ನವದೆಹಲಿ:ಕಳೆದ ಕೆಲ ವರ್ಷಗಳಿಂದ ಇಡೀ ವಿಶ್ವದ ಕಣ್ಣು ಭಾರತದತ್ತ ನೆಟ್ಟಿದೆ. ಅದೇ ರೀತಿ ಭಾರತದ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕೆ ಅನೇಕ ದೇಶಗಳ ಪ್ರಧಾನಿ, ಅಧ್ಯಕ್ಷರು ಬರಲು ಉತ್ಸುಕತೆ ತೋರುತ್ತಿದ್ದಾರೆ. ಇದಾಗಲೇ ಕೆಲವು ದೇಶಗಳ ಗಣ್ಯರು ಆಗಮಿಸಿ ಭಾರತವನ್ನು ಕೊಂಡಾಡಿ ಹೋಗಿದ್ದೂ ಆಗಿದೆ.
ಇದೀಗ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸರದಿ. 2021ರಲ್ಲಿ ನಡೆಯಲಿರುವ ಗಣರಾಜ್ಯೋತ್ಸವಕ್ಕೆ ಬೋರಿಸ್ ಜಾನ್ಸನ್ ಮುಖ್ಯ ಅಥಿಯಾಗಿ ಭಾಗವಹಿಸಲಿದ್ದಾರೆ ಎಂದು ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡಾಮೆನಿಕ್​ ರಾವ್​ ತಿಳಿಸಿದ್ದಾರೆ.
ಇಂದು ದೆಹಲಿಯಲ್ಲಿ ನಡೆದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಚಿವ ಎಸ್. ಜೈಶಂಕರ್ ಜತೆಗಿನ ಮಾತುಕತೆ ಡಾಮೆನಿಕ್​ ಈ ವಿಷಯ ತಿಳಿಸಿದ್ದಾರೆ. ಮುಂದಿನ ಹೊಸ ವರ್ಷ ನಡೆಯಲಿರುವ ರಾಜ್ಯೋತ್ಸವಕ್ಕೆ ಮುಖ್ಯ ಅಥಿಯಾಗಿ ಭಾಗವಹಿಸಬೇಕು ಎಂಬ ಭಾರತದ ಆಹ್ವಾನವನ್ನು ಬೋರಿಸ್ ಜಾನ್ಸ್ ನ ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಮುಂದಿನ ವರ್ಷ ಬ್ರಿಟನ್ ಆಯೋಜಿಸಿರುವ ಜಿ7ಶೃಂಗದ ಜತೆ ಕೈಜೋಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೋರಿಸ್ ಜಾನ್ಸನ್ ಆಹ್ವಾನಿಸಿದ್ದಾರೆ. ಉಭಯ ದೇಶಗಳ ನಡುವೆ ಅಗತ್ಯವಿರುವ ದ್ವಿಪಕ್ಷೀಯ ಸಂಬಂಧದ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಡಾಮೆನಿಕ್​ ಹೇಳಿದ್ದಾರೆ.
ಮುಕೇಶ್​ ಅಂಬಾನಿ ಮೊಮ್ಮಗು ನೋಡಲು ಮೋದಿ ಹೋಗಿದ್ರಾ- ವೈರಲ್​ ಫೋಟೋದ ಸತ್ಯಾಂಶ ಏನು?

ಟ್ವಿಟರ್​ ಬಳಸಿ 9 ಕೊಲೆ ಮಾಡಿದ್ದ ಈತ! ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​; ಟ್ವಿಟರ್​ ಕಿಲ್ಲರ್​ನ ವಿಚಿತ್ರ ಕಥೆ ಇಲ್ಲಿದೆ…

ಪ್ರತಿಭಟನೆಯಿಂದ ಮರಳುತ್ತಿದ್ದ ರೈತರ ಟ್ರ್ಯಾಕ್ಟರ್​ ಅಪಘಾತ- ಇಬ್ಬರ ಸಾವು, ಹಲವರಿಗೆ ಗಾಯ

ಮತಾಂತರ ಆಗಿಹೋಗಿದೆ, ಮೂರು ತಿಂಗಳ ಗರ್ಭಿಣಿ: ಗಂಡನನ್ನು ಬಿಟ್ಟುಬಿಡಿ ಎಂದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 15 =
Remember me
