ಧಾರ್ಚುಲಾ (ಉತ್ತರಾಖಂಡ):ಮೊದಲ ಪತಿಯನ್ನು ತೊರೆದ ಮೇಲೆ ಇನ್ನೊಂದು ಮದ್ವೆಯಾದ ಮಹಿಳೆಯೊಬ್ಬಳು, ಆತನ ಜತೆ ಮಜವಾಗಿರುವ ಸಲುವಾಗಿ ತಾನೇ ಹೆತ್ತ ಮಗಳನ್ನು ಎರಡೆರಡು ಬಾರಿ ಮದುವೆ ಮಾಡಿರುವ ಅಮಾನವೀಯ ಘಟನೆ ಉತ್ತರಾಖಂಡದ ಧಾರ್ಚುಲಾದಲ್ಲಿ ನಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ತಾಯಿ ಮತ್ತು ಆಕೆಯ ಗಂಡ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬಾಲ್ಯ ವಿವಾಹ ವಿರೋಧ ಕಾಯ್ದೆ ಅಡಿ ಇಬ್ಬರನ್ನೂ ಬಂಧಿಸಲಾಗಿದೆ.
12 ವರ್ಷದ ಬಾಲಕಿಯನ್ನು ಕೆಲ ತಿಂಗಳ ಹಿಂದೆ ಇಬ್ಬರೂ ಸೇರಿ ಮದುವೆ ಮಾಡಿಸಿದ್ದರು. ಆದರೆ ಬಾಲಕಿಗೆ ಗಂಡನ ಮನೆಯಲ್ಲಿ ತೀವ್ರ ಹಿಂಸೆ ಕೊಡಲಾಗುತ್ತಿತ್ತು. ಈ ದೌರ್ಜನ್ಯ ಸಹಿಸಿಕೊಳ್ಳಲು ಸಾಧ್ಯವಾಗದ ಬಾಲೆ ಓಡಿ ತವರು ಮನೆಗೆ ಬಂದಿದ್ದಳು. ಈಕೆ ಮನೆಯಲ್ಲಿ ಇದ್ದುದು ತಾಯಿ ಮತ್ತು ಆಕೆಯ ಎರಡನೇ ಗಂಡನಿಗೆ ಹಿಂಸೆ ಆದಂತಾಗಿತ್ತು. ಅದಕ್ಕಾಗಿಯೇ ಕೆಲವೇ ತಿಂಗಳಿನಲ್ಲಿ ಮತ್ತೆ 36 ವರ್ಷದವನ ಜತೆ ಮದುವೆ ಮಾಡಿಸಿದ್ದಾಳೆ.
ಈ ಪ್ರಕರಣ ಬೆಳಕಿಗೆ ಬಂದದ್ದು ಬಾಲಕಿ ಗರ್ಭಿಣಿಯಾದಾಗ. ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಶಿಶು ಅಭಿವೃದ್ಧಿ ಇಲಾಖೆಗೆ ವಿಷಯ ತಿಳಿದಿದ್ದು, ಅವರು ಈ ಮಾಹಿತಿಯನ್ನು ಪೊಲೀಸರ ಗಮನಕ್ಕೆ ತಂದಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ಎರಡನೇ ಪತಿಯನ್ನು ಬಂಧಿಸಿದ್ದರು. ಈಗ ಬಾಲಕಿಯ ತಾಯಿಯನ್ನು ಸಹ ಬಂಧಿಸಿದ್ದಾರೆ.
‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಇಬ್ಬರನ್ನು ಮದ್ವೆಯಾದ, 3ನೇಯವಳ ಜತೆ ಸಂಸಾರ ಮಾಡಿದ- ವೋಟ್​ ಯಾರಿಗೆ ಎಂದು ಪೇಚಿಗೆ ಬಿದ್ದ ಜಿಪಂ ಕಾರ್ಯದರ್ಶಿ!

ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೇ ‘ಅಪ್ಪನ ದಿನ’ದ ಶುಭಾಶಯ ಪತ್ರ! ಭಾವುಕರಾದ ಜಡ್ಜ್​- ಜಾಮೀನು ಮಂಜೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 18 =
Remember me
