ನೋನಿ (ಮಣಿಪುರ):ಮಣಿಪುರದ ನೋನಿ ಜಿಲ್ಲೆಯಲ್ಲಿನ ಸೇನಾ ಶಿಬಿರದ ಸಮೀಪ ಭೀಕರ ಭೂಕುಸಿತ ಉಂಟಾಗಿದೆ. ಭಾರಿ ಮಳೆಯಿಂದಾಗಿ ರಾತ್ರಿ ದಿಢೀರನೆ ಗುಡ್ಡ ಬಿರುಕು ಬಿಟ್ಟಿದ್ದು, ಭಾರತೀಯ ಸೇನೆಯ ಶಿಬಿರ ಧ್ವಂಸಗೊಂಡಿತು. ಘಟನೆಯಲ್ಲಿ 7 ಸೇನಾ ಸಿಬ್ಬಂದಿ ಸೇರಿದಂತೆ 14 ಜನರು ಮೃತಪಟ್ಟಿದ್ದಾರೆ. 25 ಯೋಧರು ಕಾಣೆಯಾಗಿರುವುದಾಗಿ ವರದಿಯಾಗಿದೆ.
ಮಣಿಪುರದ ನೋನಿ ಜಿಲ್ಲೆಯಲ್ಲಿ ಇಂಫಾಲ್-ಜಿರಿಬಾಮ್ ರೈಲು ಮಾರ್ಗದ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇದಕ್ಕಾಗಿ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇವರೆಲ್ಲಾ ಮೃತ ದುರ್ದೈವಿಗಳು. 23 ಜನರನ್ನು ಸ್ಥಳಾಂತರಿಸಲಾಗಿದೆ. ಸೇನಾ ಸಿಬ್ಬಂದಿ, ರೈಲ್ವೆ ನೌಕರರು, ಗ್ರಾಮಸ್ಥರು ಮತ್ತು ಕಾರ್ಮಿಕರು ಸೇರಿದಂತೆ ಸುಮಾರು 60 ಮಂದಿ ಸಿಕ್ಕಿಬಿದ್ದಿರುವ ಶಂಕೆ ಇದೆ. 13 ಯೋಧರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಭೂಕುಸಿತದಿಂದ ಟೆರಿಟೋರಿಯಲ್ ಆರ್ಮಿಯ 107 ಕಂಪನಿಗಳು ಹಾನಿಗೀಡಾಗಿವೆ. ಪ್ರಧಾನಿ ನರೇಂದ್ರ ಮೋದಿಯವರು ರಕ್ಷಣಾ ಕಾರ್ಯಾಚರಣೆಯ ಮೇಲೆ ನಿಗಾ ಇಟ್ಟಿದ್ದಾರೆ.
ಸೇನೆಯ ಪ್ರಕಾರ, ಪ್ರತಿಕೂಲ ಹವಾಮಾನ ಮತ್ತು ಪದೇ ಪದೇ ಭೂಕುಸಿತ ಸಂಭವಿಸುತ್ತಿರುವುದರಿಂದ ರಕ್ಷಣಾ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರುತ್ತಿದೆ. ಆದರೆ ನಾಪತ್ತೆಯಾಗಿರುವ ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿಯಾಗಿದೆ.
ರಾಷ್ಟ್ರಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು 98 ಮಂದಿ! ಸೆಲೆಕ್ಟ್​ ಆಗಿದ್ದು ಇಬ್ಬರು: ಇದೆಂಥ ಕುತೂಹಲ ಅಂತಿರಾ?

ಚಾಕೊಲೇಟ್ ಪ್ರಿಯರಿಗೆ ಶಾಕ್​! ವಿಶ್ವದ ಅತಿದೊಡ್ಡ ಕಾರ್ಖಾನೆಯಲ್ಲಿ ​ಹಾನಿಕಾರಕ ಬ್ಯಾಕ್ಟೀರಿಯಾ ಪತ್ತೆ: ಫ್ಯಾಕ್ಟರಿ ಸ್ಥಗಿತ

ಸರ್ಕಾರದ ಪತನದ ಬೆನ್ನಲ್ಲೇ ಇ.ಡಿ.ಗೆ ಹೋಗಲು ತಯಾರಾದ ಶಿವಸೇನಾ ನಾಯಕ ರಾವತ್: ಇಂದು ಹಾಜರ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − fourteen =
Remember me
