ಲಖನೌ:11ನೇ ಕ್ಲಾಸಿನ ಬಾಲಕಿಯೊಬ್ಬಳು ನೀರಿನ ಟ್ಯಾಂಕ್‌ ಮೇಲೇರಿ ಕುಳಿತು ನಂತರ ಅದರಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಭಯಾನಕ ವಿಡಿಯೋ ಇದೀಗ ವೈರಲ್‌ ಆಗಿದೆ.
ಈಕೆಯ ಪ್ರೇಮಿ ಮಾಡಿದ ಕೃತ್ಯದಿಂದ ಇಂಥದ್ದೊಂದು ಸಾವು ಬಾಲಕಿ ಕಂಡಿರುವುದಾಗಿ ಆರೋಪಿಸಲಾಗಿದೆ. ಉತ್ತರ ಪ್ರದೇಶದ ಮುಜಫರನಗರದ ಮಂಡಿ ಕೋತ್ವಾಲಿ ಕ್ಷೇತ್ರದ ಗಾಂಧಿನಗರದ ನಿವಾಸಿಯಾಗಿರುವ ಬಾಲಕಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು.
ಈ ಸಮಯದಲ್ಲಿ ಅವರಿಬ್ಬರ ನಡುವೆ ನಡೆದಿರುವ ಕೆಲವೊಂದು ಘಟನೆಗಳನ್ನು ಯುವಕ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾನೆ. ನಂತರ ಯಾವುದೋ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ಸಂದರ್ಭದಲ್ಲಿ ತನ್ನಲ್ಲಿರುವ ದೃಶ್ಯಗಳನ್ನು ವೈರಲ್‌ ಮಾಡುವುದಾಗಿ ಯುವಕ ಹೇಳಿದ್ದಾನೆ.
ಇದರಿಂದ ನೊಂದ ಬಾಲಕಿ ನೀರಿನ ಟ್ಯಾಂಕ್‌ ಏರಿ ಕುಳಿತಿದ್ದಾಳೆ. ಕುಟುಂಬಸ್ಥರು ಮತ್ತು ಸ್ಥಳೀಯರು ಕೆಳಗೆ ಇಳಿಯುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ. ತಾನು ಸಾಯುವದಾಗಿ ಹೇಳುತ್ತಿದ್ದಳು. ಹಿಂದಿನಿಂದ ಓರ್ವ ಮೆಟ್ಟಿಲು ಏರಿ ಯುವತಿಯನ್ನ ರಕ್ಷಿಸಲು ಮುಂದಾಗಿದ್ದಾನೆ.
ಆದರೆ ಆತನನ್ನು ನೋಡುತ್ತಲೇ ಬಾಲಕಿ ಕೆಳಗೆ ಜಿಗಿದಿದ್ದಾಳೆ. ಕೂಡಲೇ ಪೋಷಕರು ಯುವತಿಯನ್ನ ಆಸ್ಪತೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಯುವಕನ ವಿರುದ್ಧ ದೂರು ದಾಖಲು ಮಾಡಿಕೊಳ್ಳಲಾಗಿದೆ. ಬಾಲಕಿ ಟ್ಯಾಂಕ್‌ ಏರಿ ಕುಳಿತಿರುವುದು, ಕೆಳಕ್ಕೆ ಹಾರಿರುವುದು ಎಲ್ಲವನ್ನೂ ಸ್ಥಳೀಯರು ವಿಡಿಯೋ ಮಾಡಿಕೊಂಡಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ ಮಾಡಿ

ಜೈಲಾಧಿಕಾರಿ ಸೇರಿದಂತೆ ಎಂಟು ಮಂದಿಯ ಕೊಲೆ ಮಾಡಿ 100ಕ್ಕೂ ಅಧಿಕ ಕೈದಿಗಳು ಎಸ್ಕೇಪ್‌‌!

ಮಾರ್ಚ್‌ ತಿಂಗಳಿನಲ್ಲಿ ಬ್ಯಾಂಕ್‌ ಕೆಲಸ ಇದ್ಯಾ? ಹಾಗಿದ್ರೆ ರಜೆಗಳ ಕುರಿತು ತಿಳಿದುಕೊಳ್ಳಿ..

ಅಮೆರಿಕ ಪ್ರತಿಕಾರ: ಇರಾನ್‌ ಬೆಂಬಲಿತ ಉಗ್ರಗಾಮಿ ತಾಣಗಳ ಮೇಲೆ ವೈಮಾನಿಕ ದಾಳಿ

ಇಂದು ದೇಶವ್ಯಾಪಿ ಲಾರಿ ಸಂಚಾರ ಸ್ತಬ್ಧ- ಜನಸಾಮಾನ್ಯರಿಗೆ ಇಂದಿಲ್ಲ ತೊಂದರೆ, ಆದರೆ ಮುಂದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − 6 =
Remember me
