ಕೂಚ್​ಬೆಹಾರ್ (ಪಶ್ಚಿಮ ಬಂಗಾಳ):ಹಾಡು ಹಾಕಲೆಂದು ಪಿಕಪ್ ವಾಹನಕ್ಕೆ ಅಳವಡಿಸಿದ್ದ ಡಿಜೆ ಸಿಸ್ಟಮ್ 10 ಮಂದಿಯನ್ನು ಬಲಿ ಪಡೆದಿರುವ ಘಟನೆ ಪಶ್ಚಿಮ ಬಂಗಾಳದ ಕೂಚ್​ ಬೆಹಾರ್ ಜಿಲ್ಲೆಯಲ್ಲಿ ಜಲ್ಪೇಶ್​ ಬಳಿ ನಡೆದಿದೆ.
ಜಲ್ಪೇಶ್​ಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ವಾಹನಕ್ಕೆ ವಿದ್ಯುತ್ ಪ್ರವಹಿಸಿ ಈ ಅವಘಡ ಸಂಭವಿಸಿದೆ. ವಾಹನದಲ್ಲಿದ್ದ 10 ಮಂದಿ ಪ್ರಯಾಣಿಕರು ಬೆಂಕಿಗೆ ದಹಿಸಿ ಹೋಗಿದ್ದರೆ, 16 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಲ್​ಪೈಗುರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮೆಖ್ಲಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಡಿಜೆ ಸಿಸ್ಟಮ್​ಗಾಗಿ ಬಳಸುತ್ತಿದ್ದ ಜನರೇಟರ್​ನ ವೈರಿಂಗ್​ನಲ್ಲಿ ಉಂಟಾದ ಸಮಸ್ಯೆಯೇ ಈ ಅನಾಹುತಕ್ಕೆ ಕಾರಣ. ಜನರೇಟರ್ ಅನ್ನು ವಾಹನದ ಹಿಂಭಾಗದಲ್ಲಿ ಅಳವಡಿಸಲಾಗಿತ್ತು ಎಂದು ಮಾತಭಂಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ವರ್ಮಾ ಹೇಳಿದರು.
ಘಟನೆಗೆ ಕಾರಣವಾದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚಾಲಕ ಪರಾರಿಯಾಗಿದ್ದಾನೆ. ಮೃತರು ಮತ್ತು ಗಾಯಾಳುಗಳೆಲ್ಲರೂ ಸಿತಾಲ್​ಕುಚಿ ಪ್ರದೇಶಕ್ಕೆ ಸೇರಿದವರು. ಎಲ್ಲರ ಕುಟುಂಬಗಳಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.(ಏಜೆನ್ಸೀಸ್​)
ಪುರುಷನ ಆ ಅಂಗದ ಮೇಲೆ 99ರ ಅಜ್ಜಿಗೆ ಇದೆಂಥ ಪ್ರೀತಿ! ಕೊನೆಯ ಆಸೆ ಕೇಳಿ ಎಲ್ಲರೂ ಶಾಕ್​, ಈಡೇರಿಸಿದರು ಬಯಕೆ…

ಅವನು ಇಲ್ಲಿ ಬರಲಾರ, ಇವಳು ಅಲ್ಲಿ ಹೋಗಲಾರಳು: ಪೇಚಿಗೆ ಸಿಲುಕಿದ ಪ್ರೇಮಿಗಳ ಆನ್​ಲೈನ್​ ಮದುವೆಗೆ ಹೈಕೋರ್ಟ್ ಅಸ್ತು

ಲೈಂಗಿಕ ಕ್ರಿಯೆ ವೇಳೆ ಸಂಗಾತಿಯ ಒಪ್ಪಿಗೆಯಿಲ್ಲದೆ ಕಾಂಡೋಮ್ ತೆಗೆಯುವುದು ಅಪರಾಧ: ಸುಪ್ರೀಂಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
