸ್ಕೂಲ್​ನಲ್ಲೇ ಬಾಷಾನನ್ನು ಪ್ರೀತಿಸುತ್ತಿದ್ದಳು ಎಂಬಾ ವಿಚಾರ ತಿಳಿದಿದೆ. ರಮ್ಯಾ ಮದುವೆ ಆಗುವವರೆಗೂ ಇಬ್ಬರ ನಡುವಿನ ಪ್ರೇಮ ಸಂಬಂಧ ಹಾಗೇ ಮುಂದುವರಿದಿತ್ತು. ಇದರ ನಡುವೆ ರಮ್ಯಾ ಮತ್ತು ಬಾಷಾಗೆ ಬೇರೆ ಬೇರೆ ಮದುವೆ ಆಗಿ, ಇಬ್ಬರ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಹೀಗಿರುವಾಗ ಹೈಸ್ಕೂಲ್​ ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಇಬ್ಬರ ಪರಿಚಯ ಆಗಿ, ನಂತರ ದೈಹಿಕ ಸಂಪರ್ಕವೂ ಮುಂದುವರಿದಿದೆ. ಇಬ್ಬರು ಓಡಿ ಹೋಗುವ ಸಂಚು ರೂಪಿಸಿದ್ದರು. ಅದು ಸಾಧ್ಯವಾಗದಿದ್ದಾಗ ನಂತರ ಮಾಡಿದ್ದೇ ಕೊಲೆ ಮಾಡುವ ಸಂಚು.
ಗಂಡನನ್ನು ಕೊಲೆ ಮಾಡಿದರೆ ಪ್ರಿಯಕರನ ಜತೆ ಆರಾಮಾಗಿ ಇರಬಹುದು ಎಂಬುದು ರಮ್ಯಾಳ ದುರಾಲೋಚನೆ ಆಗಿತ್ತು. ಈ ಹಂತದಲ್ಲಿ ಆಕೆಗೆ ಕಾನೂನಿನ ಭಯವೂ ಇರಲಿಲ್ಲ. ರಮ್ಯಾ ಮತ್ತು ಬಾಷಾ ಸಂಚು ರೂಪಿಸಿ ಕೊಲೆ ಮಾಡಿ, ಅದನ್ನು ಸುಧಾಕರ್​ ರೆಡ್ಡಿ ತಲೆಗೆ ಕಟ್ಟಲು ಮುಂದಾಗಿದ್ದರು. ಆದರೆ, ಕೊಲೆಗಾರ ಎಷ್ಟೇ ಬುದ್ಧಿವಂತನಾದರೂ ಒಂದು ಸುಳಿವು ಬಿಟ್ಟಿರಲೇಬೇಕು ಅನ್ನುವಂತೆ ಕೊನೆಗೂ ಇಬ್ಬರ ಕರಾಳ ಮುಖ ಬಟಾಬಯಲಾಗಿದೆ. ಅಂತಿಮವಾಗಿ ರಮ್ಯಾ ಮತ್ತು ಬಾಷಾ ಸಿಕ್ಕಿಬಿದ್ದಿದ್ದು, ವಿಶಾಖಪಟ್ಟಣದ ಪೊಲೀಸರು ಬಂಧಿಸಿದ್ದಾರೆ. ರಮ್ಯಾ ಜೈಲಿನ ಹಾದಿ ಹಿಡಿದಿದ್ದು, ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.(ಏಜೆನ್ಸೀಸ್​)
ನಿಮಗೆ ನಾಚಿಕೆ ಆಗ್ಬೇಕು ಎಂದು ಸೆನ್ಸಾರ್​ ಮಂಡಳಿ ವಿರುದ್ಧ ಗುಡುಗುತ್ತಲೇ ಓಪನ್​ ಆಫರ್​ ಕೊಟ್ಟ ಶಕೀಲಾ!

ನಮ್ಮ ಊಹೆ ತಪ್ಪಾಯಿತು, ನೀವು ಮಾಡಿದ್ದು ಸರಿಯಲ್ಲ: ಸುದೀಪ್​ ಮೇಲೆ ನೆಟ್ಟಿಗರ ಬೇಸರ..!

ವಿಶ್ವದ 6 ಪ್ರತಿಭಾವಂತ ಮಹಿಳೆಯರಲ್ಲಿ ನಿರ್ಭಯಾ ಪ್ರಕರಣದ ವಕೀಲೆಯು ಒಬ್ಬರು! ಹುಬ್ಬೇರಿಸುವ ಮುನ್ನ ಅಸಲಿ ವಿಚಾರ ಓದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
