ನಾಗ್ಪುರ (ಮಹಾರಾಷ್ಟ್ರ):ಹಲವರಿಗೆ ವಯಸ್ಸು ಮೀರುವ ಕಾರಣ, ಒಳ್ಳೆಯ ಉದ್ಯೋಗ ಸಿಗುವುದಿಲ್ಲ. ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ಬಾಲಕನೊಬ್ಬ ತನ್ನ ಚಿಕ್ಕ ವಯಸ್ಸಿನಿಂದಾಗಿ ಉದ್ಯೋಗ ಕಳೆದುಕೊಂಡಿರುವ ಘಟನೆ ನಡೆದಿದೆ!
ಅದೂ ಒಂದೆರಡಲ್ಲ, ವಾರ್ಷಿಕವಾಗಿ 33 ಲಕ್ಷ ರೂಪಾಯಿ ಕೈಗೆ ಸಿಗುವ ಉದ್ಯೋಗ! ಅಮೆರಿಕದ ಡಾಲರ್​ನಲ್ಲಿ ಸಂಬಳ ಎಣಿಸುವ ಒಳ್ಳೆಯ ಅವಕಾಶವನ್ನು ಬಾಲಕ ತಪ್ಪಿಸಿಕೊಂಡಿದ್ದಾನೆ. ಇದು ಆತನ ವಯಸ್ಸಿನ ಕಾರಣಕ್ಕೆ. 15 ವರ್ಷದ ಈ ಬಾಲಕ, ಮೂರು ವರ್ಷ ಮೊದಲೇ ಹುಟ್ಟಿದ್ದರೆ, ಅಂದರೆ 18 ವರ್ಷ ತುಂಬುತ್ತಿದ್ದ ಕಾರಣ, ಈ ವಯಸ್ಸಿನಲ್ಲಿಯೇ ಆತ ಈ ಪರಿಯ ಸಂಬಳವನ್ನು ಪಡೆಯಬಹುದಿತ್ತು.
ಆಗಿದ್ದೇನೆಂದರೆ, ನಾಗ್ಪುರದ 15 ವರ್ಷದ ಬಾಲಕ ವೇದಾಂತ್ ಡಿಯೋಕಾಟೆ ಆನ್‌ಲೈನ್ ಕೋಡಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ. ಈತ ತನ್ನ ತಾಯಿಯ ಹಳೆಯ ಲ್ಯಾಪ್‌ಟಾಪ್‌ನಲ್ಲಿ ತನ್ನ ಇನ್​ಸ್ಟಾಗ್ರಾಂ ಖಾತೆಯನ್ನು ಸ್ಕ್ರೋಲ್ ಮಾಡುವಾಗ ವೆಬ್‌ಸೈಟ್ ಅಭಿವೃದ್ಧಿ ಸ್ಪರ್ಧೆಯೊಂದು ಕಣ್ಣಿಗೆ ಬಿದ್ದಿದೆ. ಅದರ ಲಿಂಕ್ ನೋಡಿದ ವೇದಾಂತ್​ಗೆ ಅದರಲ್ಲಿ ಆಸಕ್ತಿ ಹುಟ್ಟಿದೆ.
ಸ್ಪರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದ ಆತ 2000 ಕ್ಕೂ ಹೆಚ್ಚು ಸಾಲುಗಳ ಕೋಡ್ ಅನ್ನು ಕೇವಲ ಎರಡೇ ದಿನದಲ್ಲಿ ಮುಗಿಸಿಬಿಟ್ಟಿದ್ದಾನೆ. ಅದನ್ನು ಕಳುಹಿಸಬೇಕಿರುವ ವಿಳಾಸಕ್ಕೆ ಆನ್​ಲೈನ್​ ಮೂಲಕ ಕಳುಹಿಸಿದ್ದಾನೆ. ಆದರೆ ಬಾಲಕ ತನ್ನ ಕನಸಿನಲ್ಲಿಯೂ ಮುಂದೇನಾಗಬಹುದು ಎಂದು ಅರಿತಿರಲಿಲ್ಲ. ಅದು ನಡೆದೇ ಹೋಗಿದೆ.
ಕೇವಲ ಎರಡು ದಿನಗಳಲ್ಲಿ ಈ ಪರಿಯ ಕೋಡಿಂಗ್​ ಮುಗಿಸಿರುವುದನ್ನು ಕಂಡಿಗೆ ಅಮೆರಿಕದ ಪ್ರತಿಷ್ಠಿತ ಕಂಪೆನಿ. ಈತನ ವಯಸ್ಸನ್ನು ಅರಿಯದ ನ್ಯೂಜೆರ್ಸಿಯಲ್ಲಿನ ಜಾಹೀರಾತು ಸಂಸ್ಥೆಯು ವಾರ್ಷಿಕವಾಗಿ 33 ಲಕ್ಷ ರೂಪಾಯಿಗಳ ಉದ್ಯೋಗಕ್ಕೆ ಆಫರ್​ ನೀಡಿತು. ಈತನ ಡಿಟೇಲ್ಸ್​ ಕಳಿಸುವಂತೆ ಕೋರಿತು.
ಇದರಿಂದ ಹಿರಿಹಿರಿ ಹಿಗ್ಗಿದ ಬಾಲಕ ತನ್ನ ಡಿಟೇಲ್ಸ್​ ಕಳುಹಿಸಿದ್ದಾನೆ. ಆದರೆ ಈತನಿಗೆ ಇನ್ನೂ 15 ವರ್ಷ ವಯಸ್ಸಾಗಿದ್ದನ್ನು ಅರಿತ ಸಂಸ್ಥೆ, ಬೇಸರದಿಂದ ಆಫರ್​ ರಿಜೆಕ್ಟ್​ ಮಾಡಿದ್ದು, ಕಾನೂನಿನ ಅನ್ವಯ ಉದ್ಯೋಗ ನೀಡಲು ಆಗದು ಎಂದಿದೆ! ಇದರಿಂದ ಬಾಲಕ ನಿರಾಸೆಗೊಂಡಿದ್ದಾನೆ.
ಆದರೆ ಕಂಪೆನಿ ಮಾತ್ರ ಈ ಬಾಲಕನನ್ನು ಅಷ್ಟು ಸುಲಭಕ್ಕೆ ಬಿಟ್ಟುಕೊಡಲು ತಯಾರು ಇಲ್ಲ. ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಅಂದರೆ 18 ವರ್ಷ ತುಂಬಿದ ಬಳಿಕ ತಮ್ಮನ್ನು ಸಂಪರ್ಕಿಸುವಂತೆ ಕಂಪೆನಿ ಸದ್ಯ ಕೋರಿಕೊಂಡಿದೆ. ಸಾವಿರದಲ್ಲಿ ಒಬ್ಬರಿಗೆ ಸಿಗುವ ಅವಕಾಶ ಬಾಲಕ ತನ್ನ ಕಡಿಮೆ ವಯಸ್ಸಿನಿಂದಾಗಿ ಕಳೆದುಕೊಂಡಿದ್ದಾನೆ(ಏಜೆನ್ಸೀಸ್​)
ಪುಷ್ಪಾ ಸಿನಿಮಾ ನೋಡಿ ಪ್ರೇರೇಪಣೆ: ರಾಜ್ಯದ ಯುವಕರು ಬಾಯಿಬಿಟ್ಟ ಸತ್ಯ ಕೇಳಿ ಪೊಲೀಸರೂ ಶಾಕ್​!

VIDEO: ಸಿಎಂ ಕುರ್ಚಿಗಾಗಿ ಕಾಂಗ್ರೆಸ್​ನಲ್ಲಿ ಕಚ್ಚಾಟ: ಭಾರಿ ವೈರಲ್​ ಆಗ್ತಿದೆ ಡಿಕೆಶಿ- ಸಿದ್ದು ಗುದ್ದಾಟದ ವಿಡಿಯೋ!

ಬ್ರೇಕಪ್​ ಮಾಡಿಕೊಂಡ ಪ್ರೇಯಸಿಯ ಮನೆಯನ್ನೇ ದೋಚಿದ ಪ್ರಿಯಕರ: ಕಾರಣ ಕೇಳಿದ್ರೆ ಅಯ್ಯೋ ಪಾಪ ಅಂತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
