ಬಕಿಂಗ್‌ಹ್ಯಾಮ್‌:ಸಾಮಾನ್ಯವಾಗಿ ಆರೋಗ್ಯವಂತ ಮಗು ಹುಟ್ಟಿದರೆ 18 ಇಂಚು 7-8 ಪೌಂಡ್ಸ್‌ ತೂಕವಿರುತ್ತದೆ. ಆದರೆ 2 ಅಡಿ ಉದ್ದ ಮತ್ತು 12 ಪೌಂಡ್ ತೂಕವಿರುವ ಮಗುವೊಂದು ಹುಟ್ಟಿದ್ದು, ವೈದ್ಯರೇ ಅಚ್ಚರಿಗೊಂಡಿದ್ದಾರೆ.
ಬಕಿಂಗ್‌ಹ್ಯಾಮ್‌ನ 27 ವರ್ಷದ ಮಹಿಳೆಗೆ ಈ ಮಗು ಹುಟ್ಟಿದೆ. ಅಮಿ ಮತ್ತು ಜಾಕ್ ದಂಪತಿಗೆ ಈ ಮಗು ಹುಟ್ಟಿದೆ. ಮಗುವನ್ನು ನೋಡಿ ಅತ್ತ ವೈದ್ಯರೇ ಕಂಗಾಲಾಗಿದ್ದರೆ, ಕೂಸನ್ನು ನೋಡುತ್ತಿದ್ದಂತೆಯೇ ಆಮಿ ಮೂರ್ಛೆ ಹೋದರಂತೆ.
ಅಷ್ಟೇ ಅಲ್ಲದೇ, ಹಸುಗೂಸುಗಳ ತೂಕ ನೋಡಲೆಂದು ಇದ್ದ ಅಳತೆಮಾಪನದಲ್ಲಿ ಮಗು ಫಿಟ್ ಆಗದ ಕಾರಣ ವೈದ್ಯರು ಪೇಚಿಗೆ ಸಿಲುಕಿದರು. ಇದಾಗಲೇ ಎರಡು ಮಕ್ಕಳ ತಾಯಿಯಾದ ಅಮಿಗೆ ಇದು ಮೂರನೆಯ ಮಗು. ಮೊದಲು ಎರಡು ಮಕ್ಕಳು ಸರಿಯಾಗಿದ್ದು, ಈ ಮಗು ಇಷ್ಟು ತೂಕ ಏಕಾಯಿತು ಎಂದು ಗೊತ್ತಾಗುತ್ತಿಲ್ಲ ಎಂದಿದ್ದಾರೆ ಆಮಿ.
ತಮ್ಮ ಹೊಸ ಮಗು ಜಾಗ್ರಿಸ್‌ನನ್ನು ಎತ್ತಲು ಇಬ್ಬರು ಬರಬೇಕಾಗಿ ಬಂತು ಎಂದು ತಿಳಿಸಿದ್ದಾರೆ. ಈ ಮಗುವಿಗೆ ಜಾಗ್ರಿಸ್‌ ಎಂದು ಹೆಸರು ಇಟ್ಟಿದ್ದಾರೆ. ಹೊಸ ಮಗುವಿಗಾಗಿ ಒಂದಿಷ್ಟು ಬಟ್ಟೆ ತಂದಿಟ್ಟಿದ್ದರು. ಆದರೆ ಅದು ಫಿಟ್ ಆಗುತ್ತಿಲ್ಲ. ಮೂರು ತಿಂಗಳ ಮಕ್ಕಳ ಅಳತೆಗೆ ಖರೀದಿಸಿದ ಬಟ್ಟೆಗಳೂ ಸಹ ಜಾಗ್ರಿಸ್‌ಗೆ ಸರಿಯಾಗುತ್ತಿಲ್ಲ ಎಂದು ಆಮಿ ಹೇಳಿದ್ದಾರೆ.
ಕೂಲ್‌ಡ್ರಿಂಗ್ಸ್‌ ಬಾಟಲಿಯ ಮುಚ್ಚಳ ಜೇನ್ನೊಣ ತೆಗೆಯುವುದನ್ನು ಕಂಡಿದ್ದೀರಾ? ಇಲ್ಲಿದೆ ನೋಡಿ ಅಚ್ಚರಿ ವಿಡಿಯೋ

ಮಧ್ಯರಾತ್ರಿ ಧಗಧಗ ಹೊತ್ತಿ ಉರಿದ ಕಾರ್ಖಾನೆ- ಅಗ್ನಿ ಶಾಮಕ ದಳಕ್ಕೆ ಸಾಧ್ಯವಾಗದೇ ವಾಯುಪಡೆ ಕಾರ್ಯಾಚರಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
