ನ್ಯೂಯಾರ್ಕ್:ಅದೃಷ್ಟ ಕೆಟ್ಟರೆ ಎಂತೆಂಥ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಅಮೆರಿಕದಲ್ಲಿ ನಡೆದ ಕರುಣಾಜನಕ ಕಥೆಯಿದು.
ಫ್ರಾಂಕ್​ ಎಂಬ ಕಡುಬಡವನಿಗೆ 20 ವರ್ಷಗಳ ಹಿಂದೆ ಇಲ್ಲಿಯ ಕೋರ್ಟ್​ 20 ವರ್ಷಗಳ ಶಿಕ್ಷೆ ವಿಧಿಸಿತ್ತು. ಅಂದ ಮಾತ್ರಕ್ಕೆ ಅವನೇನು ಕೊಲೆ, ದರೋಡೆ, ಸುಲಿಗೆ ಮಾಡಿರಲಿಲ್ಲ. ಬದಲಿಗೆ ಸೂಪರ್​ಮಾರ್ಕೆಟ್​ ಒಂದರಿಂದ ಎರಡು ಟೀ ಷರ್ಟ್​ ಕದ್ದಿದ್ದ. ಕಳ್ಳತನ ಮಾಡುವುದು ಅಪರಾಧವಾದರೂ ಇಂಥ ದೊಡ್ಡ ಶಿಕ್ಷೆ ವಿಧಿಸುವಷ್ಟು ಕ್ರೂರ ಅಪರಾಧ ಆತ ಮಾಡಿರಲಿಲ್ಲ.
ಆದರೆ ಅದ್ಯಾಕೋ ಇಲ್ಲಿಯ ಕೋರ್ಟ್​ ಇಂಥ ಕಠಿಣ ಶಿಕ್ಷೆ ವಿಧಿಸಿತ್ತು. 23 ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿತ್ತು. ನಂತರ ಅನೇಕ ಮಂದಿ ಇದರ ವಿರುದ್ಧ ಹೋರಾಟ ನಡೆಸಿದ್ದರು. ಇಷ್ಟು ಚಿಕ್ಕ ಕಳ್ಳತನಕ್ಕೆ ಇಂಥ ಘೋರ ಶಿಕ್ಷೆ ವಿಧಿಸಿರುವುದು ಅವಮಾನವೀಯ ಎಂದಿದ್ದರು. ನಂತರ ಇದನ್ನು ಪರಿಗಣನೆಗೆ ತೆಗೆದುಕೊಂಡಿದ್ದ ಕೋರ್ಟ್​, ಶಿಕ್ಷೆಯನ್ನು ಮೂರು ವರ್ಷ ಕಡಿತಗೊಳಿಸಿ 20 ವರ್ಷಕ್ಕೆ ಇಳಿಸಿತ್ತು.
ಕಡು ಬಡವನಾಗಿದ್ದ ಫ್ರಾಂಕ್‍ಗೆ ಪತ್ನಿ, ಒಬ್ಬ ಮಗನಿದ್ದ. 47ನೇ ವಯಸ್ಸಿಗೆ ಕಳ್ಳತನ ಮಾಡುವಾಗ ಆತ ಸಿಕ್ಕಿಬಿದ್ದಿದ್ದ. ಈಗ ಫ್ರಾಂಕ್​ಗೆ 67 ವರ್ಷ. ದುರದೃಷ್ಟದ ವಿಷಯ ಎಂದರೆ, ಫ್ರಾಂಕ್​ ಜೈಲಿನಿಂದ ಬಿಡುಗಡೆಯಾಗುವಷ್ಟರಲ್ಲಿಯೇ ಆತನ ಪತ್ನಿ, ಮಗ ಅಷ್ಟೇ ಅಲ್ಲದೇ ಇಬ್ಬರು ಸಹೋದರರೂ ಮೃತಪಟ್ಟಿದ್ದರು. ಕುಟುಂಬಕ್ಕೆ ಆಸೆಯಾಗಿದ್ದ ಫ್ರಾಂಕ್​ ಜೈಲು ಅನುಭವಿಸಿದ ಮೇಲೆ ಆತನ ಬಿಡುಗಡೆಗಾಗಿ ಹಲವಾರು ಕಡೆ ತಿರುಗಾಡಿ ವಿಫಲವಾಗಿದ್ದ ಕುಟುಂಬ ನಂತರ ತುತ್ತು ಅನ್ನಕ್ಕೂ ಪರದಾಡುವ ಸಮಸ್ಯೆಯಾಗಿ ಮೃತಪಟ್ಟಿತ್ತು. ಫ್ರಾಂಕ್​ ಮನೆಗೆ ಮರಳುವಷ್ಟರಲ್ಲಿ ಮನೆ ಮೃತ್ಯುಕೂಪವಾಗಿತ್ತು. ಇದೀಗ ಎಲ್ಲರನ್ನೂ ಕಳೆದುಕೊಂಡಿರುವ ಫ್ರಾಂಕ್​ ತನ್ನ ದುರದೃಷ್ಟವನ್ನು ಹಳಿದುಕೊಳ್ಳುತ್ತಿದ್ದಾನೆ.
ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ

ಮದ್ವೆಗೆ ನೆಂಟರಿಷ್ಟರು, ಸ್ನೇಹಿತರನ್ನೆಲ್ಲಾ ಕರೀಬೋದು ಎಂದೋರಿಗೆ ಸರ್ಕಾರ ನೀಡಿದೆ ಈ ಶಾಕ್​!

ವೆಡ್ಡಿಂಗ್​ ಕಾರ್ಡ್​ ಮೇಲೆ ಮದುಮಗನ ಜಾಗದಲ್ಲಿ ಲಾಲು ಫೋಟೋ- ದಂಗಾದ ಮುಖಂಡರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + seven =
Remember me
