ವಾಷಿಂಗ್ಟನ್​:ಯುವಕನೊಬ್ಬ ತಯಾರು ಮಾಡಿರುವ ವಿಡಿಯೋ ಒಂದು 48 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಅದರಲ್ಲೇನು ವಿಶೇಷ ಎಂದುಕೊಂಡ್ರಾ? ಈ ವಿಡಿಯೋ ಇರುವುದು ಕೇವಲ ಹತ್ತೇ ಹತ್ತು ಸೆಕೆಂಡ್​! ಆ ಹತ್ತು ಸೆಕೆಂಡ್​ನಲ್ಲಿ ಇರುವುದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​!
ಮಿಯಾಮಿಯ ನಿವಾಸಿ ಪಬ್ಲೊ ರೋಡ್ರಿಗಸ್ ಫ್ರೈಲ್​ ಎಂಬ ಯುವಕ ಈ ವಿಡಿಯೋ ತಯಾರಿಸಿದ್ದರು. ಇದಕ್ಕೆ ಆತ ಖರ್ಚು ಮಾಡಿರುವ ಹಣ 67 ಸಾವಿರ ಡಾಲರ್. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ ಸುಮಾರು 49.23 ಲಕ್ಷ ರೂಪಾಯಿ. ಆದರೆ ಈ ವಿಡಿಯೋ ಇದೀಗ ಮಾರಾಟ ಆಗಿರುವುದು 6.6 ಮಿಲಿಯನ್​ ಡಾಲರ್​ಗೆ ಅಮದರೆ ಸುಮಾರು 48.47 ಕೋಟಿ ರೂಪಾಯಿಗೆ!
ಸದ್ಯ ಇಡೀ ಜಗತ್ತಿನಾದ್ಯಂತ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಇರುವುದು ಮೊದಲೇ ಹೇಳಿದಂತೆ ಟ್ರಂಪ್​. ಈ ವಿಡಿಯೋದಲ್ಲಿ ಟ್ರಂಪ್​ ಮಲಗಿಕೊಂಡಿದ್ದಾರೆ. ಅವರ ಶರೀರದ ಮೇಲೆ ಹಲವಾರು ಸಂದೇಶಗಳನ್ನು ಬರೆಯಲಾಗಿದೆ.
ಲೂಸರ್​, ಶಿಟ್​… ಇತ್ಯಾದಿ ಬರಹಗಳು ಅವರ ಮೈಮೇಲೆ ಬಂದಿದೆ. ಜನ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಿರುವುದು ಕೂಡ ಈ ವಿಡಿಯೋದಲ್ಲಿ ನೋಡಬಹುದು.
ವರದಿಯ ಪ್ರಕಾರ ಈ ಡಿಜಿಟಲ್ ವಿಡಿಯೋ ಖರೀದಿಸಲು ಮೊದಲ ಸಲ ಕ್ರಿಪ್ಟೋಕರೆನ್ಸಿ ಬಳಸಲಾಗಿದೆ. ಈ ವಿಡಿಯೋದಲ್ಲೊಂದು ಡಿಜಿಟಲ್ ಹಸ್ತಾಕ್ಷರವಿದೆ. ಈ ಡಿಜಿಟಲ್ ವಿಡಿಯೋದಲ್ಲಿ ಮೊದಲ ಸಲ ನಾನ್ ಪಂಜಿಬಲ್ ಟೋಕನ್ (ಎನ್​ಎಫ್​ಟಿ) ಬಳಕೆಯಾಗಿದೆ.
ನೀವೂ ನೋಡಿ ಈ ವಿಡಿಯೋ… (ಕೃಪೆ ರೈಟರ್ಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − fourteen =
Remember me
