ನವದೆಹಲಿ:ಕೆಲ ದಿನಗಳ ಹಿಂದೆ ಮಣಿಪುರದಲ್ಲಿ ಜೆಡಿಯು ಪಕ್ಷದ ಐವರು ಶಾಸಕರು ಬಿಜೆಪಿ ಸೇರ್ಪಡೆಯಾಗಿದ್ದ ಬೆನ್ನಲ್ಲೇ ಇದೀಗ ಬಿಹಾರದ ಮುಖ್ಯಮಂತ್ರಿ ನಿತೀಶ್​ಕುಮಾರ್​ಗೆ ಪುನಃ ಶಾಕ್​ ಎದುರಾಗಿದೆ.
ಬಿಜೆಪಿ ಜತೆಗಿನ ಮೈತ್ರಿ ಮುರಿದುಕೊಂಡು ಕಾಂಗ್ರೆಸ್ ಹಾಗೂ ಆರ್​ಜೆಡಿ ಜತೆ ಕೈಜೋಡಿಸಿರುವ ನಿತೀಶ್​​ ಕುಮಾರ್​ ಜತೆ ನಾವಿರಲ್ಲ ಎಂದು ದಿಯು ಮತ್ತು ದಮನ್​ನ 15 ಮಂದಿ ಜೆಡಿಯುನ ಪಂಚಾಯ್ತಿ ಸದಸ್ಯರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ನಿತೀಶ್ ಕುಮಾರ್​​ ಅವರು ಬಿಜೆಪಿ ತೊರೆದಿರುವ ನಿರ್ಧಾರದಿಂದ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಬಿಹಾರದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಬಿಜೆಪಿ ತೊರೆದು ಭ್ರಷ್ಟರಾಗಿರುವ ಕಾಂಗ್ರೆಸ್ ಹಾಗೂ ಆರ್​ಜೆಡಿ ಜತೆ ನಿತೀಶ್ ಕುಮಾರ್​ ಕೈಜೋಡಿಸಿರುವುದರಿಂದ ನಮಗೆ ತುಂಬಾ ಬೇಸರವಾಗಿರುವ ಹಿನ್ನೆಲೆಯಲ್ಲಿ ನಾವು ಅವರ ಸಂಪರ್ಕ ಕಡಿದುಕೊಳ್ಳುತ್ತಿದ್ದೇವೆ ಎಂದು ಈ ಎಲ್ಲಾ ಪಂಚಾಯ್ತಿ ಸದಸ್ಯರು ಹೇಳಿದ್ದಾರೆ.
ಈ ಕುರಿತು ಬಿಜೆಪಿಯ ಅಧಿಕೃತ ಟ್ವಿಟರ್​ನಲ್ಲಿ ಮಾಹಿತಿ ನೀಡಲಾಗಿದೆ. 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ, ಜತೆಗೆ ಶೀಘ್ರದಲ್ಲಿಯೇ ಗುಜರಾತ್​, ಹಿಮಾಚಲ ಪ್ರದೇಶ, ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳೂ ನಡೆಯಲಿವೆ. ಇದರ ಬೆನ್ನಲ್ಲೇ ಹಲವು ಪಕ್ಷಗಳ ಧುರೀಣರು ಪಕ್ಷಾಂತರ ಕಾರ್ಯದಲ್ಲಿ ತೊಡಗಿದ್ದಾರೆ, ಹಲವರು ಇದಾಗಲೇ ಬಿಜೆಪಿ ಸೇರ್ಪಡೆಗೊಂಡಿದ್ದಾರೆ (ಏಜೆನ್ಸೀಸ್​)
ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!
ಆಪರೇಷನ್​ ಒತ್ತುವರಿ: 30 ಐಟಿ, ಬಿಟಿಗೂ ಬಂತು ಕಂಟಕ- ಮುಲಾಜೇ ಇಲ್ಲ… ದೊಡ್ಡವರನ್ನೂ ಬಿಡಲ್ಲ ಎಂದ ಸಿಎಂ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:10 + 9 =
Remember me
