ಪುಣೆ:ಈಗ ಗಣೇಶ ಚತುರ್ಥಿ ನಡೆಯುತ್ತಿದೆ. ಭಕ್ತರು ತಮ್ಮ ಆರಾಧ್ಯ ದೈವನಿಗೆ ವಿವಿಧ ಬಗೆಯ ತಿನಿಸುಗಳನ್ನು ನೈವೇದ್ಯ ಮಾಡುತ್ತಾರೆ, ಜತೆಗೆ ಗಣೇಶನ ದೇವಾಲಯಗಳಿಗೆ ಹೋಗಿ ಕಾಣಿಕೆ ಅರ್ಪಿಸುತ್ತಾರೆ. ಆದರೆ ಪುಣೆಯ ಭಕ್ತನೊಬ್ಬ ಅರ್ಪಿಸಿರುವ ಕಾಣಿಕೆ ಮಾತ್ರ ಇದೀಗ ಭಾರಿ ಸುದ್ದಿಯಾಗಿದೆ.
ಅದೇನೆಂದರೆ ಪುಣೆಯ ದಗ್ಡುಶೇತ್ ಹಲವಾಯಿ ಗಣಪತಿಗೆ ಭಕ್ತನೊಬ್ಬ 10 ಕೆ.ಜಿ ಚಿನ್ನದ ಕಿರೀಟವನ್ನು ನೀಡಿದ್ದಾರೆ. ಇದರ ಬೆಲೆ ಸುಮಾರು 6 ಕೋಟಿ ರೂಪಾಯಿ! ಗಣೇಶೋತ್ಸವದ ಮೊದಲ ದಿನ ಈ ಕಿರೀಟವನ್ನು ಗಣಪನಿಗೆ ತೊಡಿಸಲಾಗಿದೆ. ಆದರೆ ಈ ಭಕ್ತನ ಹೆಸರನ್ನು ಮಾತ್ರ ಕೆಲವೊಂದು ಕಾರಣಗಳಿಂದ ದೇವಾಲಯದ ಆಡಳಿತ ಮಂಡಳಿ ಬಹಿರಂಗಪಡಿಸಿಲ್ಲ.
ಅಂದಹಾಗೆ ಈ ಕಿರೀಟದಲ್ಲಿ ಬಹಳಷ್ಟು ವಿಶೇಷತೆಗಳಿವೆ. ವಿವಿಧ ರೀತಿಯ ಕಸೂತಿಗಳನ್ನು ಕೆತ್ತಲಾಗಿದೆ. ಇವರು ದಗ್ಡುಶೇತ್ ಹಲವಾಯಿ ಗಣಪತಿಯಲ್ಲಿ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಆದ್ದರಿಂದ ತಮ್ಮ ಇಷ್ಟಾರ್ಥವನ್ನ ಈಡೇರಿಸಲು ಇಂಥದ್ದೊಂದು ಕಾಣಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಗಣಪನಿಗೆ ಅಪಾರ ಭಕ್ತರಿದ್ದು, ಪಾದಪೂಜೆಗೆಂದೇ ದೇಶ -ವಿದೇಶಗಳ ಭಕ್ತರು ಸನ್ನಿಧಾನಕ್ಕೆ ಬರುತ್ತಿದ್ದಾರೆ. ಇದೀಗ ಈ ಗಣಪ ಮತ್ತಷ್ಟು ಪ್ರಸಿದ್ಧಿಗೆ ಬಂದಿದ್ದಾನೆ.
ತಮ್ಮ ಇಷ್ಟದ ಗಣಪತಿ ಚಿನ್ನದ ಕಿರೀಟದಿಂದ ಹೇಗೆ ಕಂಗೊಳಿಸುತ್ತಿದ್ದಾನೆ ಎನ್ನುವುದನ್ನು ಭಕ್ತರು ಆನ್‌ಲೈನ್‌ ಮೂಲಕ ನೋಡಬಹುದು ಎಂದಿದೆ ಆಡಳಿತ ಮಂಡಳಿ. ಕರೊನಾ ಕಾರಣದಿಂದ ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿದ್ದು, ದೇವಾಲಯಕ್ಕೆ ಪ್ರವೇಶವಿಲ್ಲ. ಆದ್ದರಿಂದ ಆನ್‌ಲೈನ್ ದರ್ಶನ ಸೌಲಭ್ಯದ ಲಾಭವನ್ನು ಪಡೆದುಕೊಳ್ಳಬೇಕು ಎಂದು ದೇವಾಲಯದ ಟ್ರಸ್ಟ್ ಹೇಳಿದೆ.
ನೀವೂ ಈ ಗಣೇಶನ ಕಣ್ತುಂಬಿಸಿಕೊಳ್ಳಿ-ಕೃಪೆ ಎಎನ್‌ಐ

ಗೋಡ್ಸೆ ಪ್ರತಿಮೆ ಸ್ಥಾಪನೆಗೆ ಸಿದ್ಧತೆ: ಸತ್ಯದ ಅನಾವರಣವಾಗಬೇಕಿದೆ ಎಂದ ಯುವ ಸಮೂಹ- ಗಲ್ಲಿಗೇರಿಸಿದ ದಿನವೇ ಉದ್ಘಾಟನೆ

ಮಮತಾ v/s ಪ್ರಿಯಾಂಕಾ- ಚುನಾವಣಾ ಕಣದಲ್ಲಿ ವಕೀಲರು: ಭವಾನಿಪುರದ ಇಂಟರೆಸ್ಟಿಂಗ್‌ ತ್ರಿಕೋನ ಸ್ಟೋರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
