ಪುಣೆ:ತಮ್ಮ 11 ವರ್ಷದ ಮಗುವನ್ನು ಅಪ್ಪ-ಅಮ್ಮ 22 ಬೀದಿ ನಾಯಿಗಳ ಜತೆ ವರ್ಷಗಟ್ಟಲೆ ಕೂಡಿ ಹಾಕಿರುವ ಭಯಾನಕ ಘಟನೆ ಪುಣೆಯಿಂದ ವರದಿಯಾಗಿದೆ. ಪುಣೆಯ ಅಪಾರ್ಟ್​ಮೆಂಟ್​ ಒಂದರಲ್ಲಿ ಮಗನನ್ನು ನಾಯಿಗಳ ಜತೆ ಇಡಲಾಗಿದ್ದು, ಇದೀಗ ಬಾಲಕ ಕೂಡ ನಾಯಿಗಳಂತೆ ವರ್ತಿಸುತ್ತಿದ್ದಾನೆ.
ಎರಡು ವರ್ಷಗಳವರೆಗೆ ನಾಯಿಗಳ ಜತೆ ಬಾಲಕ ವಾಸಿಸುತ್ತಿದ್ದು, ಸ್ಥಳೀಯರು ನೀಡಿದ ಮಾಹಿತಿಯಿಂದಾಗಿ ಈ ಘೋರ ಹಾಗೂ ಭಯಾನಕ ಘಟನೆ ಬೆಳಕಿಗೆ ಬಂದಿದೆ. ದಂಪತಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ಸದ್ಯ ಬಾಲಕ ಕೂಡ ಮಾನಸಿಕವಾಗಿ ಅಸ್ವಸ್ಥನಾಗಿದ್ದು, ನಾಯಿಗಳಂತೆ ಬೊಗಳುವುದು, ಕಿರುಚುವುದು ಮಾಡುತ್ತಿದ್ದಾನೆ.
ಮನುಷ್ಯರ ನೆರಳೂ ಆತನ ಮೇಲೆ ಬೀಳದಂತೆ ಇರಿಸಲಾಗಿತ್ತು. ಹೊರಗಿನವರ ಸಂಪರ್ಕ ಇಲ್ಲದೇ ಆತ ಎರಡು ವರ್ಷ ನಾಯಿಗಳ ಜತೆ ಇದ್ದ. 22 ನಾಯಿಗಳ ಪೈಕಿ ನಾಲ್ಕು ನಾಯಿಗಳು ಸತ್ತುಹೋಗಿದ್ದವು. ಅವುಗಳ ಶವ ಕೂಡ ಅಲ್ಲಿಯೇ ಇತ್ತು. ನಾಯಿ ಮಾಡಿಕೊಂಡಿರುವ ಮಲ,ಮೂತ್ರಗಳ ನಡುವೆಯೇ ಬಾಲಕ ವಾಸವಾಗಿದ್ದ ಎಂದು ಭಯಾನಕ ಚಿತ್ರಣವನ್ನು ಸ್ಥಳೀಯರು ವಿವರಿಸುತ್ತಾರೆ.
ಪಾಲಕರು ಹೇಳಿದ್ದೇನು?
ಬಾಲಕನ ತಂದೆ ಒಂದು ಅಂಗಡಿ ನಡೆಸುತ್ತಿದ್ದರೆ, ಅವನ ತಾಯಿ ಪದವೀಧರರಾಗಿದ್ದಾರೆ. ನಾವು ನಾಯಿಗಳನ್ನು ತುಂಬಾ ಪ್ರೀತಿಸುತ್ತೇವೆ. ಅವುಗಳೂ ನಮ್ಮ ಮಕ್ಕಳಿದ್ದಂತೆ. ಹೀಗಾಗಿ ಅವುಗಳೊಂದಿಗೆ ನಮ್ಮ ಮಗನನ್ನು ಇರಿಸಿದ್ದೇವೆ ಅಂತ ಕಾರಣ ನೀಡುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಲಾಗಿದೆ. ಬಾಲಕನ ಪೋಷಕರ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
https://www.vijayavani.net/s-nityananda-writing-in-facebook/
ಐಷಾರಾಮಿ ಜೀವನಕ್ಕಾಗಿ ವಂಚಕನ ಲವ್​ ಮಾಡಿ ಎಲ್ಲಾ ಕಳಕೊಂಡ ನಟಿ ಜಾಕ್ವೆಲಿನ್​ ಮತ್ತೆ ಕೋರ್ಟ್​ಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 3 =
Remember me
