ಸಿಂಗಪುರ:ಎರಡು ಸಿಂಹಗಳು ವಿಮಾನ ನಿಲ್ದಾಣದಲ್ಲಿ ತಪ್ಪಿಸಿಕೊಂಡು ಎಲ್ಲೆಡೆ ಆತಂಕ ಸೃಷ್ಟಿಯಾಗಿರುವ ಘಟನೆ ಸಿಂಗಪುರದಲ್ಲಿ ನಡೆದಿದೆ.
ವಿದೇಶದ ಮೃಗಾಲಯವೊಂದಕ್ಕೆ ಸಾಗಿಸಲು ಕಂಟೈನರ್‌ನಲ್ಲಿ ಇವುಗಳನ್ನು ಸಾಗಿಸಲಾಗುತ್ತಿತ್ತು. ಒಟ್ಟು 7 ಸಿಂಹಗಳನ್ನು ವಿದೇಶದ ಮೃಗಾಲಯಕ್ಕಾಗಿ ಸಿಂಗಾಪುರ್ ಏರ್‌ಲೈನ್ಸ್ ಮುಖಾಂತರ ಸಾಗಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಎರಡು ಸಿಂಹಗಳು ತಪ್ಪಿಸಿಕೊಂಡಿವೆ. ಚಾಂಗಿ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.
ತಪ್ಪಿಸಿಕೊಂಡ ಸಿಂಹಗಳು ಹೊರಕ್ಕೆ ಹೋಗಲು ಆಗಲೇ ಅಲ್ಲಿಯೇ ಇದ್ದ ಕಟ್ಟಡದ ಸುತ್ತಲೂ ತಿರುಗಾಡುತ್ತಿದ್ದವು. ಇದನ್ನು ನೋಡಿದ ಜನರು ಬೆಚ್ಚಿಬಿದ್ದರು. ಕೊನೆಗೆ ಅವುಗಳನ್ನು ಸೆರೆ ಹಿಡಿಯಲು ಮಾಂಡೈ ವನ್ಯಜೀವಿ ತಜ್ಞರನ್ನು ಕರೆಸಲಾಯಿತು, ಅದೃಷ್ಟಕ್ಕೆ ತಜ್ಞರು ಬರುವವರೆಗೆ ಸಿಂಹಗಳು ಅಲ್ಲಿಯೇ ಇದ್ದವು. ಇಲ್ಲದಿದ್ದರೆ ಇನ್ನಷ್ಟು ಅನಾಹುತವಾಗುವ ಸಾಧ್ಯತೆ ಇತ್ತು. ಸ್ವಲ್ಪ ಸಮಯದ ನಂತರ ಆಗಮಿಸಿದ ಪಶುವೈದ್ಯರ ಗುಂಪು 2 ಸಿಂಹಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು.
ಅರವಳಿಕೆ ಚುಚ್ಚುಮದ್ದನ್ನು ಗನ್ ಮೂಲಕ ಗುಂಡು ಹಾರಿಸಿ ನೀಡಿದ ಮೇಲೆ ಸಿಂಹಗಳನ್ನು ಸೆರೆ ಹಿಡಿಯಲಾಯಿತು.
VIDEO: ಮದುವೆ ದಿನ ಡಿಫರೆಂಟ್‌ ಆಗಿ ಕಾಣಿಸಿಕೊಳ್ಳೋ ಭರದಲ್ಲಿ ತಲೆಕೆಳಗಾಗಿ ಬಿದ್ದ ಜೋಡಿ! ವಿಡಿಯೋ ವೈರಲ್‌

ಗ್ಯಾಂಗ್‌ರೇಪ್‌ ಆಯ್ತೆಂದು ಯುವತಿ ದೂರು: ಇದ್ದ ಕೆಲಸವೆಲ್ಲಾ ಬಿಟ್ಟು ತನಿಖೆ ಮಾಡಿದ ಪೊಲೀಸರಿಗೆ ಕಾದಿತ್ತು ಭಾರಿ ಶಾಕ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
