ಸೂರತ್ (ಗುಜರಾತ್​):ಇಂದು ರಾಷ್ಟ್ರಪತಿ ಚುನಾವಣೆ. ಎನ್​ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ನಿಶ್ಚಿತವಾಗಿದೆ. ಆದಿವಾಸಿ ಮಹಿಳೆಯಾಗಿರುವ ದ್ರೌಪದಿಯವರ ಜೀವನವೇ ದುರಂತಗಳ ಸರಮಾಲೆ. ಗಂಡ, ಮಕ್ಕಳನ್ನು ಕಳೆದುಕೊಂಡು ಸಹಿಸಲಾಗದ ನೋವು, ಬಡತನದಲ್ಲಿಯೇ ಬೆಂದು ಬಳಲಿದ್ದ ಒಂದು ಜೀವ ಇಂದು ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಲು ಸಜ್ಜಾಗಿ ನಿಂತಿರುವುದು ಸುಲಭದ ಮಾತಲ್ಲ.
ಆದರೆ ಇವರ ಬಗ್ಗೆ ಅರಿತವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಸಂಘರ್ಷಮಯ ಜೀನವದಿಂದ ಇಂದು ಉನ್ನತ ಸ್ಥಾನಕ್ಕೆ ಏರಲು ಸಿದ್ಧತೆ ನಡೆಸಿರುವ ಮುರ್ಮು ಅವರ ಸಾಹಸಗಾಥೆಯನ್ನು ಪುಸ್ತಕದ ಮೂಲಕ ಬಿಚ್ಚಿಟ್ಟಿದ್ದಾಳೆ 13 ವರ್ಷದ ಬಾಲಕಿ ಭಾವಿಕಾ ಮಹೇಶ್ವರಿ. ಗುಜರಾತಿನ ಸೂರತ್​ನ ಭಾವಿಕಾ ಟ್ವಿಟರ್​ನಲ್ಲಿ ಈ ವಿಷಯವನ್ನು ತಿಳಿಸಿದ್ದು ನಿನ್ನೆ (ಭಾನುವಾರ) ಪುಸ್ತಕವನ್ನು ಬಿಡುಗಡೆ ಮಾಡಿದ್ದಾಳೆ. ಸಂಘರ್ಷ್​​ ಸೇ ಶಿಖತ್​ ತಕ್​- ದ್ರೌಪದಿ ಮುರ್ಮುಜಿ (ಸಂಘರ್ಷದಿಂದ ಶಿಖರದವರೆಗೆ- ದ್ರೌಪದಿ ಮುರ್ಮು ಅವರು) ಎಂಬ ಪುಸ್ತಕ ಇದಾಗಿದೆ.
ಇತ್ತೀಚೆಗೆ ದೆಹಲಿಯ ರಾಷ್ಟ್ರಪತಿ ಭವನಕ್ಕೆ ಕುಟುಂಬದೊಂದಿಗೆ ಭೇಟಿ ನೀಡಿದ್ದೆ. ಆಗ ದ್ರೌಪದಿ ಮುರ್ಮು ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ತಂದೆ ತಿಳಿಸಿದರು. ಅಲ್ಲದೇ, ಮುರ್ಮು ಚುನಾಯಿತರಾದರೆ ಬುಡಕಟ್ಟು ಸಮುದಾಯದಿಂದ ಆಯ್ಕೆಯಾದ ಮೊದಲ ರಾಷ್ಟ್ರಪತಿಯಾಗಲಿದ್ದಾರೆ ಎಂದು ತಂದೆ ಹೇಳಿದರು. ಇದುವೇ ನನಗೆ ಪುಸ್ತಕ ಬರೆಯಲು ಪ್ರೇರಣೆ ನೀಡಿತು ಎಂದಿದ್ದಾಳೆ ಬಾಲಕಿ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರಿಗೆ ಟ್ಯಾಗ್ ಮಾಡಿ, ಸೋಮವಾರ ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮುರ್ಮು ಅವರಿಗೆ ಬೆಂಬಲ ನೀಡುವಂತೆ ಬಾಲಕಿ ಕೋರಿದ್ದಾರೆ.
ಮುರ್ಮು ಅವರ ಕುರಿತ ಪುಸ್ತಕಗಳನ್ನು ದೆಹಲಿಯ ಮಾರುಕಟ್ಟೆ ಮತ್ತು ಇಂಟರ್​ನೆಟ್​ನಲ್ಲಿ ಹುಡುಕಿದೆ. ಎಲ್ಲಿಯೂ ಅವರ ಬಗ್ಗೆ ಸಿಗಲಿಲ್ಲ. ಆದರೆ ಅವರ ಜೀವನ ನನಗೆ ಸ್ಫೂರ್ತಿಮಯದಂತೆ ತೋರಿತು. ಅವರ ಬಗ್ಗೆ ಸಾಕಷ್ಟು ವಿಷಯಗಳನ್ನು ಕಲೆ ಹಾಕಿ ಪುಸ್ತಕ ರೆಯಲು ಆರಂಭಿಸಿದೆ. ಈ ಪುಸ್ತಕದಿಂದ ಮುರ್ಮು ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಭಾವಿಕಾ ಅಭಿಪ್ರಾಯಪಟ್ಟಿದ್ದಾರೆ.
ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಮಹಿಳೆ ರಾಷ್ಟ್ರಪತಿ ಅಭ್ಯರ್ಥಿಯಾಗುವುದು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಸೌಂದರ್ಯ. ಅವರು ಅವಿರೋಧವಾಗಿ ಆಯ್ಕೆಯಾದರೆ ಜಗತ್ತಿಗೆ ಸಕಾರಾತ್ಮಕ ಸಂದೇಶ ರವಾನಿಸಿದಂತೆ ಆಗಲಿದೆ. ಜೊತೆಗೆ ಮಹಿಳಾ ಸಬಲೀಕರಣಕ್ಕೆ ದೊಡ್ಡ ಉತ್ತೇಜನ ನೀಡಿದಂತೆಯೂ ಆಗಲಿದೆ ಎಂದಿದ್ದಾಳೆ ಭಾವಿಕಾ.(ಏಜೆನ್ಸೀಸ್​)
ಇಲ್ಲಿದೆ ನೋಡಿ ಪುಸ್ತಕ ಬಿಡಗಡೆಯ ವಿಡಿಯೋ
India's first book on president candidate Draupadi Murmu..#motivation#inspiration#life#quotes#instagood#success#instagram#goals#believe#Happiness#Thoughts#Kindness#Bhavikamaheshwari#treanding@DraupadiMurmoo@PMOIndia@narendramodi@AmitShah@CRPaatil@rose_k01pic.twitter.com/m9t27Nky7R
— Bhavika Maheshwari (@BhavikaMaheshw6)July 17, 2022

ಬಹು ನಿರೀಕ್ಷಿತ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​ವೇಗೆ ಪ್ರಧಾನಿ ಚಾಲನೆ- ಇದರ ವಿಶೇಷತೆಗಳೇನು ನೋಡಿ…

VIDEO: ಪುಟ್ಟ ಪುಟ್ಟ ಹೆಜ್ಜೆ ಇಟ್ಟ ಕಂದಮ್ಮ ಯೋಧರ ಬಳಿ ಬಂದು ಕಾಲಿಗೆ ಬಿದ್ದಳು- ಕ್ಯೂಟ್​ ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + 3 =
Remember me
