ತಿರುಪತಿ:ನಾಲ್ಕು ದಿನಗಳ ಹಿಂದಷ್ಟೇ ತಿರುಪತಿ ತಿಮ್ಮಪ್ಪನ ದೇವಾಲಯ ಒಂದೇ ದಿನ 10 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸಿ ದಾಖಲೆ ಬರೆದಿತ್ತು.
ಹಲವು ಟ್ರಸ್ಟ್​​ಗಳಿಂದ ತಿಮ್ಮಪ್ಪನಿಗೆ ಕಾಣಿಕೆಯಾಗಿ ಒಂದೇ ದಿನದಲ್ಲಿ 10 ಕೋಟಿ ರೂ. ಸಂಗ್ರಹವಾಗಿದೆ ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಮಾಹಿತಿ ನೀಡಿತ್ತು. ಈ ಪೈಕಿ ತಮಿಳುನಾಡಿನ ತಿರುನಲ್ವೇಲಿಯ ಉದ್ಯಮಿ ಹಾಗೂ ತಿಮ್ಮಪ್ಪನ ಭಕ್ತ ಗೋಪಾಲ ಬಾಲಕೃಷ್ಣನ್ ಎಂಬುವವರಿಂದಲೇ 7 ಕೋಟಿ ರೂ. ಕಾಣಿಕೆ ನೀಡಿದ್ದು, ಇನ್ನುಳಿದ ಶ್ರೀ ವೆಂಕಟೇಶ್ವರ ವಿದ್ಯಾದಾನ ಟ್ರಸ್ಟ್​ ಸೇರಿದಂತೆ ಇತರೆ ಎರಡು ಟ್ರಸ್ಟ್​ಗಳು ತಲಾ 1 ಕೋಟಿ ರೂ. ಕಾಣಿಕೆ ನೀಡಿವೆ. ಹಾಗಾಗಿ ದಿನದಲ್ಲೇ 10 ಕೋಟಿ ರೂ. ಸಂಗ್ರಹವಾಗಿದೆ. ಈ ಅಷ್ಟೂ ಹಣವನ್ನು ಡಿಡಿ ಮೂಲಕ ಭಕ್ತರು ನೀಡಿದ್ದರು.
ಇದಾದ ನಾಲ್ಕೇ ದಿನಗಳಲ್ಲಿ ಒಬ್ಬಳೇ ಭಕ್ತಳಿಂದ ತಿಮ್ಮಪ್ಪನಿಗೆ 2.45 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಚೆನ್ನೈನ ವೃದ್ಧೆ ಭಕ್ತೆ ಸರೋಜಾ ಸೂರ್ಯ ನಾರಾಯಣನ್​ ಈ ದೇಣಿಗೆ ನೀಡಿದ್ದಾರೆ.
ಚಿನ್ನದ ಕಾಸುಲಾ ಹಾರ ಮತ್ತು ಯಜ್ಞೋಪವೀತವನ್ನು ಕಾಣಿಕೆಯಾಗಿ ಭಕ್ತೆ ಸರೋಜಾ ಅವರು ನೀಡಿದ್ದಾರೆ. ಇವರು ನೀಡಿರುವ ರತ್ನ ಖಚಿತ ಆಭರಣಗಳು 4.150 ಕೆಜಿ ತೂಕದ್ದಾಗಿದ್ದು, ಇದರ ಮೌಲ್ಯ 2.45 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ.
‘ಭಾರತದ ಸ್ನೇಹಿತರೇ… ಸತ್ಯದ ಪರವಾಗಿ ನಿಲ್ಲಿ… ಕಾನೂನು​ ಇರುವಾಗ ಛೇ… ಇಂಥವರಿಗೆ ತಲೆಬಾಗುವಿರಾ?’

ಮೈಸೂರಿನ ಕಾನ್ವೆಂಟ್​ನಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ? ಕಣ್ಣಾರೆ ಕಂಡ ಸಿಸ್ಟರ್​ಗೆ ಜೀವ ಬೆದರಿಕೆ- ದೂರು ದಾಖಲು

ಪತ್ನಿಗೆ ಟಾರ್ಚರ್​ ಕೊಡ್ತಿದ್ದ- ಯುವತಿಯನ್ನು ಮಂಚಕ್ಕೆ ಕರೀತಿದ್ದ: ಅಸಲಿಯತ್ತು ಗೊತ್ತಾಗಿ ತಲೆತಿರುಗಿ ಬಿದ್ದ ಪೊಲೀಸಪ್ಪ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + twelve =
Remember me
