ಕೋಟಾ (ರಾಜಸ್ಥಾನ):ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ಇಂದು ಬೆಳಗ್ಗೆ ದೋಣಿ ಮಗುಚಿ ಬಿದ್ದಿದ್ದು, ಕನಿಷ್ಠ 11 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. 25 ಮಂದಿಯನ್ನು ರಕ್ಷಿಸಲಾಗಿದೆ.
ರಾಜಸ್ಥಾನದ ಬುಂಡಿ ಜಿಲ್ಲೆಯ ದಿಬ್ರಿಯಲ್ಲಿರುವ ಕಮಲೇಶ್ವರ್ ಮಹಾದೇವ ದೇವಸ್ಥಾನಕ್ಕೆ ತೆರಳಲು ಸುಮಾರು ನಲವತ್ತು ಮಂದಿ ಭಕ್ತರು ಬೆಳಗ್ಗೆ ಸುಮಾರು 8.45ರ ಸುಮಾರಿಗೆ ದೋಣಿ ಹತ್ತಿದ್ದಾರೆ ದೋಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಪರಿಣಾಮ ಭಾರದಿಂದ ದೋಣಿ ಮುಳುಗಿದೆ ಎನ್ನಲಾಗಿದೆ.
ಸ್ಥಳೀಯರು ನೀಡಿರುವ ಮಾಹಿತಿ ಅನ್ವಯ ಕೆಲವು ಜನರು ತಮ್ಮ ಮೋಟಾರ್ ಸೈಕಲ್‌ಗಳನ್ನು ದೋಣಿಯಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದೋಣಿ ಜನರ ಭಾರಕ್ಕೆ ಮುಗುಚಿಕೊಂಡಿದೆ. ಈ ವೇಳೆ ಹಲವರು ಈಜಿ ದಡ ಸೇರುವ ಪ್ರಯತ್ನ ಮಾಡಿದರು. ಇನ್ನೂ ಹಲವರು ಈಜಲಾಗದೇ ಮುಳುಗಿದ್ದಾರೆ ಎಂದಿದ್ದಾರೆ.
ಘಟನೆಯನ್ನು ಕಂಡ ಇಲ್ಲಿನ ಸ್ಥಳೀಯರು ಸೇರಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದ್ದಾರೆ, ಇನ್ನು ಕೆಲವರು ಈಜಿಕೊಂಡು ದಡ ಸೇರಿದ್ದಾರೆ, ಮಕ್ಕಳು ಹಾಗೂ ಮಹಿಳೆಯರು ಸೇರಿ 10ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೋಟಾ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಶರದ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ:ಗಂಡ-ಮಗನನ್ನು ಬದುಕಿಸಲು ಪ್ರಾಣತೆಗೆದ ಹಾವನ್ನು ತಂದು ಪೂಜಿಸಿದಳು: ಮುಂದೇನಾಯ್ತು ನೋಡಿ…
ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ ಹಾಗೂ ರಾಜ್ಯ ವಿಪತ್ತು ನಿರ್ವಹಣೆ ಪಡೆಗಳು ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈವರೆಗೂ 6 ಮಂದಿಯ ದೇಹಗಳು ದೊರೆತಿದ್ದು, ನಾಪತ್ತೆಯಾಗಿರುವವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ದೋಣಿ ದುರಂತ ವಿಚಾರ ತಿಳಿಯುತ್ತಲೇ, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ. ಅಂತೆಯೇ ಕೋಟಾದ ಚಂಬಲ್ ಬಳಿ ದೋಣಿ ಉರುಳಿ ಬಿದ್ದ ಘಟನೆ ದುರದೃಷ್ಟಕರ. ಅಪಘಾತಕ್ಕೀಡಾದವರ ಕುಟುಂಬಗಳಿಗೆ ನನ್ನ ಸಂತಾಪ. ಅಂತೆಯೇ ಕೋಟಾದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಗೆಹ್ಲೊಟ್ ಹೇಳಿದ್ದಾರೆ.
कोटा में थाना खातोली क्षेत्र में चम्बल ढिबरी के पास नाव पलट जाने की घटना बेहद दुखद एवं दुर्भाग्यपूर्ण है। हादसे का शिकार हुए लोगों के परिजनों के प्रति मेरी गहरी संवेदनाएं।
— Ashok Gehlot (@ashokgehlot51)September 16, 2020

ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್’ ಇಂದು​ ಸಂಪೂರ್ಣ: ಏನಿದರ ವಿಶೇಷತೆ?

ಡಿಕೆಶಿ ಪುತ್ರಿ, ಎಸ್​ಎಂ ಕೃಷ್ಣ ಮೊಮ್ಮಗ ಫೆಬ್ರುವರಿಯಲ್ಲಿ ದಾಂಪತ್ಯಕ್ಕೆ ಮುನ್ನುಡಿ…

ಫೇಸ್​ಬುಕ್​ ರಹಸ್ಯ ಬಯಲುಮಾಡಿದ ಮಾಜಿ ಉದ್ಯೋಗಿ: ಚುನಾವಣೆಯ ಗುಟ್ಟು ಬಹಿರಂಗ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + eleven =
Remember me
