ನವದೆಹಲಿ:ಭಾರತದಲ್ಲಿ ಇದುವರೆಗೆ ಕೋವಿಡ್​ ಲಸಿಕೆ ಅಭಿಯಾನದಡಿ 172.81 ಕೋಟಿ ಡೋಸ್​ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
170.95 ಕೋಟಿಗೂ ಹೆಚ್ಚು ಡೋಸ್​ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಚಿತ ಯೋಜನೆ ಹಾಗೂ ರಾಜ್ಯಗಳಿಂದ ನೇರ ಖರೀದಿ ವಿಭಾಗದಡಿ ಸರಬರಾಜು ಮಾಡಲಾಗಿತ್ತು. ಅದರಲ್ಲಿ 12,37,14,841 ಡೋಸ್​ ಇನ್ನೂ ಬಳಕೆಯಾಗಿಲ್ಲ ಎಂದು ಆರೋಗ್ಯ ಸಚಿವ ಮನಸುಖ್​ ಮಾಂಡವೀಯ ತಿಳಿಸಿದ್ದಾರೆ.
ದೇಶದ 15-18 ವಯೋಮಿತಿಯ ಒಟ್ಟು ಮಕ್ಕಳ ಪೈಕಿ ಶೇಕಡ 70ರಷ್ಟು ಎಳೆಯರಿಗೆ ಕೋವಿಡ್​ ಲಸಿಕೆ ಹಾಕಲಾಗಿದೆ. ಈ ಗುಂಪಿನ ಎಲ್ಲ ಅರ್ಹ ಮಕ್ಕಳು ಆದಷ್ಟು ಬೇಗ ಲಸಿಕೆ ಹಾಕಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
44,877 ಹೊಸ ಪ್ರಕರಣಗಳುಭಾರತದಲ್ಲಿ ಕರೊನಾ ಸೋಂಕಿನ ಹಾವಳಿ ಇಳಿಮುಖವಾಗುತ್ತಿದ್ದು ಭಾನುವಾರ 44,877 ಹೊಸ ಪ್ರಕರಣಗಳು ದೃಢಪಟ್ಟಿವೆ. 684 ಜನರು ಮೃತಪಟ್ಟಿದ್ದು ಕೋವಿಡ್​ಗೆ ಬಲಿಯಾದವರ ಒಟ್ಟು ಸಂಖ್ಯೆ 5,08,665ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 5,37,045 ಆಗಿದೆ.
ಶನಿವಾರ ಮತ್ತು ಭಾನುವಾರದ ನಡುವೆ 1,17,591 ರೋಗಿಗಳು ಕೋವಿಡ್​ನಿಂದ ಚೇತರಿಸಿಕೊಂಡಿದ್ದು ಗುಣಮುಖರಾದವರ ಒಟ್ಟು ಸಂಖ್ಯೆ 4,15,85,711ಕ್ಕೆ ಏರಿದೆ. ಚೇತರಿಕೆ ದರ ಶೇಕಡ 97.55 ಆಗಿದೆ. ರಾಷ್ಟ್ರೀಯ ದೈನಿಕ ಪಾಸಿಟಿವಿಟಿ ದರ ಶೇ. 3.17 ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಶೇ. 4.46 ಆಗಿದೆ. ದೇಶದಾದ್ಯಂತ ಇದುವರೆಗೆ 75.07 ಕೋಟಿಗೂ ಅಧಿಕ ಕೋವಿಡ್​ ಟೆಸ್ಟ್​ ನಡೆಸಲಾಗಿದೆ.
ಶೇ. 44 ಮೃತರಲ್ಲಿ ತೀವ್ರ ಉಸಿರಾಟ ಸಮಸ್ಯೆ ಮಹಾರಾಷ್ಟ್ರದಲ್ಲಿ ಕರೊನಾದ ಮೂರನೇ ಅಲೆ ವೇಳೆ ಸಂಭವಿಸಿದ ಸಾವಿನ ಪೈಕಿ ಶೇಕಡ 44 ಮರಣಗಳಿಗೆ ತೀವ್ರ ಉಸಿರಾಟದ ಸಮಸ್ಯೆ ಕಾರಣ ಎಂದು ಅಧ್ಯಯನವೊಂದು ಹೇಳಿದೆ. ಒಮಿಕ್ರಾನ್​ ರೂಪಾಂತರಿಯು ಶ್ವಾಸಕೋಶದ ಮೇಲೆ ಪರಿಣಾಮ ಬೀರುವುದಿಲ್ಲವಾದರೂ ಇಷ್ಟೊಂದು ಪ್ರಮಾಣದ ಕೋವಿಡ್​ ಸೋಂಕಿತರು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರದ ಕೋವಿಡ್​ ಸಾವಿನ ಪರಿಶೀಲನೆ ಸಮಿತಿಯು ದತ್ತಾಂಶಗಳ ವಿಶ್ಲೇಷಣೆ ನಡೆಸಿದಾಗ ಈ ಅಂಶ ದೃಢಪಟ್ಟಿದೆ. ಜನವರಿಯಲ್ಲಿ ಮೃತಪಟ್ಟ 1,052 ಜನರಲ್ಲಿ 459 ಮಂದಿ ಉಸಿರಾಟದ ತೊಂದರೆಯಿಂದ ಸಾವನ್ನಪ್ಪಿದ್ದಾರೆ. ಫೆಬ್ರವರಿ ಆರಂಭದಿಂದ ಒಮಿಕ್ರಾನ್​-ಕೋವಿಡ್​ ಅಲೆ ತಗ್ಗಿದೆ. ಈ 459 ರೋಗಿಗಳಲ್ಲಿ ಶ್ವಾಸಕೋಶವನ್ನು ಆಕ್ರಮಿಸುವ ಡೆಲ್ಟಾ ಸೋಂಕು ತಗಲಿದ್ದ ಸಾಧ್ಯತೆಯಿದೆ ಎಂದು ಸಮಿತಿಯ ಸದಸ್ಯ ಅವಿನಾಶ್​ ಸುಪೆ ಹೇಳಿದ್ದಾರೆ.
ಮಾಜಿ ಪ್ರಧಾನಿ ಪುತ್ರಿಗೆ ದೃಷ್ಟಿ ಕೊಟ್ಟ ಆಯುರ್ವೇದ: ಎಲ್ಲಿಯೂ ಸಾಧ್ಯವಾಗದ್ದು ಇಲ್ಲಿ ಆಯಿತು! ಕೀನ್ಯಾದಲ್ಲಿ ಜೈಜೈಕಾರ

ವ್ಯಾಲೆಂಟೈನ್ಸ್ ಡೇ ಎಂದು ಜೋಡಿ ಜತೆ ತಿರುಗ್ತೀರಾ? ಹಾಗಿದ್ರೆ ನಿಮ್‌ ಮದ್ವೆ ಜತೆ ಮೆರವಣಿಗೆ ಗ್ಯಾರೆಂಟಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
