ನವದೆಹಲಿ:ಇಂದು 26/11. ಅಂದರೆ ಮುಂಬೈ ದಾಳಿಗೆ ಇಂದಿಗೆ 12 ವರ್ಷಗಳು. ಈ ಘಟನೆಯನ್ನು 170 ಮಂದಿ ಮೃತಪಟ್ಟಿದ್ದರು.
ಇದಾಗ ಮೇಲೆ 2016ರಲ್ಲಿ ಪಠಾಣಾಕೋಟ್​ ವಾಯುನೆಲೆಯ ಮೇಲೆ ದಾಳಿ ಭೀಕರ ದಾಳಿ ನಡೆದಿತ್ತು. ಇವೆರಡೂ ದಾಳಿಗಳ ಹಿಂದೆ ಇದ್ದದ್ದು ಪಾಕಿಸ್ತಾನದ ಉಗ್ರ ಸಂಘಟನೆಗಳು.
ಆದರೆ ಅಲ್ಲಿಂದ ಇಲ್ಲಿವರೆಗೂ ತನ್ನ ನೆಲದಲ್ಲಿ ಉಗ್ರರಿಗೆ ನೆಲೆಯಿಲ್ಲ ಎಂದು ಪಾಕಿಸ್ತಾನ ಸಾರುತ್ತಲೇ ಬಂದಿದೆ. ಆದರೆ ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸುತ್ತಾ ಬಂದಿರುವ ಸತ್ಯ ಮಾತ್ರ ಎಲ್ಲರಿಗೂ ತಿಳಿದದ್ದೇ.
ಇಂಥ ಪಾಕಿಸ್ತಾನಕ್ಕೆ ಭಾರತ ಮಾತ್ರವಲ್ಲದೇ ಅಮೆರಿಕ ಕೂಡ ಇಂದು ಸವಾಲು ಎಸಿದಿದೆ. ಮುಂಬೈ ದಾಳಿಗೆ 12 ವರ್ಷವಾಗಿರುವ ಇಂದಿನ ದಿನವನ್ನೇ ಇಟ್ಟುಕೊಂಡು ಪಾಕಿಸ್ತಾನಕ್ಕೆ ಸವಾಲು ಹಾಕಿರುವ ಅಮೆರಿಕ ಮತ್ತು ಭಾರತ, ಒಂದು ವೇಳೆ ತನ್ನ ನೆಲದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಅವಕಾಶ ಇಲ್ಲ ಎಂಬುದನ್ನು ಪಾಕಿಸ್ತಾನ ಸಾಬೀತು ಮಾಡಲು ಇದು ಒಳ್ಳೆಯ ಅವಕಾಶ. ಮುಂಬೈ ಭಯೋತ್ಪಾದಕ ದಾಳಿ ಹಾಗೂ ಪಠಾಣ್ ಕೋಟ್ ಉಗ್ರ ದಾಳಿಯ ಹಿಂದಿನ ರೂವಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಿ. ಈ ಮೂಲಕ ಉಗ್ರರಿಗೆ ಪಾಕ್​ನಲ್ಲಿ ಜಾಗ ಇಲ್ಲ ಎನ್ನುವುದನ್ನು ಸಾಬೀತು ಮಾಡಿ ಎಂದು ಉಭಯ ದೇಶಗಳು ಸವಾಲು ಹಾಕಿವೆ.
ಇದನ್ನೂ ಓದಿ:ಕಿತ್ತಳೆ ಬಣ್ಣಕ್ಕೆ ತಿರುಗಿದೆ ಅಮೆರಿಕದ ಆಗಸ: ಹಗಲಲ್ಲೂ ಕತ್ತಲು! ಒಬಾಮಾ ಆತಂಕ
ಭಾರತ, ಅಮೆರಿಕ ಭಯೋತ್ಪಾದಕ ನಿಗ್ರಹ ಕಾರ್ಯಪಡೆ ಜಂಟಿಯಾಗಿ ನೀಡಿರುವ ಪ್ರಕಟಣೆಯಲ್ಲಿ, ನಿಮ್ಮ ನೆಲದಲ್ಲಿ ಭಯೋತ್ಪಾದಕರಿಗೆ ಯಾವುದೇ ಅವಕಾಶ ಇಲ್ಲ ಎಂಬುದನ್ನು ಸಾಬೀತುಪಡಿಸಲು ತಕ್ಷಣವೇ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಅಲ್ಲದೇ 26/11 ಮುಂಬೈ ಹಾಗೂ ಪಠಾಣ್ ಕೋಟ್ ದಾಳಿಯ ರೂವಾರಿಗಳ ವಿರುದ್ಧ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕಾಗಿದೆ ಎಂದು ತಿಳಿಸಿದೆ.
ಆದ್ದರಿಂದ ಇದೀಗ ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ತಮ್ಮ ಮಾತನ್ನು ಸಮರ್ಥನೆ ಮಾಡಿಕೊಳ್ಳಲು ಭಯೋತ್ಪಾದರ ವಿರುದ್ಧ ಯಾವ ರೀತಿಯ ಕ್ರಮ ತೆಗೆದುಕೊಳ್ಳಲಿದ್ದಾರೆ ಕಾದುನೋಡಬೇಕಿದೆ.
26/11 ಘಟನೆಯ ನಂತರ ಭಯೋತ್ಪಾದನೆ ವಿರುದ್ಧ ಭಾರತ ಮತ್ತು ಅಮೆರಿಕ ಜಂಟಿಯಾಗಿ ಹೋರಾಡಲು ನಿರ್ಧರಿಸಿದ್ದವು. ಗಡಿ ಸೇರಿದಂತೆ ಎಲ್ಲಾ ರೀತಿಯ ಭಯೋತ್ಪಾದಕ ಕೃತ್ಯಗಳನ್ನು ಬಲವಾಗಿ ಖಂಡಿಸಲು ಉಭಯ ದೇಶಗಳ ಮಾತುಕತೆ ವೇಳೆ ಪ್ರಸ್ತಾಪಿಸಲಾಗಿತ್ತು. ಅಲ್ಲದೇ ಆಲ್ ಖೈದಾ, ಐಸಿಸ್, ಪಾಕಿಸ್ತಾನ ಮೂಲದ ಲಷ್ಕರ್, ಜೈಷ್ ಎ ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದವು.
ಅಪ್ಪ ಗಿಫ್ಟ್​ ನೀಡಿದ್ದ ವಿಸ್ಕಿ ಬಾಟಲಿ ಮಾರಿ ಮನೆ ಕಟ್ಟಿಸಿದ: ಅಚ್ಚರಿಯಾಯ್ತಾ? ಈ ಸ್ಟೋರಿ ಓದಿ..

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ್ದ ಕರೊನಾ ಸೋಂಕಿತೆ ತಲುಪಿದ್ದು ದೆಹಲಿ! ಆಗಿದ್ದೇನು?

ರಾಮನ ಹಣಕ್ಕೆ ಕನ್ನ ಹಾಕಿದ ಖದೀಮರು: ಲಕ್ಷಾಂತರ ರೂಪಾಯಿ ವಿತ್​ಡ್ರಾ!

ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
