ಭುವನೇಶ್ವರ:ರೈಲು ಬೋಗಿಯ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ 13 ಬಾಲಕನಿಗೆ ವಿದ್ಯುತ್‌ ತಗುಲಿ ಸಜೀವ ದಹನಗೊಂಡ ಘಟನೆ ಒಡಿಶಾದ ಗಜಪತಿ ಜಿಲ್ಲೆಯಲ್ಲಿ ನಡೆದಿದೆ.
ಕೋವಿಡ್‌ ಐಸೊಲೇಷನ್‌ ಕೇಂದ್ರವಾಗಿ ಈ ರೈಲನ್ನು ಪರಿವರ್ತಿಸಲಾಗಿದೆ. ಪಿ. ಸೂರ್ಯ ಎಂಬ 13 ವರ್ಷದ ಬಾಲಕ ತನ್ನ ಇಬ್ಬರು ಸ್ನೇಹಿತರ ಜತೆಗೂಡಿ ಈ ರೈಲನ್ನು ಏರಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ವಿದ್ಯುತ್‌ ತಂತಿ ತಾಗಿ ಸೂರ್ಯ ಸ್ಥಳದಲ್ಲೇ ಸುಟ್ಟು ಮೃತಪಟ್ಟಿದ್ದಾನೆ. ಆತನ ಇಬ್ಬರು ಸ್ನೇಹಿತರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸೆಲ್ಫಿ ತೆಗೆಯಲು ಕೈ ಮೇಲೆ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್​ ತಂತಿಗೆ ಕೈತಗುಲಿದೆ. ತಂತಿಯಲ್ಲಿ ವಿದ್ಯುತ್​ ಪ್ರಸರಿಸುತ್ತಿದ್ದ ಹಿನ್ನೆಲೆಯಲ್ಲಿ ಅದು ತಗುಲಿ ಬೆಂಕಿ ಹೊತ್ತಿಕೊಂಡಿದೆ. ಬಾಲಕನ ಮೈಗೆ ಬೆಂಕಿ ತಗುಲಿ ಆತ ಅಲ್ಲಿಯೇ ಸಜೀವ ದಹನವಾಗಿದ್ದಾನೆ.
ಘಟನೆಯಲ್ಲಿ ಬೋಗಿಯ ಛಾವಣಿ ಸಂಪೂರ್ಣ ಸುಟ್ಟುಹೋಗಿದ್ದು, ಅಗ್ನಿಶಾಮಕಗಳನ್ನು ಬಳಸಿ ಬೆಂಕಿ ನಂದಿಸಿದ್ದಾರೆ. ಈ ಬೋಗಿಗಳನ್ನು ಕೋವಿಡ್‌ ಕ್ವಾರಂಟೈನ್‌ ಕೇಂದ್ರಗಳಾಗಿ ಬಳಸಲಾಗುತ್ತಿತ್ತು. ನಿಲ್ದಾಣದ ಎರಡನೇ ಮಾರ್ಗದಲ್ಲಿ ಇವುಗಳನ್ನು ನಿಲ್ಲಿಸಲಾಗಿತ್ತು.
ಮುಖ್ಯದ್ವಾರದಿಂದ ಸುಮಾರು 100 ಮೀಟರ್ ದೂರದಲ್ಲಿ ಅವುಗಳಿದ್ದವು. ಬಾಲಕರು ಅಲ್ಲಿಗೆ ಹೋಗಿ ಮೇಲಕ್ಕೆ ಹೋಗಿರುವುದನ್ನು ಯಾರೂ ಗಮನಿಸಿಲ್ಲ ಎನ್ನಲಾಗಿದೆ.
ಘಟನೆಯ ತನಿಖೆಗಾಗಿ ವಾಲ್ಟೇರ್‌ನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ಕಿರಿಯ ಆಡಳಿತ ತಂಡವನ್ನು ರೈಲ್ವೆ ಇಲಾಖೆ ರಚಿಸಿದೆ.
ಫೇಷಿಯಲ್​ ಮಾಡಿಸಬೇಕಿತ್ತು ಎನ್ನುತ್ತಲೇ ಬ್ಯೂಟಿ ಪಾರ್ಲರ್​ ಮಾಲೀಕಳನ್ನು ತಬ್ಬಿಕೊಂಡು ಪರಾರಿ!

ಈ ರಾಜ್ಯಗಳಲ್ಲಿ ಮಹಿಳೆಯರೇ ‘ಎಣ್ಣೆ’ ಜಾಸ್ತಿ ಕುಡಿಯೋದಂತೆ: ಲೆಕ್ಕಾಚಾರ ತಲೆಕೆಳಗೆ ಮಾಡಿ ಸಮೀಕ್ಷೆ!

ಸರ್ಕಾರಿ ಬಸ್​, ಗ್ಯಾಸ್ ಟ್ಯಾಂಕರ್​ ನಡುವೆ ಭೀಕರ ಅಪಘಾತ- 12 ಮಂದಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
