ಪಟ್ನಾ:ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಮಗುವಿಗೆ ಜನ್ಮನೀಡಿ, ಪರೀಕ್ಷೆ ಬರೆದುಬಂದ ಯುವತಿಯೊಬ್ಬಳ ಘಟನೆ ಈಚೆಗಷ್ಟೇ ನಡೆದಿದೆ. ಇದೀಗ 10ನೇ ಪರೀಕ್ಷೆ ಬರೆಯುತ್ತಲೇ ಮಗುವಿನ ಜನ್ಮ ನೀಡಿದ ಘಟನೆ ಬಿಹಾರದ ಮುಜಾಫರ್ಪುರ್ ಜಿಲ್ಲೆಯಲ್ಲಿ ನಡೆದಿದೆ.
ಶಾಂತಿ ದೇವಿ ಎಂಬ 20 ವರ್ಷದ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ. ಈಕೆ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಳು. ಆ ಸಮಯದಲ್ಲಿಯೇ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಮಗುವಿಗೆ ‘ಇಮ್ತಿಹಾನ್’ (ಪರೀಕ್ಷೆ) ಎಂದು ಹೆಸರಿಡಲಾಗಿದೆ.
ಮಹಾಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಕೇಂದ್ರದ ಮುಖ್ಯಸ್ಥೆ ಮೀರಾ ಮಧುಮಿತ ಹೇಳಿದ್ದಾರೆ. ಕಾಲೇಜಿನಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷಾ ಕೇಂದ್ರವನ್ನು ತೆರೆಯಲಾಗಿದೆ. ಅಂತೆಯೇ ಶುಕ್ರವಾರ ಶಾಂತಿ ದೇವಿ ಪರೀಕ್ಷೆ ಬರೆಯಲು ಬಂದಿದ್ದಳು. ಪರೀಕ್ಷೆ ಬರೆಯಲು ಕುಳಿತ 1 ಗಂಟೆಯ ನಂತರ ಆಕೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಕೂಡಲೇ ಕೇಂದ್ರ ಉಸ್ತುವಾರಿಗೆ ಮಾಹಿತಿ ರವಾನಿಸಲಾಗಿದೆ. ಆಕೆಗೆ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೋಣೆಯಲ್ಲಿ ಅನುಮತಿ ಕೇಳಲಾಯಿತು. ನಂತರ ಜಿಲ್ಲಾ ಶಿಕ್ಷಣ ಅಧಿಕಾರಿಗೂ ಈ ಬಗ್ಗೆ ಮಾಹಿತಿ ರವಾನೆ ಮಾಡಲಾಗಿದೆ. ನಂತರ ಯುವತಿಯನ್ನು ಅಂಬ್ಯುಲೆನ್ಸ್‌ ಮೂಲಕ ಸದರ್ ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ಆಕೆ ಸಂಜೆ ಗಂಡು ಮಗುವಿಗೆ ಜನ್ಮ ನೀಡಿದಳು.
ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಶಾಂತಿ ಆರೋಗ್ಯವಾಗಿದ್ದಾಳೆ. ನೋವು ಪ್ರಾರಂಭವಾಗುವ ಮೊದಲು ಆಕೆ ಟಿಕ್ ಮಾದರಿಯ ಪ್ರಶ್ನೆಗಳನ್ನು ಮುಗಿಸಿದ್ದಾಳೆ. ಸದ್ಯ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪತಿ ಬಿರ್ಜು ಸೆಹ್ನಿ ಹೇಳಿದ್ದಾರೆ. ಪರೀಕ್ಷೆಯ ಸಮಯದಲ್ಲಿ ದೇವರು ಮಗು ಕರುಣಿಸಿದ್ದಾನೆ ಎಂದಿದ್ದಾರೆ ಈಕೆಯ ಪತಿ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
﻿
ಉನ್ನಾವ್‌ ಬಾಲಕಿಯರ ಸಾವಿನ ಪ್ರಕರಣ: ಆರೋಪಿ ವಿನಯ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ…

ಪತಿಯ ಕಣ್ತಪ್ಪಿಸಿ ನಡುರಾತ್ರಿ ಪ್ರೇಮಿಯ ಜತೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಬೆಳಗಾವಿ ಬೆಡಗಿ: ಮುಂದೇನಾಯ್ತು?

ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!

ಹಾಸನದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ- ನಾಲ್ವರ ದುರ್ಮರಣ: 14 ಮಂದಿಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eighteen =
Remember me
